ಮುಂಡಗೋಡ: ತಾಲೂಕಿನ ಇಂದೂರು ಹೊರವಲಯದ ಶರೀಪ ಗೋವಿಂದ ದೇವಸ್ಥಾನದ ಹತ್ತಿರ, ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದೂರು ಗ್ರಾಮದ ಬೈಕ್ ಸವಾರ ಮಲ್ಲೇಶ್ ದೊಡ್ಡಮನಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ, ಮುಂಡಗೋಡ ಕಡೆಯಿಂದ ಇಂದೂರು ಕಡೆಗೆ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಇಂದೂರು ಪಂಚಾಯತಿಯಲ್ಲಿ ಪಕ್ಷಾಂತರ, ಗ್ರಾಪಂ ಸದಸ್ಯ ರಾಜೂ ಹರಿಜನ್ ಬಿಜೆಪಿ ಸೇರ್ಪಡೆ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಸದಸ್ಯ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ರಾಜೂ ಫಕ್ಕೀರವ್ವ ಹರಿಜನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದ್ರೊಂದಿಗೆ, ಗ್ರಾಮ ಪಂಚಾಯತಿ ಮಟ್ಟದ ರಾಜಕೀಯ ಮೇಲಾಟ ಮತ್ತೊಂದು ಮಗ್ಗಲಿಗೆ ಹೊರಳಿದೆ. ಅಧ್ಯಕ್ಷರ ಬದಲಾವಣೆ ಎಫೆಕ್ಟ್..? ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಅನ್ನಪೂರ್ಣ ಬೆಣ್ಣಿ ಮೇಡಂ ಒಪ್ಪಂದದಂತೆ ತಮ್ಮ ಪದವಿಗೆ ರಾಜೀನಾಮೆ ನೀಡಲು ಕೊಂಚ ತಡ ಮಾಡಿದ್ರು. ಹೀಗಾಗಿ, ತಮ್ಮದೇ ಪಕ್ಷದ ಸದಸ್ಯರಲ್ಲಿ ಸಾಕಷ್ಟು ತಳಮಳಕ್ಕೆ ಕಾರಣವಾಗಿತ್ತು. ಯಾವಾಗ, ಅನ್ನಪೂರ್ಣ ಬೆಣ್ಣಿ ಮೇಡಂ ರಾಜೀನಾಮೆ ನೀಡಲು “ನಾಳೆ, ನಾಳೆ” ಅಂತಾ ಮಾತು ಮುಂದಕ್ಕೆ ಹಾಕಲಾರಂಭಿಸಿದ್ದರೋ ಅವಾಗ್ಲೇ ಇಂದೂರು ಗ್ರಾಮ ಪಂಚಾಯತಿಯಲ್ಲಿ ಒಳಗೊಳಗೆ ಅಚ್ಚರಿಯ ಬೆಳವಣಿಗೆ ನಡೆದು ಆಗಿದ್ದವು. ಅದೇನೇ ಆಗ್ಲಿ ಬದಲಾವಣೆ ಮಾಡೇ ಬಿಡಬೇಕು ಅನ್ನೋ ಗಟ್ಟಿ ನಿರ್ಧಾರ ಕೈಗೊಳಗಳಲಾಗಿತ್ತಂತೆ. ಹೀಗಾಗಿ, ಅವಿಶ್ವಾಸಕ್ಕೂ ರೆಡಿಯಾಗಿದ್ದರು ಉಳಿದ ಸದಸ್ಯರು. ಆಪರೇಶನ್..? ಈ ಕಾರಣಕ್ಕಾಗೇ ಕಾಂಗ್ರೆಸ್ ಬೆಂಬಲಿತ ಒಂದಿಬ್ಬರು ಸದಸ್ಯರನ್ನು ಮಾತನಾಡಿಸಿಯೂ ಆಗಿತ್ತಂತೆ....
ನಿರಂತರ ಮಳೆಗೆ ಬಾಚಣಕಿ ಜಲಾಶಯ ಭರ್ತಿ, ರೈತರಲ್ಲಿ ಸಂತಸ..!
