ಇಂದೂರು ಬಳಿ ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ..!

ಮುಂಡಗೋಡ: ತಾಲೂಕಿನ ಇ‌ಂದೂರು ಹೊರವಲಯದ ಶರೀಪ ಗೋವಿಂದ ದೇವಸ್ಥಾನದ ಹತ್ತಿರ, ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತವಾಗಿದೆ‌. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಇಂದೂರು ಗ್ರಾಮದ ಬೈಕ್ ಸವಾರ ಮಲ್ಲೇಶ್ ದೊಡ್ಡಮನಿ ಗಾಯಗೊಂಡ ವ್ಯಕ್ತಿಯಾಗಿದ್ದಾ‌ನೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ, ಮುಂಡಗೋಡ ಕಡೆಯಿಂದ ಇಂದೂರು ಕಡೆಗೆ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!