ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ: ಪುರಸಭೆ, ವಾರ್ಡ್‌ ನಂ.21 ರ ಜನ ರೋಸಿ ಹೋಗಿದ್ದಾರೆ. ಇಲ್ಲಿ ಆಡಳಿತ ವ್ಯವಸ್ಥೆ ಅನ್ನೋದು ಇದೆಯೊ ಇಲ್ಲವೋ ಅಂತಾ ನಿತ್ಯವೂ ಹಿಡಿಶಾಪ ಹಾಕ್ತಿದಾರೆ. ಯಾಕಂದ್ರೆ, ಈ ವಾರ್ಡಿನ ರಸ್ತೆಗಳು ಇವತ್ತು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆ ಅನ್ನೋದು ಗಬ್ಬೇದ್ದು ಹೋಗಿದೆ. ಈ ಕಾರಣಕ್ಕಾಗಿ ಈ ವಾರ್ಡಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಹೀಗಾಗಿನೇ ಇಲ್ಲಿನ ಜನ ನಮ್ಮ ಕಡೆ ಗಮನವಹಿಸಿ ಅಂತಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಂದಹಾಗೆ, ಇದು ಸಿಎಂ ತವರುಕ್ಷೇತ್ರ..! ನಿಜ, ಶಿಗ್ಗಾವಿಯ ಜಯನಗರದಲ್ಲಿ ಒಳಚರಂಡಿ ಹಾಗೂ ಹಾಳಾದ ರಸ್ತೆಗಳನ್ನು ನೋಡಿದ್ರೆ ಎಂಥವರಿಗೂ ಅಸಹ್ಯ ಅನಿಸತ್ತೆ. ಇಲ್ಲಿನ ಪುರಸಭೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಒಂದೂ ಅರ್ಥ ಆಗ್ತಿಲ್ಲ. ಈ ವಾರ್ಡಿನ ಜನರಿಗೆ ಮೂಲಭೂತ ಸಮಸ್ಯೆಗಳದ್ದೇ ಹಾಸುಹೊಕ್ಕಾಗಿದೆ. ಇನ್ನು ಈ ವಾರ್ಡಿನ ಜನಪ್ರತಿನಿಧಿಗಳು ಅದ್ಯಾಕೆ ಈ ಬಗ್ಗೆ ಗಮನ ಹರಿಸ್ತಿಲ್ವೋ ಯಾರಿಗೂ ತಿಳಿದಿಲ್ಲ. ರೋಗಗಳ ಕಾರ್ಖಾನೆ..! ಅಂದಹಾಗೆ, ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ...

ಮುಂಡಗೋಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕರಿಂದ ಅಧಿಕಾರಿಗಳ ತರಾಟೆ, ಕಿಟ್ ಗಾಗಿ ಎಡತಾಕಿಸೋದು ಸರಿನಾ..?

ಮುಂಡಗೋಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕರಿಂದ ಅಧಿಕಾರಿಗಳ ತರಾಟೆ, ಕಿಟ್ ಗಾಗಿ ಎಡತಾಕಿಸೋದು ಸರಿನಾ..?