ಮುಂಡಗೋಡ: ತಾಲೂಕಿನ ಬಾಚಣಕಿ ಜಲಾಶಯ ಭರ್ತಿಯಾಗಿದೆ. ನಿರಂತರವಾಗಿ ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ಬಾಚಣಕಿ ಜಲಾಶಯ ಭರ್ತಿಯಾಗಿದ್ದು, ಉಬ್ಬು ಬಿದ್ದಿದೆ. ಹೀಗಾಗಿ, ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನು ಬಾಚಣಕಿ ಜಲಾಶಯ ಬಾಚಣಕಿ, ಮಜ್ಜಿಗೇರಿ, ಇಂದೂರು, ಕೊಪ್ಪ, ಇಂದಿರಾನಗರ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಜೀವನಾಡಿಯಾಗಿದೆ. ಹೀಗಾಗಿ, ಸದ್ಯ ಜಲಾಶಯ ಭರ್ತಿಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನು, ಜಲಾಶಯ ಭರ್ತಿ ಹಿನ್ನೆಲೆ ನಿತ್ಯವೂ ಪ್ರವಾಸಿಗರು ಬರುತ್ತಿದ್ದಾರೆ. ಅದ್ರಲ್ಲೂ ಟಿಬೇಟಿಗರು ಈ ಜಲಾಶಯದಲ್ಲಿ ಬಂದು ಮೋಜು ಮಸ್ತಿಮಾಡುತ್ತಿದ್ದಾರೆ.
ಉಕ್ಕಿ ಹರಿದ ಅಘನಾಶಿನಿ ಕುಮಟಾ ತಾಲೂಕಿನಲ್ಲಿ ಪ್ರವಾಹ, 70 ಕುಟುಂಬಗಳ ಸ್ಥಳಾಂತರ..!
ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆಗೆ ಕುಮಟಾ ತಾಲೂಕಿನ ಅಘನಾಶಿನಿ ನದಿ ತುಂಬಿ ಹರಿಯುತ್ತಿರುವುದರಿಂದ ಕೋನಳ್ಳಿ, ಗುಡ್ನಕಟ್ಟಾ ಮತ್ತು ಮೂರೂರಿನಲ್ಲಿ ನೆರೆ ಸೃಷ್ಟಿಯಾಗಿದೆ. ಈ ಭಾಗದ 70 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ನದಿ ಇಕ್ಕೆಲಗಳಲ್ಲಿರುವ ಇನ್ನಷ್ಟು ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ್ದರಿಂದ ಕುಮಟಾ ತಾಲೂಕಿನ ಅಘನಾಶಿನಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಅಪಾಯದ ಮಟ್ಟದಲ್ಲೇ ಹರಿಯಲಾರಂಭಿಸಿದೆ. ಇನ್ನು ಹೊನ್ನಾವರ ತಾಲೂಕಿನ ಗುಂಡಬಾಳ , ಹಡಿನಬಾಳ , ಸಾಲಕೋಡು ಭಾಗದಲ್ಲಿ ಸಹ ಶರಾವತಿ ನದಿಯಿಂದ ನೆರೆ ಆವರಿಸಿದೆ.
ಮಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಫೈರಿಂಗ್, ನಟೋರಿಯಸ್ ರೌಡಿಶೀಟರ್ ಮೇಲೆ ದಾಳಿ..!
ಮಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿದೆ. ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಿದ್ದಾರೆ. 15ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್, ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ, ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಸದ್ಯ ಬಂಧಿಸಿದ್ದ ಪೊಲೀಸರು ಪ್ರಕರಣವೊಂದರ ಮಹಜರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ.
ಮುಂದುವರೆದ ರಾಜೀನಾಮೆ ಪರ್ವ, ನಾಗನೂರು ಗ್ರಾಪಂ ಅಧ್ಯಕ್ಷ ಸುನಿಲ್ ಸಳಕೆ ರಾಜೀನಾಮೆ..!
