ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಬಸ್ ವ್ಯವಸ್ಥೆಗೆ ಆಗ್ರಹ, ಮುಂಡಗೋಡಿನಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ..!

ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಬಸ್ ವ್ಯವಸ್ಥೆಗೆ ಆಗ್ರಹ, ಮುಂಡಗೋಡಿನಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ..!

ಮುಂಡಗೋಡ: ತಾಲೂಕಿನಲ್ಲಿ ಇದುವರೆಗೂ ಬಸ್ ಮುಖವನ್ನೇ ಕಾಣದ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಇಂದು ಪ್ರತಿಭಟನೆಗಿಳಿದಿದ್ದಾರೆ. ನಮಗೆ ಬಸ್ ಬೇಕೇ ಬೇಕು ಅಂತಾ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.  ಅಂದಹಾಗೆ, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಇದುವರೆಗೂ ಬಸ್ ಸೌಲಭ್ಯ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕು ಅಂದ್ರೆ ಏನಿಲ್ಲವೆಂದರೂ ನಾಲ್ಕೈದು ಕೀ.ಮಿ ನಡೆದುಕೊಂಡೇ ಬರಬೇಕು. ಅಲ್ದೆ ಗ್ರಾಮಸ್ಥರು ಕೂಡ ನಿತ್ಯವೂ ಹುನಗುಂದ ಗ್ರಾಮಕ್ಕೆ ಬಂದು ಬಸ್ ಹಿಡಿಯಬೇಕು. ಇನ್ನು ಮಳೆಗಾಲದಲ್ಲಂತೂ ಈ ಭಾಗದ ಜನ್ರು, ಗ್ರಾಮದಿಂದ ತಾಲೂಕಾ ಕೇಂದ್ರಕ್ಕೆ ಬರಲು ಪರದಾಡುವಂತಾಗುತ್ತದೆ. ಹೀಗಾಗಿ ತಕ್ಷಣವೇ ನಮಗೆ ಬಸ್ ವ್ಯವಸ್ಥೆ ಮಾಡಿ ಅಂತಾ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ವಿ.ಎಸ್.ಪಾಟೀಲ್ ಭೇಟಿ..! ಇನ್ನು ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ, ಮಾಜಿ NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಭೇಟಿ ನೀಡಿದ್ರು. ಪ್ರತಿಭಟನಾ ನಿರತರ ಜೊತೆ...

ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?

ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?

ಶಿರಸಿ: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆಗಳಿಂದ ದಾಳಿಯಾಗಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ. ಪರಿಣಾಮ, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಓರ್ವ ಎಸ್ಡಿಪಿಐ ಮುಖಂಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 3.30ರಿಂದಲೇ ಹಝೀಝ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು ಆದ್ರೆ ಬೆಳ್ಳಂ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಅಝೀಝ್ ಅಬ್ದುಲ್ ಮನೆಗೆ ಅಧಿಕಾರಿಗಳ ತಂಡ ಹೊಕ್ಕಿದೆ. ಒಂದು ಲ್ಯಾಪ್ ಟಾಪ್, 2ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ. ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ವಾಸಿಸುತ್ತಿದ್ದ ಅಝೀಝ್ ನನ್ನು ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ಅಝೀಝ್ ಸಹೋದರ ಎಸ್‌ಡಿಪಿಐ ಪ್ರಾಂತೀಯ ಅಧ್ಯಕ್ಷನಾಗಿರುವ ಮೌಸಿನ್ ಅಬ್ದುಲ್ ಶುಕುರ್ ಹೊನ್ನಾವರ ಎಂಬಾತನನ್ನು ವಶಕ್ಕೆ ಪಡೆಯಲು ಯೋಜನೆ ಹಾಕಲಾಗಿತ್ತು....

ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?

ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?

