ಮುಂಡಗೋಡ: ಕೊಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಮೆಡಿಕಲ್ ಸ್ನಾತಕೋತ್ತರ ಪದವಿಧರ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ದೇಶವ್ಯಾಪಿ ಮುಷ್ಕರದ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಳೆ ಮುಷ್ಕರ ನಡೆಯುತ್ತಿದೆ. ಆದ್ರೆ ಮುಂಡಗೋಡಿನಲ್ಲಿ ಮಾತ್ರ ಮುಷ್ಕರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಾಳೆ ಶನಿವಾರ ಮುಂಜಾನೆ 6 ಗಂಟೆಯಿಂದ ರವಿವಾರ ಮುಂಜಾನೆ 6 ಗಂಟೆಯವರೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ದಂತ ಚಿಕಿತ್ಸಾ ಕೇಂದ್ರದಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ. ಯಾವುದೇ ಓ.ಪಿ.ಡಿ ಮತ್ತು ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸೇವೆ ಸಲ್ಲಿಸಲಿದ್ದಾರೆ ಅಂತಾ IMA ನಿರ್ಧರಿಸಿದೆ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕಿನಲ್ಲೂ ತಾಲೂಕಾ ಘಟಕದ ಅಧ್ಯಕ್ಷರುಗಳು ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಈ ಕ್ಷಣದವರೆಗೂ ಮುಂಡಗೋಡ ತಾಲೂಕಿನ ಯಾವೊಬ್ಬ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ನಾಳೆ ವೈದ್ಯರ ಮುಷ್ಕರ ಹಿನ್ನೆಲೆ ಸೈಲೆಂಟಾಯ್ತಾ ಮುಂಡಗೋಡಿನ IMA ತಾಲೂಕಾ ಘಟಕ..? ಬೆಂಬಲ ಇದೆಯೋ, ಇಲ್ವೋ..?
ಕಾರವಾರದ ಕಾಳಿ ಸೇತುವೆ ಸುರಕ್ಷಿತ, ಸುಳ್ಳು ಮಾಹಿತಿ ಹರಡಿದವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಕಾರವಾರದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಮೂಡಿಸಿದೆ. ಸದರಿ ವಿಷಯದ ಕುರಿತು ಜಿಲ್ಲಾಡಳಿತವು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಐ.ಆರ್.ಬಿ. ಗೆ ಸೂಚಿಸಿದ್ದು, ಸಂಪೂರ್ಣ ಪರಿಶೀಲನೆಯ ನಂತರ ವೀಡಿಯೊದಲ್ಲಿ ತೋರಿಸಿರುವ ಪ್ರದೇಶವು ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸ್ಲರಿಯ ಅತಿಕ್ರಮಿಸುವಿಕೆ (Concrete Stary Overlapping)ಯಿಂದ ಆಗಿರುವುದು ಎಂದು ಐ.ಆರ್.ಬಿ ದೃಢಪಡಿಸಿದೆ. ಸೇತುವೆಗೆ ಸಂಬಂಧಿಸಿದಂತೆ ಯಾವುದೇ ರಚನಾತ್ಮಕ ಹಾನಿ ಇರುವ ಸಂಭವವಿರುವುದಿಲ್ಲ ಎಂದು ಐ.ಆರ್.ಬಿ ವರದಿ ನೀಡಿದೆ. ಸಾರ್ವಜನಿಕರಲ್ಲಿ ಅನಗತ್ಯ ಭಯವನ್ನು ಉಂಟುಮಾಡುವ ಯಾವುದೇ ವೀಡಿಯೊಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚಿಸಿದೆ. ಇಂತಹ ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಈ ವಿಡಿಯೊವನ್ನು ವೈರಲ್ ಮಾಡಲು ಕಾರಣರಾದವರನ್ನು ಜಿಲ್ಲಾಡಳಿತವು ಸಕ್ರಿಯವಾಗಿ...
ಯಾರಾಗ್ತಾರೆ ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ..?
ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನದ ಆಯ್ಕೆ ಹಿನ್ನೆಲೆ ಅಸಲೀ ಮಜಕೂರಗಳು ಜಾರಿಯಲ್ಲಿವೆ. ಆಗಷ್ಟ 20 ರಂದು ನಡೆಯಲಿರೋ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಎರಡೂ ಪಕ್ಷಗಳಲ್ಲೂ ಒಳಗೊಳಗಿನ ಲೆಕ್ಕಾಚಾರಗಳು ಗರಿಗೆದರಿವೆ. ಇಲ್ಲಿ ಮೇಲ್ನೋಟಕ್ಕೆ ಕೈ ಪಡೆಗೆ ಆಡಳಿತದ ಚುಕ್ಕಾಣಿ ಅನಾಯಾಸವಾಗಿ ದಕ್ಕುವ ಎಲ್ಲಾ ಸಾಧ್ಯತೆಗಳಿದ್ದರೂ ಬಿಜೆಪಿಯ ಒಳಗೊಳಗಿನ ಮಸಲತ್ತುಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಬಹುದೊಡ್ಡ ಗೇಮ್ ಪ್ಲ್ಯಾನ್ “ಕೈ”ಗೆತ್ತಿಗೊಂಡಿದೆ. 19 ಸಂಖ್ಯೆಯ ಆಟ..! ಅಸಲು, 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಸದ್ಯ ಬಿಜೆಪಿಗೆ 7 ಜನ ಗಟ್ಟಿ ಸದಸ್ಯರಿದ್ದಾರೆ. ಇನ್ನುಳಿದಂತೆ ಇಬ್ಬರು ಸದಸ್ಯರು ಅದ್ಯಾಕೋ ಏನೋ ಆಗಷ್ಟ ಇಪ್ಪತ್ತರ ಚುನಾವಣೆ ವರೆಗೂ ಹೇಗೋ ಏನೋ ಅನ್ನೋ ಸ್ಥಿತಿಯಲ್ಲಿದ್ದಾರೆ ಅನ್ನೋ ಮಾತಿದೆ. ಹೀಗಾಗಿ, ಅದ್ಯಾವ ಕಡೆಯಿಂದ ಎಣಿಕೆ ಹಾಕಿದ್ರೂ ಬಿಜೆಪಿಯ ಸಂಖ್ಯಾಬಲ 9+1 ಆಗತ್ತೆ. ಇದ್ರಲ್ಲಿ 7 ಜನ ಕಟ್ಟಾ ಬಿಜೆಪಿಗರು, ಇಬ್ಬರು ಅಸ್ಪಷ್ಟತೆಯ ಹಾದಿಯಲ್ಲಿದ್ದವರು. ಜೊತೆಗೆ ಸಂಸದ ಕಾಗೇರಿಯವರ ಬೆಂಬಲ ಸೇರಿ ಟೋಟಲ್ಲಾಗಿ 10 ಕ್ಕೆ ಬಂದು ನಿಂತಿದೆ ಬಲ.....
ಭಾರೀ ಮಳೆ, ಹುಬ್ಬಳ್ಳಿ ರಸ್ತೆಯ ವಡಗಟ್ಟಾ, ಬಾಚಣಕಿ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು, ಸಂಚಾರ ಅಸ್ತವ್ಯಸ್ತ!
ಮುಂಡಗೋಡ ತಾಲೂಕಿನ ಬಾಚಣಕಿ, ಅರಶಿಣಗೇರಿ, ಹುನಗುಂದ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಮಳೆಗೆ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಕೆಲವು ಕಡೆ ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ. ಶಿರಸಿ- ಹುಬ್ಬಳ್ಳಿ ರಸ್ತೆಯ ಬಾಚಣಕಿ ಡ್ಯಾಂ ಬಳಿ ರಸ್ತೆಯ ಮೇಲೆ ನೀರು ತುಂಬಿ ಜಲಾವೃತವಾಗಿದೆ. ಅಲ್ಲದೇ ವಡಗಟ್ಟಾ ಬಳಿಯೂ ರಸ್ತೆಯ ಮೇಲೆ ನೀರಿ ಹರಿದು ಸಂಚಾರಕ್ಕೆ ಅಡಚಣೆಯಾಗಿದೆ.
“ಹರ್ ಘರ್ ತಿರಂಗಾ” ಪ್ರಯುಕ್ತ ಕಾರವಾರದಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ..!
ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಹರ್ ಘರ್ ತಿರಂಗ” ಕಾರ್ಯಕ್ರಮದ ಅಡಿಯಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ “ಸೈಕ್ಲೊತಾನ್” ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಚಾಲನೆ ನೀಡಿದ್ರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. “ಸೈಕ್ಲೊತಾನ್” ಕಾರ್ಯಕ್ರಮದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಕಾರವಾರ್ ಬೈಸಿಕಲ್ ಕ್ಲಬ್ ನ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?
ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ವ್ಯಕ್ತಿಯೋರ್ವನ ಶವ ದೊರೆತಿದೆ. ಬೆಳ್ಳಂ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸ್ಐ ಪರಶುರಾಮ್ ಟೀಂ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ. ಇನ್ನು ಹೊಂಡದಲ್ಲಿ ಪತ್ತೆಯಾಗಿರೋ ಶವ ಮುಂಡಗೋಡ ಪಟ್ಟಣದ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಅಂತಾ ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಶಂಕಿಸಲಾಗಿದೆ. ಸದ್ಯ ಶವ ಹೊರತೆಗೆಯಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!
