ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಭಾರೀ ಅನಾಹುತ ಸಂಭವಿಸಿದೆ.. ಘಟಪ್ರಭಾ ನದಿಯಲ್ಲಿ ಮುಳುಗಿ ಮುಂಡಗೋಡ ತಾಲೂಕಿನ ನಾಲ್ವರು ಯುವಕರು ದಾರುಣ ಸಾವು ಕಂಡಿದ್ದಾರೆ. ಇಬ್ಬರು ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮುಂಡಗೋಡ ತಾಲೂಕಿನ ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ(19), ಅಜಯ್ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (19), ಆನಂದ್ ವಿಷ್ಣು ಕೋಕರೆ (20) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇನ್ನು ಘಟನೆಯಲ್ಲಿ ರಾಮಚಂದ್ರ ವಿಷ್ಣು ಕೋಕರೆ, ವಿಠ್ಠಲ್ ಜಾನು ಕೋಕರೆ ನೀರಲ್ಲಿ ಮುಳುಗಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸದ್ಯ ಘಟಪ್ರಭಾದ KHA ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಮೃತ ಯುವಕರು ಘಟಪ್ರಭಾದಲ್ಲಿ ಬಾರ್ ನಲ್ಲಿ ಕೆಲಸಕ್ಕೆಂದು ಹೋಗಿದ್ದರು ಎನ್ನಲಾಗಿದೆ. ಇಂದು ಸ್ನಾನಕ್ಕೆ ನದಿಗೆ ಇಳಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.