ಮುಂಡಗೋಡ: ತಾಲೂಕಿನ ನಾಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಇದ್ರೊಂದಿಗೆ, ಇನ್ನೇನು ಅವಿಶ್ವಾಸ ನಿರ್ಣಯಕ್ಕೆ ವೇದಿಕೆ ರೆಡಿ ಮಾಡಿಕೊಂಡಿದ್ದ ಸದಸ್ಯರಿಗೆ ಅಧ್ಯಕ್ಷರ ರಾಜೀನಾಮೆಯಿಂದ ಬೇಗುದಿ ತಣ್ಣಗಾದಂತಾಗಿದೆ. ಬಿಜೆಪಿ ತಾಲೂಕಾ ಮುಖಂಡರ ಹಾಗೂ ಸಚಿವ ಶಿವರಾಮ ಹೆಬ್ಬಾರ ಅವರ ಮಾತಿಗೆ ಒಪ್ಪಿ, ತಮ್ಮ ಸ್ವ ಇಚ್ಛೆಯಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸುನೀಲ್ ವಾಗು ಸಳಕೆ ಅವರು ಶನಿವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿ ಆರ್. ದೇವರಾಜ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಈ ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಯಲ್ಲಪ್ಪ ಭದ್ರಾಪೂರ, ಜಿಲ್ಲಾ ಯುವ ಮೋರ್ಚಾ ಸದಸ್ಯ ವೈ.ಪಿ. ಭುಜಂಗಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದೇವು ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು.
ಕೊಪ್ಪದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕ್ಷೌರಿಕ..!
ಮುಂಡಗೋಡ:ತಾಲೂಕಿನ ಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಶ್ರೀನಿವಾಸ್ ನರಸಿಂಹ ಬಾರಬಾರ್ (45) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮದ್ಯಾನ ಕೊಪ್ಪ ಗ್ರಾಮದ ತನ್ನ ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪ ಗ್ರಾಮದಲ್ಲೇ ಹೇರ್ ಕಟ್ಟಿಂಗ್ ಸಲೂನ್ ನಡೆಸುತ್ತಿದ್ದ ಶ್ರೀನಿವಾಸ್, ಇಂದು ಮದ್ಯಾಹ್ನ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುನಗುಂದ ಸೊಸೈಟಿ ಅಧ್ಯಕ್ಷರಾಗಿ ಶಂಕ್ರಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಈರಪ್ಪ ಯಲಿವಾಳ ಅವಿರೋಧ ಆಯ್ಕೆ..!
ಮುಂಡಗೋಡ: ತಾಲೂಕಿನ ಹುನಗುಂದ ವೀರೇಶ್ವರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಂಕ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದ್ರಂತೆ ಉಪಾಧ್ಯಕ್ಷರಾಗಿ ಈರಪ್ಪ ಯಲಿವಾಳ ಆಯ್ಕೆಯಾಗಿದ್ದಾರೆ. ಇಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು. ಅಂದಹಾಗೆ, ಈ ಹಿಂದೆ ಅಧ್ಯಕ್ಷರಾಗಿದ್ದ ಅಬ್ದುಲ್ ರೆಹಮಾನ್ ಹಕೀಂ ಹಾಗೂ ಉಪಾಧ್ಯಕ್ಷರಾಗಿದ್ದ ಪರಶುರಾಮ್ ತಳವಾರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಆಯ್ಕೆ ನಡೆಯಿತು. ಈ ವೇಳೆ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್, ಮಾಜಿ ಅಧ್ಯಕ್ಷ ಸಿದ್ದಪ್ಪ ಹಡಪದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂದೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ, ಕೊನೆಗೂ ಬಗೆಹರಿದ ಗೊಂದಲ..!