 ಮುಂಡಗೋಡ: ಪ್ರಿಯ ವೀಕ್ಷಕರೇ, ನಿನ್ನೆ ನಿಮಗೆ ಮುಂಡಗೋಡ ತಾಲೂಕಿನಲ್ಲಿ ಬಡವ್ರಿಗೆ ಹಂಚಿಕೆಯಾಗೋ ಮನೆಗಳಲ್ಲಿ ನಡೆಯುತ್ತಿರೋ ಎತ್ತುವಳಿ ಪುರಾಣದ ಬಗ್ಗೆ ಹೇಳಿದ್ವಿ. ನೊಂದ ಸಂತ್ರಸ್ಥ ಕುಟುಂಬಗಳ ಆರ್ತನಾದ ಕೇಳಿಸಿದ್ವಿ. ಇವತ್ತೂ ಕೂಡ ಅದರದ್ದೇ ಮುಂದುವರಿದ ಭಾಗವಾಗಿ ಅದೊಂದು ಮನಕಲುಕುವ ಹಕೀಕತ್ತು ತಮ್ಮ ಮುಂದೆ ಇಡ್ತಿದಿವಿ. ರೊಕ್ಕ ಗಳಿಸಲೆಂದೇ ಬಾಯ್ತೆರೆದು ಕೂತಿರೋ, ಮನುಷ್ಯತ್ವವನ್ನೇ ಮರೆತಿರೋ ಕೆಲವು ಸರ್ಕಾರಿ ಸಿಬ್ಬಂದಿಗಳು ಹೇಗೇಲ್ಲ ಅಮಾನುಷವಾಗಿ ನಡೆದುಕೊಳ್ತಾರೆ ಅನ್ನೋದನ್ನ ಇವತ್ತು ಹೇಳ್ತಿವಿ.  ವೇದಿಕೆಯಷ್ಟೇ..! ಯಸ್, ನಾವೀಗ ಮುಂಡಗೋಡಿನ ತಹಶೀಲ್ದಾರ್ ಕಚೇರಿಯ ಅವನೊಬ್ಬನ ಗತ್ತು, ಗಮ್ಮತ್ತುಗಳು ಅದೇಷ್ಟು ಬಡವರಿಗೆ ಮಾರಕವಾಗಿದೆ ಅನ್ನೋದನ್ನ ಹೇಳೋಕೆ ಹೊರಟಿದ್ದಿವಿ. ಅಸಲು, ಇಲ್ಲಿ ನಾವು ಏನನ್ನೂ ಹೇಳ್ತಿಲ್ಲ. ಬದಲಾಗಿ ನೊಂದವರೇ ಅಸಲೀ ಹಕೀಕತ್ತುಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ನಮ್ಮದೇನೂ ಇಲ್ಲ. ನೊಂದವರು ಆಡಿರೋ ನೋವಿನ ಕಹಾನಿಗಳನ್ನೇಲ್ಲ ತಮ್ಮ ಮುಂದೆ ಯಥಾವತ್ತಾಗಿ ತೆರೆದಿಡಲು ನಾವು ಜಸ್ಟ್ ವೇದಿಕೆಯನ್ನಷ್ಟೇ ಒದಗಿಸಿದ್ದಿವಿ. ಕಳಕಳಿ..! ನಮ್ಮ ಹೆಮ್ಮೆಯ ದಕ್ಷ ತಹಶೀಲ್ದಾರ್ ಶಂಕರ್ ಗೌಡಿಯವರೇ, ಇದನ್ನೇಲ್ಲ ನೋಡಿದ ಮೇಲೆ ತಾವು ತಮ್ಮ...

ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?

ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?

   ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ ಹಣದಲ್ಲೂ ವ್ಯವಹಾರಕ್ಕಿಳಿದಿದ್ದಾರೆ ಅನ್ನೋದೇ ಬಹುದೊಡ್ಡ ದುರಂತ, ನಾಚಿಗ್ಗೇಡು..! ದಕ್ಷ ತಹಶೀಲ್ದಾರ್..! ಅಸಲು, ನಾವಿಲ್ಲಿ ಒಂದು ವಿಷಯ ತಮಗೇಲ್ಲ ಹೇಳಲೇ ಬೇಕಿದೆ. ಮುಂಡಗೋಡ ತಾಲೂಕಿಗೆ ತಹಶೀಲ್ದಾರ್ ಆಗಿ ಬಂದಿರೋ ಶಂಕರ್ ಗೌಡಿ ನಿಜಕ್ಕೂ ಅಪ್ಪಟ ದಕ್ಷ ಅಧಿಕಾರಿ, ಯಾವತ್ತೂ ತಮ್ಮ ಕಚೇರಿಯಲ್ಲಿ ಬ್ರಷ್ಟರಿಗೆ ಜಾಗವಿಲ್ಲ ಅಂತಾ ಖಡಾಖಂಡಿತ ಆಡಳಿತ ನಡೆಸ್ತಿರೋರು ಇವ್ರು. ಹೀಗಾಗಿನೇ ಇಡೀ ತಾಲೂಕಿನ ಜನ ನೂತನ ತಹಶೀಲ್ದಾರರ ಮೇಲೆ ಸಾಕಷ್ಟು ಭರವಸೆ,...

ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!

ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು. ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ ಗೇಟು, ಸಣ್ಣ ಗೇಟುಗಳು, ಕಬ್ಬಿಣದ ಸಾದಾ ಬೀಮ್ ಗಳು, ಕಬ್ಬಿಣದ ಟ್ರೆಸ್‌ಗಳು, ತಯಾರಿಸುವ ಹಂತದಲ್ಲಿದ್ದ ದೂಡುವ ಗಾಡಿಗಳು, ಕಬ್ಬಿಣದ ಏಣಿಗಳು, ಕಬ್ಬಿಣದ ಲಾಡರಗಳು ಸೇರೊದಂತೆ ಇತರೇ ಕೆಲವು ಕಬ್ಬಿಣದ ಸಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವುಗಳ ಒಟ್ಟೂ ಮೌಲ್ಯ ಸುಮಾರು 1,30,000/- ಆಗಿದೆ ಅಂತಾ ಅಂದಾಜಿಸಲಾಗಿದ್ದು. ಠಾಣೆಗೆ ಸಲ್ಲಿಸಿರೋ ದೂರಿನಲ್ಲಿ ವಿವರಿಸಿದ್ದಾರೆ. ಮುಂಡಗೋಡ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಕಳ್ಳರ ಹೆಡೆಮುರಿ ಕಟ್ಟಲು ಬಲೆ...

ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಸೆ.20 ರಂದು ಶಿಗ್ಗಾವಿ ಸಿಎಂ ನಿವಾಸದ ಎದುರು ಹಕ್ಕೊತ್ತಾಯ- ಮೃತ್ಯುಂಜಯ ಶ್ರೀ ಘೋಷಣೆ..!

ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಸೆ.20 ರಂದು ಶಿಗ್ಗಾವಿ ಸಿಎಂ ನಿವಾಸದ ಎದುರು ಹಕ್ಕೊತ್ತಾಯ- ಮೃತ್ಯುಂಜಯ ಶ್ರೀ ಘೋಷಣೆ..!

 ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಹಕ್ಕೊತ್ತಾಯ ಹಿನ್ನಲೆಯಲ್ಲಿ, ಹಾವೇರಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ನೀಡಿದ್ದಾರೆ‌‌. ಇದೆ ಸೆಪ್ಟೆಂಬರ್ 20 ರಂದು ಶಿಗ್ಗಾವಿಯ ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.   ಶಿಗ್ಗಾವಿಯ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ, ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತದೆ. ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ. ಸದನದ ಒಳಗೆ, ಹೊರಗೆ..! ಇನ್ನು ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿಗಳಿಗೆ ಸಿಎಂ ದ್ರೋಹ..! ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಹೋರಾಟದ ಕಾಲ ಹರಣ ಮಾಡಿದ್ದಾರೆ. ಸಿಎಂ ಅವರು ಪದೇ...

ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!

ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!

