ಇಂದೂರು ಪಂಚಾಯತಿಯಲ್ಲಿ ಪಕ್ಷಾಂತರ, ಗ್ರಾಪಂ ಸದಸ್ಯ ರಾಜೂ ಹರಿಜನ್ ಬಿಜೆಪಿ ಸೇರ್ಪಡೆ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ‌ ಪಂಚಾಯತಿ ಸದಸ್ಯ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ರಾಜೂ ಫಕ್ಕೀರವ್ವ ಹರಿಜನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದ್ರೊಂದಿಗೆ, ಗ್ರಾಮ ಪಂಚಾಯತಿ ಮಟ್ಟದ ರಾಜಕೀಯ ಮೇಲಾಟ ಮತ್ತೊಂದು ಮಗ್ಗಲಿಗೆ ಹೊರಳಿದೆ.

ಅಧ್ಯಕ್ಷರ ಬದಲಾವಣೆ ಎಫೆಕ್ಟ್..?
ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಅನ್ನಪೂರ್ಣ ಬೆಣ್ಣಿ ಮೇಡಂ ಒಪ್ಪಂದದಂತೆ ತಮ್ಮ ಪದವಿಗೆ ರಾಜೀನಾಮೆ ನೀಡಲು ಕೊಂಚ ತಡ ಮಾಡಿದ್ರು. ಹೀಗಾಗಿ, ತಮ್ಮದೇ ಪಕ್ಷದ ಸದಸ್ಯರಲ್ಲಿ ಸಾಕಷ್ಟು ತಳಮಳಕ್ಕೆ ಕಾರಣವಾಗಿತ್ತು. ಯಾವಾಗ, ಅನ್ನಪೂರ್ಣ ಬೆಣ್ಣಿ ಮೇಡಂ ರಾಜೀನಾಮೆ ನೀಡಲು “ನಾಳೆ, ನಾಳೆ” ಅಂತಾ ಮಾತು ಮುಂದಕ್ಕೆ ಹಾಕಲಾರಂಭಿಸಿದ್ದರೋ ಅವಾಗ್ಲೇ ಇಂದೂರು ಗ್ರಾಮ ಪಂಚಾಯತಿಯಲ್ಲಿ ಒಳಗೊಳಗೆ ಅಚ್ಚರಿಯ ಬೆಳವಣಿಗೆ ನಡೆದು ಆಗಿದ್ದವು. ಅದೇನೇ ಆಗ್ಲಿ ಬದಲಾವಣೆ ಮಾಡೇ ಬಿಡಬೇಕು ಅನ್ನೋ ಗಟ್ಟಿ ನಿರ್ಧಾರ ಕೈಗೊಳಗಳಲಾಗಿತ್ತಂತೆ. ಹೀಗಾಗಿ, ಅವಿಶ್ವಾಸಕ್ಕೂ ರೆಡಿಯಾಗಿದ್ದರು ಉಳಿದ ಸದಸ್ಯರು.

ಆಪರೇಶನ್..?
ಈ ಕಾರಣಕ್ಕಾಗೇ ಕಾಂಗ್ರೆಸ್ ಬೆಂಬಲಿತ ಒಂದಿಬ್ಬರು ಸದಸ್ಯರನ್ನು ಮಾತನಾಡಿಸಿಯೂ ಆಗಿತ್ತಂತೆ. ಕೊನೆಗೆ, ನಾನು ಬೆಂಬಲ ಕೊಡ್ತಿನಿ ಅಂತಾ ಮುಂದೆ ಬಂದಿದ್ದವರು ಇದೇ ರಾಜೂ ಫಕ್ಕೀರವ್ವ ಹರಿಜನ್. ಆದ್ರೆ, ಅವತ್ತು ಲೇಟಾದ್ರೂ ಕೂಡ ಅನ್ನಪೂರ್ಣ ಬೆಣ್ಣಿ ಮೇಡಂ, ಕೊಟ್ಟ ಮಾತಿನಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ, ಅವಿಶ್ವಾಸ, ಪಕ್ಷಾಂತರದ ಒಳ ಮಸಲತ್ತುಗಳು ಅಷ್ಟಕ್ಕೇ ತಣ್ಣಗಾಗಿದ್ದವು.

ಒಟ್ನಲ್ಲಿ, ಇಂದೂರು ಗ್ರಾಮ ಪಂಚಾಯತಿ ರಾಜಕೀಯದಲ್ಲಿ ಈಗ ಪಕ್ಷಾಂತರದ ಗುಂಗು ಶುರುವಾಗಿದೆ. ಈ ಮೂಲಕ ಮುಂದಿನ ಜಿಲ್ಲಾ‌ ಪಂಚಾಯತ ಚುನಾವಣೆಗೆ ಇಂದೂರು ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿಗೊಳ್ಳುತ್ತಿರೋದಂತೂ ಸತ್ಯ.

error: Content is protected !!