ಹಾನಗಲ್: ಟ್ಯ್ರಾಕ್ಟರ್ ಇಂಜಿನ್ ಮತ್ತು ಟ್ರೆಲರ್ ಮಧ್ಯ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹಾನಗಲ್ ತಾಲೂಕಿನ ಆಡೂರ ಗ್ರಾಮದಲ್ಲಿ ನಡೆದಿದೆ. ಬಂಕಾಪೂರ ಗ್ರಾಮದ ಯಲ್ಲಪ್ಪ ಉಳಿವೆಪ್ಪ ವಳಗೇರಿ (40) ಮೃತ ದುರ್ದೈವಿಯಾಗಿದ್ದಾನೆ. ಈತ ಬಂಕಾಪೂರ ಗ್ರಾಮದಿಂದ ಆಡೂರ ಗ್ರಾಮಕ್ಕೆ ಟ್ರ್ಯಾಕ್ಟರ್ ನಲ್ಲಿ ಎಂ.ಸ್ಯಾಂಡ್ ಉಸುಕು ತಂದಿದ್ದ. ಗ್ರಾಮದಲ್ಲಿರುವ ಗುಡ್ಡವನ್ನ ಹತ್ತಿಸುವ ವೇಳೆ ಅವಘಡ ನಡೆದಿದೆ. ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೆಲಕ್ಕೆ ಹಾರಿದ ಪರಿಣಾಮ ಇಂಜಿನ್ ಮತ್ತು ಟ್ರೆಲರ್ ನಡುವೆ ಟ್ರ್ಯಾಕ್ಟರ್ ಚಾಲಕ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿರಸಿ ಸಮೀಪ ಸ್ಕೂಟಿ, ಕಾರು ಅಪಘಾತ, ನಂದಿಗಟ್ಟಾ ಮೂಲದ ಗ್ರಾಪಂ ಕಾರ್ಯದರ್ಶಿ ದಾರುಣ ಸಾವು..!
ಮುಂಡಗೋಡ: ತಾಲೂಕಿನ ನಂದಿಗಟ್ಟಾದ ಮಾರುತಿ ರಾಧಾಪುರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿರಸಿ ಸಮೀಪದ ಕೋಳಿಗಾರ್ ಬಳಿ ನಡೆದ ಸ್ಕೂಟಿ ಹಾಗೂ ಕಾರ್ ನಡುವಿನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿ ರಾದಾಪುರ, ಗುರುವಾರ ಬೆಳಿಗ್ಗೆ ಕರ್ತವ್ಯಕ್ಕಾಗಿ ಆಫೀಸಿಗೆ ತೆರಳುತ್ತಿದ್ದ ವೇಳೆ, ಕೋಳಿಗಾರ ಸಮೀಪ ಸ್ಕೂಟಿ ಹಾಗು ಕಾರು ಮುಖಾಮುಕಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲು ರವಾನಿಸುವ ಸಂದರ್ಭದಲ್ಲೇ ದಾರಿ ಮದ್ಯೆ ಅಸು ನೀಗಿದ್ದಾರೆ.
ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!
ಕಳೆದ ಒಂದು ವಾರದಿಂದ ಮುಂಡಗೋಡ ತಾಲೂಕಿನ ಹುನಗುಂದಕ್ಕೆ ಸಾರಿಗೆ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದೆ. KSRTC ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಗಳಿಂದ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಮುಂಡಗೋಡ ಸೇರಿದಂತೆ ವಿವಿದೆಡೆ ಪ್ರಯಾಣಿಸುವ ನೂರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಹೀಗಾಗಿ, ಗುರುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಬಸ್ ಗಾಗಿ ಪ್ರತಿಭಟನೆ ನಡೆಸಿದ್ರು. ಹುನಗುಂದ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ವಿದ್ಯಾರ್ಥಿಗಳು ಬೆಳಗ್ಗಿನಿಂದಲೂ ಕಾಯ್ದು ಕುಳಿತಿದ್ದರು. ಆದ್ರೆ, ಬಸ್ ಬರಲೇ ಇಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಬಸ್ ಬರದೇ ಇರುವ ಕಾರಣಕ್ಕೆ ವಾಪಸ್ ಮನೆಗೆ ತೆರಳುವ ಅನಿವಾರ್ಯತೆ ಏದುರಾಗಿದೆ. ಹೀಗಾಗಿ ಪೋಷಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಬಸ್ ಗಾಗಿ ಪ್ರತಿಭಟನೆ ನಡೆಸಿದ್ದಾರೆ. KSRTC ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತರಾಟೆಗೆ ಪಡೆದ ಗ್ರಾಮಸ್ಥರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು
ಹಾವೇರಿ: ಪಂಪ್ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕರಬಸಪ್ಪ ಕಡೇನಾಯಕನಹಳ್ಳಿ (50) ಹಾಗೂ ಅವರ ಪುತ್ರ ದರ್ಶನ ಕಡೇನಾಯಕನಹಳ್ಳಿ (26) ಎಂದು ಗುರುತಿಸಲಾಗಿದೆ. ಕರಬಸಪ್ಪ ಮತ್ತು ದರ್ಶನ ಇಬ್ಬರೂ ಸೇರಿಕೊಂಡು ಪಂಪ್ ಸೆಟ್ ದುರಸ್ತಿ ಮಾಡಲು ಮುಂದಾಗಿದ್ದರು. ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಈ ರೀತಿಯ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಹಿಸಿ ಎಂದು ಹೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.