ಶಿಗ್ಗಾವಿಯಲ್ಲಿ ರಾಜಕೀಯ ಪ್ರಭಾವಿಗಳ ಕಾರಸ್ಥಾನದಿಂದ ರೈತರು ಕಂಗಾಲಾಗಿದ್ದಾರೆ. ನೂರಾರು ವರ್ಷಗಳಿಂದಲೂ ಇದ್ದ ಸಾರ್ವಜನಿಕ ರಸ್ತೆಯನ್ನು ಒತ್ತು ವರಿ ಮಾಡಿಕೊಂಡಿರೋ ಪ್ರಭಾವಿಗಳು ರೈತರಿಗೆ ಜೀವ ಹಿಂಡ್ತಿದಾರೆ ಅಂತಾ ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ಕಾರಣಕ್ಕಾಗೇ ಚುನಾವಣೆ ಬಹಿಷ್ಕಾರ ಮಾಡುವ ತೀರ್ಮಾನ ಕೈಗೊಂಡಿದ್ದಾರೆ‌. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಅರ್ಪಿಸಿದ್ದಾರೆ.

ಮನವಿಯಲ್ಲೇನಿದೆ..?
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಚಾಕಾಪೂರ-ಕುರ್ಷಾಪುರ ಗ್ರಾಮದ ಪೈಕಿ, ಬಿಸನಳ್ಳಿ ಹೊಟ್ಟಾರ ಕಲ್ಯಾಣ ಗ್ರಾಮಗಳಿಂದ ಹೋಗಿ ಬರಲು 1834 ನೇ ರಿಂದಲೂ ಸಾರ್ವಜನಿಕ ಸರಕಾರಿ ಸರಹದ್ದಿನ ರಸ್ತೆ (ದಾರಿ) ಇದೆ.

ಅಂದಹಾಗೆ, ಈ ರಸ್ತೆಯನ್ನು ಶ್ರೀಮತಿ, ಲಕ್ಷ್ಮೀಬಾಯಿ ಕೋಂ ವಾದಿರಾಜ ಶೆಟ್ಟಿ ಮತ್ತು ಅವರ ಮಗ ನರಹರಿ ವಾದಿರಾಜ ಕಟ್ಟಿ, ಎಂಬುವವರು ತಮ್ಮ ಜಮೀನಿನ ಚಾಕಾಪೂರ ಗ್ರಾಮದ ರಿ.ಸ.ನಂ: 18/1 ರಲ್ಲಿ ಪೆಟ್ರೋಲ್‌ ಬಂಕ್ ನ್ನು 2006 ರಲ್ಲಿ ಸ್ಥಾಪಿಸಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿದೆ. ಹೀಗಿರೋ ಪೆಟ್ರೋಲ್‌ ಬಂಕನ ಪಶ್ಚಿಮ ದಿಕ್ಕಿನಲ್ಲಿ, ಉತ್ತರದಿಂದ ದಕ್ಷಿಣಕಡೆಗೆ ಹೋಗಿರುವ ಚಾಕಾಪೂರ ಹಾಗೂ ಖುರ್ಷಾಪುರ ಸರಕಾರಿ ಸರಹದ್ದಿನ ರಸ್ತೆಯನ್ನು ಅತಿಕ್ರಮಿಸಿ ಅನಧಿಕೃತವಾಗಿ ಪೆಟ್ರೋಲ್‌ ಬಂಕಿನ ಕಂಪೌಂಡ್ ಗೋಡೆಯನ್ನು ಕಟ್ಟಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಹೀಗಾಗಿ, ಈ ರಸ್ತೆಯಿಂದ ರೈತರು ತಮ್ಮ ತಮ್ಮ ಹೊಲಗಳಿಗೆ ಹೋಗಿ ಬರಲು ಬಹಳ ಅಡೆತಡೆ ಮತ್ತು ಕಷ್ಟಕರವಾಗಿರುತ್ತದೆ.

