ಶಿಕಾರಿಪುರ: ಯಡಿಯೂರಪ್ಪ ಅವರ ಮಗ ವಿಜಯೇಂದ್ರರವರು ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆಂದು ಬಂದಿದ್ದಾಗ ತಾಂಡಾದ ಜನರಿಂದ ಬಹಿಷ್ಕರಿಸಲಾಯಿತು, ಹಾಗೂ ತಾಂಡಾ ಬಚಾವೋ ಬಿಜೆಪಿ ಹಟಾವೋ ಎಂದು ಘೊಷಣೆ ಕೂಗಲಾಯಿತು.
ಪ್ರಚಾರಕ್ಕೆಂದು ತಾಂಡಾಕ್ಕೆ ಬಂದಿದ್ದ ಬಿ.ವೈ. ವಿಜಯೇಂದ್ರರವರಿಗೆ ತಾಂಡಾದಲ್ಲಿ ಮಹಿಳೆಯರೂ ಸೇರಿದಂತೆ ಯುವಕರು ಧಿಕ್ಕಾರಗಳ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ರು.
ರಾಜ್ಯದ ಎಲ್ಲಾ ಲಂಬಾಣಿ ತಾಂಡಾಗಳಲ್ಲೂ ಈ ರೀತಿ ಮಾಡಿದರೆ ಮಾತ್ರ ನಮ್ಮ ಬಂಜಾರರ ಒಗ್ಗಟ್ಟು ಏನೆಂಬುದನ್ನು ಅರ್ಥೈಸಬಹುದು. ನಮ್ಮ ಏಳಿಗೆಗೆ ಮುಂದಿನ ಪೀಳಿಗೆಗೆ ಕೊಳ್ಳಿ ಇಟ್ಟ ಸರ್ಕಾರಕ್ಕೆ ಗೊತ್ತಾಗುವುದು ಅಂತಾ ಆಕ್ರೋಶ ಹೊರಹಾಕಿದ್ರು. ಒಗ್ಗಟ್ಟು ಪ್ರದರ್ಶನ ಮಾಡಿ ಪ್ರಚಾರ ಮಾಡದಂತೆ ತಡೆ ನೀಡಿದ್ರು.