ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!

ಮುಂಡಗೋಡ: ತಾಲೂಕಿನ ಬಾಚಣಕಿಯಲ್ಲಿ ಆರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರೋ ಘಟನೆ ನಡೆದಿದೆ. ಚೇತನಾ ಗುತ್ತೆಪ್ಪ ಸಣ್ಣಮನಿ(32) ನೇಣಿಗೆ ಶರಣಾದ ಗರ್ಭಿಣಿಯಾಗಿದ್ದು ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರೋ ಆರೋಪ ಕೇಳಿ ಬಂದಿದೆ.

ಪತಿ ಗುತ್ತೆಪ್ಪ ಸಣ್ಣಮನಿ ಎಂಬುವವನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಮಕ್ಕಳ ತಾಯಿಯಾಗಿದ್ದ ಚೇತನಾ, ಈಗ ಮತ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದ್ರೆ ಪತಿ ಗುತ್ತೆಪ್ಪ ಮಾನಸಿಕ ಹಾಗೂ ದೈಹಿಕ ಕಿರುಕುಳ‌ನೀಡುತ್ತಿದ್ದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆರೋಪಿಸಲಾಗಿದ್ದು,

ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಪತಿ ಗುತ್ತೆಪ್ಪನನ್ನು ವಶಕ್ಕೆ ಪಡೆದಿದ್ದಾರೆ.

*************************

ಪಬ್ಲಿಕ್ ಫಸ್ಟ್ ನ್ಯೂಸ್
ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿ, ತಾಜಾ ಸುದ್ದಿಗಳನ್ನು ಕ್ಷಣಮಾತ್ರದಲ್ಲೇ ಪಡೆಯಿರಿ..

https://chat.whatsapp.com/KgL6z5JiAvsBtN9kzBSXRD

error: Content is protected !!