 ಮುಂಡಗೋಡ: ಪಟ್ಟಣದಲ್ಲಿ ಇರೋ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿನ ಅಧಿಕಾರಿಗಳ ಮೇಲೆ ನೂರಾರು ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಕಾರ್ಪೆಂಟರ್ ಕೆಲಸದವರು, ಗಾರೆ ಕೆಲಸದವರು ಸೇರಿದಂತೆ ಹಲವರು ಕಾರ್ಮಿಕ ಇಲಾಖೆಯ ತಾಲೂಕಾ ಕಚೇರಿಯ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅಸಮರ್ಪಕ ಕಿಟ್ ಹಂಚಿಕೆ..! ಇನ್ನು, ಕಾರ್ಮಿಕರ ಆರೋಪದಂತೆ, ಈ ತಾಲುಕಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರಂತೆ. ಅರ್ಹರಿಗೆ ಸಿಗಬೇಕಾದ ಕಾರ್ಪೆಂಟರ್ ಕಿಟ್, ಗಾರೆ ಕೆಲಸದ ಕಿಟ್ ಗಳನ್ನು ಸಮರ್ಪಕವಾಗಿ ಹಂಚಿಕೆ‌ ಮಾಡುತ್ತಿಲ್ಲವಂತೆ. ತಿಂಗಳುಟ್ಟಲೇ ಅಲೆದಾಡಿಸಿ ಕಾರ್ಮಿಕರ ಜೀವ ಹಿಂಡುತ್ತಿದ್ದಾರೆ ಅನ್ನೋದು ನೊಂದ ಕಾರ್ಮಿಕರ ಆಕ್ರೋಶ. ಹೀಗಾಗಿ, ಇವತ್ತು ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಕಾರ್ಮಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮರ್ಪಕವಾಗಿ ಕಿಟ್ ಹಂಚಿ..! ಅಸಲು, ಇಲ್ಲಿನ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಹೇಳತೀರದ್ದಾಗಿದೆ. ಕಾರ್ಮಿಕ ಸಚಿವರ ತವರು ಕ್ಷೇತ್ರದಲ್ಲೇ ಇಂತಹ ಬೇಜವಾಬ್ದಾರಿಗಳು ನಡಿತಿರೋದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಿ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!

ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!

ಶಿಗ್ಗಾವಿ: ಅದೊಂದು ಅಪ್ಪಟ ದೇಸೀ ಗ್ರಾಮೀಣ ಕ್ರೀಡೆ.. ಅಲ್ಲಿನ ಅಖಾಡದಲ್ಲಿ ಧೂಳೆಬ್ಬಿಸುವ ಕುಸ್ತಿ ಕಲಿಗಳು ತೊಡೆ ತಟ್ಟಿ ನಿಂತಿದ್ರು. ನೀನಾ..? ನಾನಾ..? ಅಂತಾ ಕಣದಲ್ಲಿ ಕೇಕೆ ಹಾಕಿದ್ರು. ಇದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನಡೆದ ಕುಸ್ತಿ ಹಬ್ಬದ ರಣರೋಚಕ ದೃಷ್ಯಗಳು. ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಕುಸ್ತಿ ಹಬ್ಬ 2022-23 ಸಮಾರೋಪ ಸಮಾರಂಭ ರವಿವಾರ ನಡೆಯಿತು. ವಿವಿಧ ರಾಜ್ಯಗಳ ಕುಸ್ತಿಪಟುಗಳು..! ಅಂದಹಾಗೆ, ಶಿಗ್ಗಾವಿಯ ಕುಸ್ತಿ ಅಖಾಡಕ್ಕೆ ಕರ್ನಾಟಕ ಅಷ್ಟೇ ಅಲ್ಲದೇ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದ್ದರು. ಬರೋಬ್ಬರಿ 1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಹೋರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು. 800 ಕ್ಕೂ ಹೆಚ್ಚು ಪೈಲ್ವಾನರು.‌! ಇನ್ನು ಕುಸ್ಯಿ ಹಬ್ಬದಲ್ಲಿ 800 ಕ್ಕೂ ಅಧಿಕ ಪೈಲ್ವಾನರ ಕಾದಾಟ ಜೋರಾಗಿತ್ತು. 80...

ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ‌ ಮೇಡಂ..!

ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ‌ ಮೇಡಂ..!

