ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ಹೊರಟ ಮಾಜಿ ಸಿಎಂ, ಬಿಜೆಪಿಗೆ ಮರ್ಮಾಘಾತ ಕೊಡೊದು ಫಿಕ್ಸ್..!


ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಳುತ್ತಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಸಮಯ ಕೇಳಿರೋ ಮಾಜಿ ಸಿಎಂ ಶೆಟ್ಟರ್ ಗೆ ಬೆಳಿಗ್ಗೆ 10.30 ಕ್ಕೆ ಬರುವಂತೆ ಕಾಗೇರಿ ತಿಳಿಸಿರೋ ಹಿನ್ನೆಲೆಯಲ್ಲಿ ಶಿರಸಿ ಕಡೆಗೆ ಪ್ರಯಾಣ ಬೆಳಿಸಿದ್ದಾರೆ.


ಮಾಜಿ ಸಿಎಂ ಶೆಟ್ಟರ್ ಹೇಳಿದ್ದಿಷ್ಟು..!
ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ ಬಳಿ ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರಿಗೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಅಂತಾ ತಿಳಿಸಿದ್ದಾರೆ.


ಸ್ಪರ್ಧೆ ಖಚಿತ..!
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ, ಹಿಂದೆ ಸರಿಯಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಆಪ್ಷನ್ ಓಪನ್ ಇದಾವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಅಂದ್ರು. ಕಾಂಗ್ರೆಸ್‌ನ ಮುಖಂಡರು ಯಾರೂ ಸಂಪರ್ಕಿಸಿಲ್ಲ, ಆದರೆ ಪ್ರತಿನಿಧಿ ಕಳಿಸಿದ್ದಾರೆ ಅಂತಾ ಇದೇ ವೇಳೆ ತಿಳಿಸಿದ್ರು.

ಮೋದಿ, ಶಾ ಗೆ ಗೊತ್ತಿಲ್ಲ..!
ಮೋದಿ, ಅಮಿತ್ ಷಾಗೆ ಗ್ರೌಂಡ್ ಲೇವಲ್ ಏನು ನಡೀತಿದೆ ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಅಂತಾ ಅಸಮಾಧಾನ ಹೊರ ಹಾಕಿದ್ರು. ಕೆಲವರ ಹಿತಕ್ಕಾಗಿ ಬಿಜೆಪಿ ಬಲಿ‌ ಕೊಡ್ತಾ ಇದ್ದಾರೆ.
ಹಿರಿಯರಿಗೆ ಗೌರವ ಕೊಡದೆ ಇರುವುದು ಬಿಜೆಪಿಗೆ ಮುಳುವಾಗುತ್ತೆ. ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ..ಟೇಕನ್ ಇಟ್ ಗ್ರ್ಯಾಂಟೆಡ್ ಅನ್ನೋ ಹಾಗೆ ಮಾತಾಡಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ರು.

error: Content is protected !!