ಮುಂಡಗೋಡ:ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ಬೆಳ್ಳಂ ಬೆಳಿಗ್ಗೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೋಮಾಂಸ ಸಾಗಾಟ ಮಾಡುತ್ತಿದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ.

ಟಿಬೇಟಿಯನ್ ಕಾಲೋನಿಗೆ..?
ಇಂದು ಬೆಳಿಗ್ಗೆ, ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು, ಬರೋಬ್ಬರಿ 2 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ. ಜೊತೆಗೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಸಮೇತ ವಾಹನ ಜಪ್ತಿ ಪಡಿಸಿಕೊಂಡಿದ್ದಾರೆ. ಕೇಸು ಜಡೆದಿದ್ದಾರೆ.

ನಿತ್ಯದ ಆಟ..!
ಅಸಲು, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಗೆ ನಿತ್ಯವೂ ಟನ್ನುಗಟ್ಟಲೇ ಗೋಮಾಂಸ ಬಂದು ಬೀಳುತ್ತಿದೆ. ಹುಬ್ಬಳ್ಳಿ, ಬಂಕಾಪುರ, ಸವಣೂರು ಸೇರಿದಂತೆ ಹಲವು ಕಡೆಗಳಿಂದ ಟಾಟಾ ಎಸ್, ಓಮಿನಿಗಳಲ್ಲಿ, ಹಳೆಯ ಕಾರುಗಳಲ್ಲಿ ಸ್ಕೂಟಿಗಳಲ್ಲಿ ಕ್ವಿಂಟಾಲುಗಟ್ಟಲೇ ಗೋಮಾಂಸ ತಂದು ಬಿಕರಿ ಮಾಡಿಕೊಂಡು ಹೋಗ್ತಿದಾರೆ ಅಕ್ರಮಿಗಳು. ನಿಜ ಅಂದ್ರೆ ಇದೇಲ್ಲ ಗಪ್ ಚುಪ್ ಆಗೇ, ಬೆಳಕು ಹರಿಯುವುದೊರಳಗಾಗಿ ಕೈ ಬದಲಾಯಿಸಿ ಆಗಿರುತ್ತದೆ. ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕುವುದೇ ಇಲ್ಲ. ಹೀಗಾಗಿ, ಅಕ್ರಮಿಗಳ ಅಡ್ಡ ಕಸುಬಿಗೆ ಬ್ರೇಕ್ ಹಾಕಲು ಪೊಲೀಸರಿಗೂ ಕಷ್ಟ ಸಾಧ್ಯವಾಗ್ತಿದೆ.

ಒಟ್ನಲ್ಲಿ, ಟಿಬೇಟಿಯನ್ ಕಾಲೋನಿಗೆ ಕಳ್ಳ ಬೆಕ್ಕಿನಂತೆ ನುಸುಳುವ ಗೋಮಾಂಸ ದಂಧೆಕೋರರಿಗೆ ಬೆಳ್ಳಂ ಬೆಳಿಗ್ಗೆ ಪೊಲೀಸರು ಶಾಕ್ ನೀಡಿದ್ದಾರೆ. ಆದ್ರೆ, ಇಂತಹ ಅಕ್ರಮ ಕಂಡಾಗ ನಾವು,ನೀವುಗಳು ಪೊಲೀಸರಿಗೆ ತಕ್ಷಣವೇ ಮಾಹಿತಿ‌ ನೀಡಬೇಕಿದೆ. ಅಂದಾಗ ಮಾತ್ರ ತಾಯಿಯಂತೆ ಪೂಜಿಸೋ ಗೋಮಾತೆಯ ರಕ್ಷಣೆ ಸಾಧ್ಯವಿದೆ. ಅಲ್ಲವೇ..?

error: Content is protected !!