ಮುಂಡಗೋಡ ತಾಲೂಕಿನಲ್ಲಿ ಬಹುಶಃ ಇಂದೂರು ಗ್ರಾಮ ಪಂಚಾಯತಿಯ ಪಿಡಿಓ ಮೇಡಂ ನಷ್ಟು ಬ್ಯುಸಿ ಯಾರೂ ಇರಲಿಕ್ಕಿಲ್ವೇನೊ..? ಯಾಕಂದ್ರೆ, ಈ ಮೇಡಮ್ಮು ಇಂದೂರು ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅಂತಾ ಜನ ಹೇಳ್ತಿದಾರೆ. ತಮ್ಮ ಪಂಚಾಯತಿ ಅಡಿಯಲ್ಲಿ ಏನೇನೇಲ್ಲ ನಡೀತಿವೆ ಅನ್ನೊ ಕನಿಷ್ಟ ಖಬರೂ ಇಲ್ಲದಂತಾಗಿದೆ. ಯಾರ್ಯಾರು ಎಲ್ಲೇಲ್ಲಿ ಏನೇನು ಕಾಮಗಾರಿ ಮಾಡ್ತಿದಾರೆ, ಹೇಗೇ ಹೇಗೆ ನಡಿತಿವೆ ಅನ್ನೊ ಉಸಾಬರಿ ಬಹುತೇಕ ಪಿಡಿಓ ಮೇಡಂಗೆ ಇದೆಯೊ ಇಲ್ವೋ ಅರ್ಥವಾಗಬೇಕಿದೆ. ಬರೋದೇ ಮದ್ಯಾಹ್ನ..! ಅಸಲು, ಇಂದೂರು ಗ್ರಾಮ ಪಂಚಾಯತಿಗೆ ಪಿಡಿಓ ಆಗಿ ಬಂದಿರೋ ಮೇಡಮ್ಮು, ದಿನಾಲು ಆಫೀಸಿಗೆ ಬರೋದೇ ಮದ್ಯಾಹ್ನದ ನಂತರ, ಹೀಗಾಗಿ, ಅದೇಷ್ಟೋ ಸಾರ್ವಜನಿಕರು ಬೆಳಿಗ್ಗೆ ಮೇಡಂ ದರ್ಶನಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಸಣ್ಣದೊಂದು ಪ್ರಮಾಣ ಪತ್ರ ಪಡೆಯಲೂ ಅಲೆದಾಡುವ ಅನಿವಾರ್ಯತೆ ಇದೆ. ಹೀಗಾಗಿ, ಕೆಲಸ ಬಿಟ್ಟು ಪಿಡಿಓ ಸಾಹೇಬ್ರ ದರ್ಶನಕ್ಕಾಗಿ ಕಾದು ಕುಳಿತುಕೊಳ್ಳೊ ಹಣೆಬರಹ ನಮ್ಮ‌ ಗ್ರಾಮಸ್ಥರದು. ಹೀಗಾಗಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಕೊಡಬೇಕಿದೆ. ತಾಪಂ ನಲ್ಲಿ ಕೆಲಸವಂತೆ..! ಅಷ್ಟಕ್ಕೂ, ನಿತ್ಯವೂ...

ಟಿಬೇಟಿಯನ್ ಕಾಲೋನಿಯಲ್ಲಿ ಜೇನು ನೋಣಗಳ ದಾಳಿ, 100 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಜೇನು ನೋಣಗಳು..!

ಟಿಬೇಟಿಯನ್ ಕಾಲೋನಿಯಲ್ಲಿ ಜೇನು ನೋಣಗಳ ದಾಳಿ, 100 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಜೇನು ನೋಣಗಳು..!

ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂ.1 ರಲ್ಲಿ ಜೇನು ದಾಳಿಯಾಗಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ಜೇನುನೋಣಗಳ ದಾಳಿಯಾಗಿದೆ. ಪರಿಣಾಮ ಸುಮಾರು 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅದಹಾಗೆ, ಇಂದು ತಾಲೂಕಿನ ಟಿಬೇಟಿಯನ್ ಕಾಲೋನಿ ನಂಬರ್ 1 ರಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ರು. ಈ ವೇಳೆ ಅದು ಹೇಗೋ ಗೊತ್ತಿಲ್ಲ, ಜೇನು ನೋಣಗಳು ದಾಳಿಮಾಡಿವೆ ಎನ್ನಲಾಗಿದೆ. ಪರಿಣಾಮ 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ಪ್ರಕಾಶ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!