ಧಾರವಾಡ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆದಿದೆ. ನಮ್ಮ ಹುಡುಗಿಗೆ ಕಾಡಿಸುತ್ತೀರಾ, ಲೈಂಗಿಕ ದೌರ್ಜನ್ಯ ಎಸಗಿದ್ದಿರಾ ಅಂತಾ ಧಿಡೀರ್ ಜಗಳ ತೆಗೆದ ಮೂವರು ಆರೋಪಿಗಳು ಮನೋಜ್ ಕರ್ಜಗಿ ಹಾಗೂ ಅಯಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮನೋಜ್ ಗುಡದೂರ್, ಆನಂದ ತಳವಾರ್, ಹಾಗೂ ಉದಯ್ ಕೆಲಗೇರಿ ಎನ್ನುವ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಚಾಕುವಿನಿಂದ ಅಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಎನ್ನಲಾಗಿದ್ದು, ಸದ್ಯ ಹಲ್ಲೆಗೊಳಗಾದ ಅಯಾನ್ ಮತ್ತು ಮನೋಜ್ ಕರ್ಜಗಿ ಕಿಮ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಜ್ ಕರ್ಜಗಿ ಸ್ಪಾ ದಲ್ಲಿದ್ದ ಅಯಾನ್ ಎನ್ನುವ ಯುವಕನಿಂದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮಹಿಳೆಯರ ಮಾರಾಟ ಜಾಲ ಸಕ್ರೀಯವಾಗಿದೆ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕಳವಳ..!

ರಾಜ್ಯದಲ್ಲಿ ಮಹಿಳೆಯರ ಮಾರಾಟ ಜಾಲ ಸಕ್ರೀಯವಾಗಿದೆ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕಳವಳ..!

 ಮುಂಡಗೋಡ: ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮಾರಾಟ ಜಾಲ ಸಕ್ರೀಯವಾಗಿದೆ. ನಾವು ಈ ಜಾಲವನ್ನು ಬೇಧಿಸಲು ಸಂಪೂರ್ಣ ಸನ್ನದ್ಧಗೊಳ್ಳುತ್ತೇವೆ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ ಅಂತಾ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ರು. ಮುಂಡಗೋಡಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಪ್ರಮೀಳಾ ನಾಯ್ಡು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರನ್ನು‌ ಮದುವೆ ನೆಪದಲ್ಲಿ ದೂರದ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಮಾರಾಟ ಮಾಡುವ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ರಾಜ್ಯ ಮಹಿಳಾ ಆಯೋಗ ಈ ಕುರಿತು ಸಾಕಷ್ಟು ಜಾಗ್ರತಾ ಕ್ರಮಗಳನ್ನು ಈಗಾಗಲೇ ಪಡೆದುಕೊಂಡಿದೆ. ಪ್ರತೀ ಜಿಲ್ಲೆಗಳಲ್ಲೂ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮಕ್ಕಳು ಮತ್ತು ಮಹಿಳೆಯರ ಮಾರಾಟ ಮತ್ತು ನಾಪತ್ತೆ ಪ್ರಕರಣಗಳಲ್ಲಿ ಎಷ್ಟು ಬೇಗ ದೂರು ದಾಖಲಾಗತ್ತೋ ಅಷ್ಟು ಬೇಗ ಪತ್ತೆ ಕಾರ್ಯಕ್ಕೆ ಅನಕೂಲವಾಗತ್ತೆ. ಹೀಗಾಗಿ, ಅಂತಹ ಪ್ರಕರಣಗಳಲ್ಲಿ ಕೂಡಲೇ ಪೊಲೀಸ್ ಠಾಣೆಗಳಿಗೆ ದೂರು ನೀಡುವುದು ಮುಖ್ಯ ಅಂದ್ರು. ಪ್ರತೀ ಜಿಲ್ಲೆಗಳಲ್ಲೂ ಈ...

ಮುಂಡಗೋಡಿನಲ್ಲಿ ವಿಶ್ವಕರ್ಮ ಜಯಂತಿ ಸರಳ ಉತ್ಸವ..!

