ಸಿಎಂ ವಿರುದ್ಧ ನೆಹರು ಓಲೇಕಾರ್ ಅವಾಚ್ಯ ಪದ ಬಳಕೆ ಹಿನ್ನೆಲೆ, ಶಿಗ್ಗಾವಿಯಲ್ಲಿ ಓಲೇಕಾರ ವಿರುದ್ಧ ಪ್ರತಿಭಟನೆ..!

ಶಿಗ್ಗಾವಿ: ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೆಕಾರ್, ಸಿಎಂ ಬಸವರಾಜ್ ಬೊನ್ಮಾಯಿಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಹೇಳಿಕೆಯನ್ನು ಖಂಡಿಸಿ ಶಿಗ್ಗಾವಿ ಪಟ್ಟಣದಲ್ಲಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ಪ್ರತಿಭಟನೆ ಮತ್ತು, ನೆಹರು ಓಲೆಕಾರ ಅವರ ಪ್ರತಿಕೃತಿ ದಹನ ಮಾಡಲಾಯಿತು.

ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಬಸವರಾಜ ಬೊಮ್ಮಾಯಿ ಅಭಿಮಾನಿಗಳು, ಜನತಾ ಬಜಾರ ವೃತ್ತದವರಗೆ ಸಾಗಿ ನೆಹರು ಓಲೆಕಾರ ಅವರ ಪ್ರತಿಕೃತಿಗೆ ಪಟಾಕಿ ಸುತ್ತಿ, ಸುಡುವ ಮೂಲಕ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.

ಬಿಜೆಪಿ ಮುಖಂಡ, ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಪಕ್ಷದಿಂದ ಟಿಕೆಟ ನೀಡಲಿಲ್ಲಾ ಎಂಬ ಕಾರಣಕ್ಕೆ ವಿಕೃತ ಮನಸ್ಸಿನ, ಹೀನ ಮನಸ್ಥಿತಿಯಿಂದ, ಮಾತನಾಡಿರುವ ಓಲೆಕಾರ ಅವರು ಶಿಗ್ಗಾವಿ, ಸವಣೂರು ಜನತೆಗೆ ಅವಮಾನ ಮಾಡಿದ್ದಾರೆ, ತಾಯಂದಿರಿಗೆ ಅವಮಾನ ಮಾಡಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ಧಗಳಿಂದ ಮಾತನಾಡಿ ಅವಮಾನ ಮಾಡಿರುವ ಅವರ ವಿರುದ್ದ ಸರಕಾರವು ಕಾನೂನು ರೀತಿ ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಇಲ್ಲವಾದಲ್ಲಿ ಹಾವೇರಿಯಲ್ಲಿ ಉಗ್ರಸ್ವರೂಪದ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಶಿಗ್ಗಾವಿ-ಸವಣೂರು ಕ್ಷೇತ್ರದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿ ನೆಹರು ಓಲೆಕಾರ ಅವರ ಅವಾಚ್ಯ ಶಬ್ದಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ರಸ್ಥೆಯಲ್ಲಿ ಪ್ರತಿಭಟನೆ ನಡೆದಿದ್ದರಿಂದ ಎರಡು ಗಂಟೆಗೂ ಹೆಚ್ಚಿನ ಸಮಯ ಸಂಚಾರ ಅಸ್ಯವ್ಯಸ್ತವಾಗಿತ್ತು.

*ವರದಿ ಮಂಜುನಾಥ್ ಪಾಟೀಲ್

error: Content is protected !!