ಶಿಗ್ಗಾವಿ: SCP, TSP ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳ ಪಕ್ಷಪಾತ, ರೈತರ ಆಕ್ರೋಶ..!

ಶಿಗ್ಗಾವಿ ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿಗಳಿಂದ ತಾರತಮ್ಯವಾಯ್ತಾ..? SCP ಹಾಗೂ TSP ಯೋಜನೆಯಡಿ ಹಸುಗಳನ್ನು ನೀಡುವಾಗ ಫಲಾನುಭವಿಗಳ ಆಯ್ಕೆಯಲ್ಲಿ ಯಪರಾತಪರಾ ಮಾಡಿದ್ದಾರಾ..? ಹಾಗಂತ ಶಿಗ್ಗಾವಿಯ ಅನ್ನದಾತರು ಆರೋಪಿಸಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ 2022-23 ನೇ ಸಾಲಿನ SCP ಹಾಗೂ TSP ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗಷ್ಟೆ ಮಾನ್ಯತೆ ನೀಡಿ ಹಸುಗಳನ್ನ ಮಂಜೂರಿಸಲು ಆಯ್ಕೆ‌ಮಾಡಿದ್ದಾರೆ. ಹಸುಗಳನ್ನು ನಿಡುವಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ರೈತರು ತಾಲೂಕಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ರು. ಅರ್ಹರಿಗೆ ಸಿಗಲಿ..! ಇನ್ನು ತಾಲೂಕಿನಲ್ಲಿ ಸಾಕಷ್ಟು ಜನ ಅರ್ಹರು ಇದ್ದಾರೆ. ಹೈನುಗಾರಿಕೆಯನ್ನು ನಂಬಿ ಬದುಕುತ್ತಿದ್ದಾರೆ. ಹೀಗಾಗಿ, ಅರ್ಹರಿಗೆ ಹಸುಗಳನ್ನು ನೀಡಬೇಕು ಅಂದಾಗ ಮಾತ್ರ ಯೋಜನೆ ಸದುಪಯೋಗ ಆಗತ್ತೆ. ಹೀಗಾಗಿ, ಅಧಿಕಾರಿಗಳು ಮತ್ತೊಮ್ಮೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಿ ಅಂತಾ ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಬನೂರು ಬೆಳಗಳಿ, ಹಿರೇಮಣಕಟ್ಟಿ, ಮುಗಳಿ ಹಾಗೂ ಹಲವು ಗ್ರಾಮಗಳ ರೈತರು ಭಾಗಿಯಾಗಿದ್ರು. ವರದಿ:ಮಂಜು ಪಾಟೀಲ್, ಶಿಗ್ಗಾವಿ

ಶಿಗ್ಗಾವಿಯ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳ ರೋಮಾಂಚಕ ಕುಸ್ತಿ, ಪಂದ್ಯಾವಳಿಗೆ ಇಂದು ಚಾಲನೆ..!

ಶಿಗ್ಗಾವಿಯ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳ ರೋಮಾಂಚಕ ಕುಸ್ತಿ, ಪಂದ್ಯಾವಳಿಗೆ ಇಂದು ಚಾಲನೆ..!