ಮುಂಡಗೋಡಿನಲ್ಲಿ ವಿಶ್ವಕರ್ಮ ಜಯಂತಿ ಸರಳ ಉತ್ಸವ..!

ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತ ಹಾಗೂ ಮುಂಡಗೋಡ ತಾಲೂಕ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮ ಭಗವಾನರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಇಲಾಖೆಯ ವತಿಯಿಂದ, ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ, ವಿಶ್ವಕರ್ಮ ಸಮಾಜದ ಶ್ರೀಮತಿ ರೇಣುಕಾ ಬಡಿಗೇರ, ಈಶ್ವರಪ್ಪ ಬಡಿಗೇರ ಇಂದೂರು, ಮೌನೇಶ ಬಡಿಗೇರ ಉಗ್ಗಿನಕೇರಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಇಓ ವೆಂಕಟೇಶ ಪಟಗಾರ “ಏಕಾಗ್ರತೆ ಹಾಗೂ ಒಗ್ಗಟ್ಟಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ”ಎಂದು ಸಮಾಜ ಬಾಂಧವರಿಗೆ ಕಿವಿಮಾತು ಹೇಳಿದರು. ರಾಮಣ್ಣ ಬೆಳ್ಳಾನವರ ಅವರು ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿವಿನಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ರಾಜಕೀಯವಾಗಿ ವಿಶ್ವಕರ್ಮರು ಸಬಲರಾಗಬೇಕು ಎಂದು ಕರೆ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಆರ್ ವಿ ಬಡಿಗೇರ್ ರಾಜಕೀಯ ಶಿಕ್ಷಣದಲ್ಲಿ ಮುಂದಿದ್ದರೆ ಮಾತ್ರ ವಿಶ್ವಕರ್ಮರು ಸಬಲರಾಗಬಲ್ಲರು ಎಂದು...

ಇಂದು “ನಮೋ ಜನ್ಮದಿನ” ಹಡಪದ ಸಮಾಜದಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ..!

ಇಂದು “ನಮೋ ಜನ್ಮದಿನ” ಹಡಪದ ಸಮಾಜದಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ..!

ಮುಂಡಗೋಡ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಡಪದ ಅಪ್ಪಣ್ಣ ಸಮಾಜದಿಂದ ವಿಶೇಷವಾಗಿ ಮೋದಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನಪ್ರಜ್ಞಾ ಅಂಧಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಕ್ಷೌರ ಸೇವೆ ಸಲ್ಲಿಸಲಾಯಿತು. ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ನೇತೃತ್ವದಲ್ಲಿ ಸುಮಾರು 35 ಅಂಧ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು. ಕದಂಬ ಹೇರ್ ಡ್ರೆಸಸ್ ನ ಕ್ಷೌರಿಕ ಬಾಂಧವರು ಅಂಧ ಮಕ್ಕಳಿಗೆ ಬೆಳಿಗಿನಿಂದಲೇ ಕ್ಷೌರ ಮಾಡಿದ್ರು. ನಂತರ ಎಲ್ಲ ಮಕ್ಕಳಿಗೂ ಸ್ನಾನ ಮಾಡಿಸಲಾಯಿತು. ಹತ್ತಾರು ಹಡಪದ ಅಪ್ಪಣ್ಣ ಸಮಾಜದ ಯುವಕರು ಈ ಸೇವೆಯಲ್ಲಿ ಭಾಗಿಯಾಗಿದ್ರು. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಇಡೀ ವಿಶ್ವದ ಬೂಪಟದಲ್ಲಿ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ, ಮೋದಿಯವರ ಜನ್ಮ ದಿನ ನಮಗೇಲ್ಲ ಹಬ್ಬದ ಸಂಭ್ರಮವಾಗಿದೆ ಅಂತಾ ಹಡಪದ ಅಪ್ಪಣ್ಣ ಸಮಾಜದ ಮುಖಂಡ ಮಹೇಶ್ ಹಡಪದ ಖುಶಿ ಹಂಚಿಕೊಂಡರು. ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಚಂದ್ರು,...

error: Content is protected !!