ಮುಂಡಗೋಡ: ತಾಲೂಕಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ವಿಚಾರ ಕೊನೆಗೂ ಬಗೆ ಹರಿದಂತಾಗಿದೆ. ಕೊಟ್ಟ ಮಾತಿನಂತೆ ಇಂದು ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ ನೀಡಿದ್ದಾರೆ. ಅದ್ರಂತೆ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಒಪ್ಪಂದದಂತೆ 15 ತಿಂಗಳ ಅವಧಿಗಷ್ಟೇ ಅಧ್ಯಕ್ಷ ಪದವಿ ದಕ್ಕಿಸಿಕೊಂಡಿದ್ದ ಅನ್ನಪೂರ್ಣ ಬೆಣ್ಣಿ, 15 ತಿಂಗಳ ನಂತರದಲ್ಲಿ ಅಧಿಕಾರ ಹಸ್ತಾಂತರಿಸಬೇಕು ಅನ್ನೋ ಒಡಂಬಡಿಕೆಯಾಗಿತ್ತು. ಆದ್ರೆ, 15 ತಿಂಗಳು ಕಳೆದ ನಂತರ ಅಧಿಕಾರ ಹಸ್ತಾಂತರಕ್ಕೆ ಕೊಂಚ ಗೊಂದಲ ಶುರುವಾಗಿತ್ತು. ಹೀಗಾಗಿ, ಖುದ್ದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೊಂದಲ ಬಗೆ ಹರಿಸಲು ಪ್ರಯತ್ನಿಸಿದ್ದರು. ಪರಿಣಾಮ, ಸದ್ಯ ಅಧ್ಯಕ್ಷರು ರಾಜೀನಾಮೆ ನೀಡಿದ್ದು ಗೊಂದಲ ಬಗೆ ಹರಿದಂತಾಗಿದೆ.
ಯಾರಾಗ್ತಾರೆ ಮುಂದಿನ ಅಧ್ಯಕ್ಷೆ..?
ಬಹುತೇಕ, ಇನ್ನುಳಿದ ಅವಧಿಗೆ ಇಂದೂರು ಗ್ರಾಮದ ಸದಸ್ಯರನ್ನು ಅಧ್ಯಕ್ಷ ಪದವಿಗೆ ಪ್ರತಿಷ್ಟಾಪಿಸಲು ಒಪ್ಪಂದವಾಗಿದೆ. ಅದ್ರಂತೆ ಉಪಾಧ್ಯಕ್ಷ ಸ್ಥಾನ ಕೊಪ್ಪ ಗ್ರಾಮದ ಸದಸ್ಯರಿಗೆ ಮೀಸಲಿರಿಸಲಾಗಿದೆ. ಹೀಗಾಗಿ, ಅಧ್ಯಕ್ಷರಾಗಿ ಇಂದೂರಿನ ರೇಣುಕಾ ಬಡಿಗೇರ
ಅಥವಾ ಲಕ್ಷ್ಮೀ ಸುರೇಶ್ ಹರ್ತಿ ಇವ್ರ ನಡುವೆ ಜಿದ್ದಾಜಿದ್ದು ಇದೆ. ಆದ್ರೆ ಇವರಿಬ್ಬರಲ್ಲಿ ಯಾರಿಗೆ ಅದೃಷ್ಟ ಒಲಿಯತ್ತೋ ಕಾದು ನೋಡಬೇಕಿದೆ. ಇನ್ನು, ಉಪಾಧ್ಯಕ್ಷರಾಗಿ ಕೊಪ್ಪ ಗ್ರಾಮದ ಕಲ್ಲೇಶಿ ಸುಣಗಾರ ಆಯ್ಕೆಯಾಗೋದು ಬಹುತೇಕ ಖಚಿತವಾದಂತೆ ಆಗಿದೆ.