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಇಂದು ಎಲ್ಲಿ ನೋಡಿದರು ಪೈಲ್ವಾನ್ ರುಗಳ ಜಬರ್ಧಸ್ತ್ ಸಂಚಾರ. ಕಣದಲ್ಲಿ ಧೂಳೆಬ್ಬಿಸಿ ತೊಡೆತಟ್ಟಿ ನಿಂತ ಕುಸ್ತಿ ಕಲಿಗಳ ರೋಮಾಂಚಕ ಪಟ್ಟು. ಜಿಲ್ಲೆವಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದ ನೂರಾರು ಜಗಜಟ್ಟಿಗಳ ಕಾದಾಟ.. ಅಭಿಮಾನಿಗಳ ಕೇಕೆ ಶಿಳ್ಳೆಗಳ ಝೇಂಕಾರ..! ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಐದು ದಿನಗಳ ಕಾಲ‌ ನಡೆಯುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯವನ್ನ ಇದೆ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಇಂದು ಈ ಕುಸ್ತಿ ಪಂದ್ಯಕ್ಕೆ ಸಾಂಕೇತಿಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು. ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು.1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಗೊಡವಿ ಹೊರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು. ಇಂದು 80 ಕೆಜಿ,60 ಕೆಜಿ,30-40 ಕೆಜಿ ತೂಕದ ಪೈಲ್ವಾನರ ಅಖಾಡಕ್ಕೆ ದುಮುಕಿದರು. ಪಿಟ್ ಎಂಡ್ ಪೈನ್ ಆಗಿದ್ದ ಕಟ್ಟುಮಸ್ತಾದ ಪಟುಗಳ ಇದಕ್ಕಾಗಿ ತಿಂಗಳುಗಳ...

ಮುಂಡಗೋಡಿನಲ್ಲಿ ಬೇಡ ಜಂಗಮ ಒಕ್ಕೂಟದ ಜಿಲ್ಲಾ ಯಶಸ್ವಿ ಸಮಾವೇಶ, ಹಲವು ಶ್ರೀಗಳ ಸಾನಿಧ್ಯ, ಆಶೀರ್ವಚನ..!

ಮುಂಡಗೋಡಿನಲ್ಲಿ ಬೇಡ ಜಂಗಮ ಒಕ್ಕೂಟದ ಜಿಲ್ಲಾ ಯಶಸ್ವಿ ಸಮಾವೇಶ, ಹಲವು ಶ್ರೀಗಳ ಸಾನಿಧ್ಯ, ಆಶೀರ್ವಚನ..!

ಮುಂಡಗೋಡ: ದೇಶದಲ್ಲಿ ಮಾನವ ಧರ್ಮ ಹುಟ್ಟಿದಾಗಿನಿಂದ ವೀರಶೈವ ಸಮಾಜ ಹುಟ್ಟಿಕೊಂಡಿದೆ ವೀರಶೈವ ಸನಾತನ ಸಂಸ್ಕೃತ ಪದ ಎಂದು ಶಿರಸಿ ಬಣ್ಣದ ಮಠ ಚೌಕಿಮಠದ ಶಿವಲಿಂಗ ಮಹಾಸ್ವಾಮೀಜಿ ನುಡಿದರು. ಅವ್ರು ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಬೇಡಜಂಗಮ ಒಕ್ಕೂಟದ ಜಿಲ್ಲಾ ಸಮಾವೇಶ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಲ್ಲಿ ಅದ್ಭುತ ಶಕ್ತಿ ಇದೆ. ವೀರಶಕ್ತಿ ಪ್ರಬಲಗೊಳಿಸಿ ಸಮಾಜಕ್ಕೆ ಹಂಚಬೇಕು ಎಂದರು. ಗೋಕರ್ಣ ಹನ್ನೆರಡು ಮಠದ ರೇವಣ್ಣಸಿದ್ದ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ ಪಂಚಾಚಾರ್ಯರು ಪ್ರಪಂಚದ ಗುರುಗಳು. ವೈಮನಸ್ಸು, ದ್ವೇಷ-ಅಸೂಯೆ ಬಿಟ್ಟು ಸಾಮರಸ್ಯ ಜೀವನ ನಡೆಸಬೇಕು. ಜಂಗಮ ಕಾಯಕಗಳ ಬಗ್ಗೆ ನಡೆ-ನುಡಿಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು. ಇನ್ನು ಅಂಬಿಕಾ ನಗರದ ಪಂಚಾಚಾರ್ಯರ ಮಠದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ ಧರ್ಮವನ್ನು ಅರಿತವರೇ ನಿಜವಾದ ಜಂಗಮರು. ಸಂಸ್ಕಾರವಿಲ್ಲದ ವಿದ್ಯೆಗಿಂತ, ವಿದ್ಯೆಯಿಲ್ಲದ ಸಂಸ್ಕಾರವೇ ಲೇಸು. ಭಕ್ತರು ಜಂಗಮರು...