ಈ ಪ್ರಕರಣ ಕುರಿತಾಗಿ ಈ ಹಿಂದೆ ತಹಶೀಲ್ದಾರ ಶಿಗ್ಗಾಂವ ಇವರಿಗೆ ಕಾನೂನು ಕ್ರಮ ಕೈಕೊಳ್ಳಲು ಹಲವಾರು ಬಾರಿ ಮನವಿ ಮಾಡಿತ್ತು. ಆ ಮನವಿಗೆ ತಹಶೀಲ್ದಾರ ಶಿಗ್ಗಾಂವರವರು ಅತಿಕ್ರಮಣ ಜಮೀನನ್ನು (ದಾರಿ) ಯನ್ನು ತೆರವುಗೊಳಿಸಲು ಆದೇಶವನ್ನು ಮಾಡಿದ್ದರು, ಆದರೆ ಶ್ರೀಮತಿ, ಲಕ್ಷ್ಮಿಬಾಯಿ ವಾದಿರಾಜ ಕಟ್ಟಿ ಹಾಗೂ ನರಹರಿ ವಾದಿರಾಜ ಕಟ್ಟಿ ಇವರು ರಾಜಕೀಯ ಒತ್ತಡ ತಂದು ಹೆದರಿಸಿ ಅತಿಕ್ರಮಣ ತೆರವುಗೊಳಿಸದಂತೆ ಹಾಗೂ ನಾನು ಮುಖ್ಯಮಂತ್ರಿಯ ಆಪ್ತನೆಂದು ಬಿಂಬಿಸಿ ಪ್ರಭಾವ ಬೀರಿ ಅದೂ ಅಲ್ಲದೇ ದಬ್ಬಾಳಿಕೆ ಹಾಗೂ ಹೊಡಿ ಬಡಿ ಅಂತಾ ಜನರಿಗೆ ಹೆದರಿಸಿ ಮುಗ್ಧ ರೈತರ ಮೇಲೆ ಧಮ್ಮಿ ಹಾಕಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಅಲ್ಲದೆ ಈ ಕುರಿತು ಪೋಲಿಸರು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಅಂತಾ ರೈತರನ್ನು ದಿಕ್ಕು ತಪ್ಪಿಸಿ ದಾರಿಯನ್ನು ತೆರವುಗೊಳಿಸುವುದನ್ನು ನಿಲ್ಲಿಸಿದ್ದಾರೆ.

ಈ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ತಾವೇ ತಯಾರಿಸಿದ ಹಾತ್ ನಕಾಶ ಉತಾರ ನೀಡಿ, ರೈತರ ಮೇಲೆ ದಾವೆ ಹೂಡಿದ್ದ ಪ್ರಕರಣ ನ್ಯಾಯಾಲಯದಲ್ಲಿ ಈಗಲೂ ಚಾಲ್ತಿ ಇದೆ. ಸದರ ಅತಿಕ್ರಮಣದ ಬಗ್ಗೆ ಮೋಜಣಿ ಇಲಾಖೆಯವರು ಸರ್ವೇ ಮಾಡಿದ್ದಾರೆ. ಅದರ ಪ್ರಕಾರ ಲಕ್ಷ್ಮಿಬಾಯಿ ವಾದಿರಾಜ ಕಟ್ಟಿ ಇವರು 23 ಗುಂಟೆ ಅತಿಕ್ರಮಣ ಮಾಡಿದ್ದಾರೆ ಅಂತಾ ವರದಿ ನೀಡಿರುತ್ತಾರೆ.