ಮುಂಡಗೋಡ: ತಾಲೂಕಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ವಿಚಾರ ಕೊನೆಗೂ ಬಗೆ ಹರಿದಂತಾಗಿದೆ. ಕೊಟ್ಟ ಮಾತಿನಂತೆ ಇಂದು ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ ನೀಡಿದ್ದಾರೆ. ಅದ್ರಂತೆ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಅಧ್ಯಕ್ಷ, ಉಪಾಧ್ಯಕ್ಷರು ಪಕ್ಷದ ತೀರ್ಮಾನದಂತೆ ರಾಜೀನಾಮೆ ನೀಡಿದ್ದಾರೆ. ಅಂದಹಾಗೆ, ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ಕುರಿತು ಸಾಕಷ್ಟು ಚರ್ಚೆಗಳಾಗಿದ್ದವು. ಸಾಕಷ್ಟು ಬಾರಿ ಸಭೆಗಳು ನಡೆದಿದ್ದವು. ಒಪ್ಪಂದದಂತೆ 15 ತಿಂಗಳ ಅವಧಿಗಷ್ಟೇ ಅಧ್ಯಕ್ಷ ಪದವಿ ದಕ್ಕಿಸಿಕೊಂಡಿದ್ದ ಅನ್ನಪೂರ್ಣ ಬೆಣ್ಣಿ, 15 ತಿಂಗಳ ನಂತರದಲ್ಲಿ ಅಧಿಕಾರ ಹಸ್ತಾಂತರಿಸಬೇಕು ಅನ್ನೋ ಒಡಂಬಡಿಕೆಯಾಗಿತ್ತು. ಆದ್ರೆ, 15 ತಿಂಗಳು ಕಳೆದ ನಂತರ ಅಧಿಕಾರ ಹಸ್ತಾಂತರಕ್ಕೆ ಕೊಂಚ ಗೊಂದಲ ಶುರುವಾಗಿತ್ತು. ಹೀಗಾಗಿ, ಖುದ್ದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೊಂದಲ ಬಗೆ ಹರಿಸಲು ಪ್ರಯತ್ನಿಸಿದ್ದರು. ಪರಿಣಾಮ, ಸದ್ಯ ಅಧ್ಯಕ್ಷರು ರಾಜೀನಾಮೆ ನೀಡಿದ್ದು ಗೊಂದಲ ಬಗೆ ಹರಿದಂತಾಗಿದೆ. ಯಾರಾಗ್ತಾರೆ ಮುಂದಿನ...
ಉತ್ತರ ಕನ್ನಡದ ಮಳೆಹಾನಿ ವೀಕ್ಷಣೆ ಪ್ರವಾಸ ರದ್ದುಗೊಳಿಸಿದ್ರಾ ಸಿಎಂ..? ಉಡುಪಿಯಿಂದಲೇ ಇಂದು ವಾಪಸ್..?
ಕಾರವಾರ: ಮಳೆಹಾನಿ ಪರಿಶೀಲನೆಗಾಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸದ್ಯ ಉಡುಪಿ ಜಿಲ್ಲೆಯಲ್ಲಿದ್ದು, ಈ ಮಧ್ಯೆ ಭಟ್ಕಳ ಪ್ರವಾಸ ರದ್ದುಗೊಳಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಕಾರಣಾಂತರಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರವಾಸವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಭಾರೀ ಮಳೆಯ ಕಾರಣಕ್ಕೆ ರಸ್ತೆ ಮಾರ್ಗವಾಗಿ ಓಡಾಡುವುದು ಕಷ್ಟ ಒಂದು ಸ್ಥಳಕ್ಕಾಗಿ ಅಷ್ಟು ದೂರ ಪ್ರವಾಸ ಬೇಡ, ಅಲ್ಲಿನ ಮಳೆಹಾನಿ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂದು ಇಡೀ ದಿನ ಉಡುಪಿಯಲ್ಲಿಯೇ ತಂಹಲಿರುವ ಸಿಎಂ, ಅಲ್ಲಿಯೇ ಪರಿವೀಕ್ಷಣೆ ನಡೆಸಲಿದ್ದಾರೆ. ಮುಂದಿನಬಾರಿ ಬಂದಾಗ ಕಾರವಾರ, ಉತ್ತರಕನ್ನಡ ಜಿಲ್ಲೆಯ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ನಿನ್ನೆ ರಾತ್ರಿ ಉಡುಪಿಗೆ ಆಗಮಿಸಿರುವ ಸಿಎಂ ಬೊಮ್ಮಾಯಿ, ಜಿಲ್ಲೆಯಲ್ಲಿ ಇಂದು ನೆರೆ ಪ್ರವಾಸ ಕೈಗೊಳ್ಳಲಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ನೆರೆ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.