ಉಕ್ಕಿ ಹರಿದ ಅಘನಾಶಿನಿ ಕುಮಟಾ ತಾಲೂಕಿನಲ್ಲಿ ಪ್ರವಾಹ, 70 ಕುಟುಂಬಗಳ ಸ್ಥಳಾಂತರ..!


ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆಗೆ ಕುಮಟಾ ತಾಲೂಕಿನ ಅಘನಾಶಿನಿ ನದಿ ತುಂಬಿ ಹರಿಯುತ್ತಿರುವುದರಿಂದ ಕೋನಳ್ಳಿ, ಗುಡ್ನಕಟ್ಟಾ ಮತ್ತು ಮೂರೂರಿನಲ್ಲಿ ನೆರೆ ಸೃಷ್ಟಿಯಾಗಿದೆ.

ಈ ಭಾಗದ 70 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ನದಿ ಇಕ್ಕೆಲಗಳಲ್ಲಿರುವ ಇನ್ನಷ್ಟು ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ್ದರಿಂದ ಕುಮಟಾ ತಾಲೂಕಿನ ಅಘನಾಶಿನಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಅಪಾಯದ ಮಟ್ಟದಲ್ಲೇ ಹರಿಯಲಾರಂಭಿಸಿದೆ.

ಇನ್ನು ಹೊನ್ನಾವರ ತಾಲೂಕಿನ ಗುಂಡಬಾಳ , ಹಡಿನಬಾಳ , ಸಾಲಕೋಡು ಭಾಗದಲ್ಲಿ ಸಹ ಶರಾವತಿ ನದಿಯಿಂದ ನೆರೆ ಆವರಿಸಿದೆ.

error: Content is protected !!