ಹೀಗಾಗಿ, ಸಂಬಂಧ ಪಟ್ಟವರಿಗೆ ಅನೇಕ ಸಲ ವಿನಂತಿಸಿ ಅತಿಕ್ರಮಣ ತೆರವುಗೊಳಿಸಿ ರಸ್ತೆಯನ್ನು ಸರಕಾರಕ್ಕೆ ಮುಕ್ತಗೊಳಿಸಿ ರೈತರಿಗೆ ಅನುಕೂಲಮಾಡಿಕೊಡುವಂತೆ ಅನೇಕ ಸಲ ವಿನಂತಿಸಿಕೊಂಡರೂ ಕ್ಯಾರೇ ಅಂದಿಲ್ಲ. ಬದಲಾಗಿ, ರೈತರಿಗೆ ಧಮ್ಮಿ ಹಾಕಿ ದಬ್ಬಾಳಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹಿಂದಿನ ತಹಶೀಲ್ದಾರರು ರೈತರು ಒತ್ತುವರಿ ಮಾಡಿದ ರಸ್ತೆಯನ್ನು ಬೆಳೆ ಸಮೇತ ಅತಿಕ್ರಮಣ ತೆರವುಗೊಳಿಸಿದ್ದಾರೆ. ಮತ್ತು ಲೋಕಾಯುಕ್ತರಿಗೆ ರೈತರು ದೂರು ನೀಡಿದ ಫಲವಾಗಿ ಎನ್.ಹಚ್.4 ನಿಂದ ಅವರ ಕಂಪೌಂಡ ಗೋಡೆಯವರೆಗೆ ಇವರೇ ಒತ್ತುವರಿ ಮಾಡಿದ ರಸ್ತೆಯನ್ನು ತೆರವುಗೊಳಿಸಿದ್ದಾರೆ, ಇದು ಸರ್ಕಾರಿ ರಸ್ತೆ ಅಂತಲೇ ಎರಡು ಕಡೆ ತಹಶೀಲ್ದಾರರು ಅತಿಕ್ರಮಣ ತೆರವುಗೊಳಿಸಿದ್ದಾರೆ. ಆದರೆ ಮಧ್ಯದಲ್ಲಿ ಕಟ್ಟಿದ ಕಂಪೌಂಡ ಗೋಡೆಯನ್ನು ಮಾತ್ರ ತೆರವುಗೊಳಿಸಲು ರಾಜಕೀಯ ಒತ್ತಡದಿಂದ ಹಿಂದೆಟು ಹಾಕಿರುತ್ತಾರೆ. ಸದರಿ ಅತಿಕ್ರಮಣ ರಸ್ತೆಯನ್ನು ತೆರವುಗೊಳಿಸಿದರೆ ರೈತರಿಗೆ ಸಂಚರಿಸಲು ಅನುಕೂಲವಾಗುತ್ತದೆ.

ಉಪವಿಭಾಗಾಧಿಕಾರಿಗಳು ಸವಣೂರು ಹಾಗೂ ಹಿಂದಿನ ತಹಶೀಲ್ದಾರರಾದ ಎಸ್. ಪಿ. ರಾಣೆಯವರಿಗೆ, ಸದರಿ ಅತಿಕ್ರಮಣಗೊಂಡ ರಸ್ತೆಯನ್ನು ತೆರವುಗೊಳಿಸಲು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ, ಹೇಳಿಕೊಂಡರೂ ಸಹಿತ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ. ಏಕೆಂದರೆ ರಾಜಕೀಯ ಒತ್ತಡದಿಂದ ಅದನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ತಹಶೀಲ್ದಾರ ಸಾಹೇಬರು ತೆರವುಗೊಳಿಸಲಿಲ್ಲ ಅಂತಾ ರೈತರು ಆರೋಪಿಸಿದ್ದಾರೆ.

ಹೀಗಾಗಿ, ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಿ, ಅತಿಕ್ರಮಣ ಮಾಡಿದ ಜಮೀನನ್ನು (ರಸ್ತೆಯನ್ನು) ತೆರವುಗೊಳಿಸಿಕೊಡಬೇಕು. ಏಕೆಂದರೆ ಇದು ಸರಕಾರಿ ರಸ್ತೆ, ಸರಕಾರಿ ಜಮೀನು ಇರುತ್ತದೆ, ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಓಡಾಡಲು ಹಾಗೂ ಅವರ ಜಮೀನಿಗೆ ಹೋಗಿ ಬರಲು ತುಂಬಾ ತೊಂದರೆ ಉಂಟಾಗಿದೆ.

ಹೀಗಾಗಿ, ಅತಿಕ್ರಮಣ ಮಾಡಿದ ರಸ್ತೆಯ ಜಮೀನನ್ನು ತೆರವುಗೊಳಿಸಿ ಕೊಡದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವ ತಾಲೂಕಿನ 4-5 ಗ್ರಾಮಗಳ ರೈತರು ಸಾರ್ವಜನಿಕರು, ಮತದಾನವನ್ನು ಬಹಿಷ್ಕಾರ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವರದಿ: ಮಂಜುನಾಥ್ ಪಾಟೀಲ್

error: Content is protected !!