ಹುನಗುಂದದ ಬಳಿ ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ, ಆಸ್ಪತ್ರೆಗೆ ರವಾನೆ..!

ಹುನಗುಂದದ ಬಳಿ ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ, ಆಸ್ಪತ್ರೆಗೆ ರವಾನೆ..!

ಮುಂಡಗೋಡ ತಾಲೂಕಿನ ಹುನಗುಂದ ಅಗಡಿ ರಸ್ತೆಯ, ಸರ್ಕಾರಿ ಪ್ರೌಢಶಾಲೆಯ ಬಳಿ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಹುನಗುಂದ ಗ್ರಾಮದ ರಾಚಯ್ಯ ಬಸಯ್ಯ ಬೆಂಡಿಗೇರಿ(45), ಎಂಬುವವನೇ ಗಾಯಗೊಂಡ ವ್ಯಕ್ತಿಯಾಗಿದ್ದು, ತಲೆಗೆ ಪೆಟ್ಟಾಗಿದೆ. ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ‌ ಮಾಡಿದ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ಸಾಗಿಸಿದ್ದಾರೆ. 108 ಅಂಬ್ಯುಲೆನ್ಸ್ ನಲ್ಲಿ ತಂತ್ರಜ್ಞ ಧನರಾಜ್ ಬೆಳೂರು ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾಮಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉತ್ತರ ಕನ್ನಡದ ಇಬ್ಬರು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆ, ಶಿರಾಲಿಯ ಕುಶಾಲ್, ಕಳಕಿಕಾರೆಯ ಭೂಷಣ್ ಸಾಧನೆ..!

ಉತ್ತರ ಕನ್ನಡದ ಇಬ್ಬರು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆ, ಶಿರಾಲಿಯ ಕುಶಾಲ್, ಕಳಕಿಕಾರೆಯ ಭೂಷಣ್ ಸಾಧನೆ..!

ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಷ್ಟಿತ ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿಯ ಪ್ರತಿಭಾವಂತ ವಿದ್ಯಾರ್ಥಿ ಕುಶಾಲ್ ನಿತ್ಯಾನಂದ್ ನಾಯ್ಕ್ ಹಾಗೂ ಮುಂಡಗೋಡ ತಾಲೂಕಿನ ಕಳಕಿಕಾರೆಯ ಭೂಷಣ್ ಪಾಟೀಲ್ ಸೈನಿಕ ಶಾಲೆಗೆ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ.. ಶಿರಾಲಿಯ ಕುಶಾಲ್ ನಾಯ್ಕ್ ಸಾಧನೆ..! ಅಂದಹಾಗೆ, ಭಟ್ಕಳ ತಾಲೂಕಿನ ಶಿರಾಲಿಯ ನಿತ್ಯಾನಂದ್, ಪ್ರೇಮಾ ದಂಪತಿಯ ಸುಪುತ್ರ ಕು. ಕುಶಾಲ್ ನಿತ್ಯಾನಂದ್ ನಾಯ್ಕ್ ವಿಜಯಪುರದ Oxford English medium school ನಲ್ಲಿ ಐದನೇ ತರಗತಿ ಓದುತ್ತಿದ್ದು, ಸದ್ಯ ಆಲ್ ಇಂಡಿಯಾ ಸೈನಿಕ ಶಾಲೆಯಲ್ಲಿ ಪ್ರವೇಶಾತಿಗಾಗಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈತನ ತಂದೆ ಬಿಎಸ್ ಎಫ್ ಯೋಧರಾಗಿದ್ದು, ಸದ್ಯ ಪಶ್ಚಿಮ ಬಂಗಾಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರನ ಸಾಧನೆಗಾಗಿ ತಂದೆ ನಿತ್ಯಾನಂದ, ತಾಯಿ ಪ್ರೇಮಾ ಸೇರಿದಂತೆ ಕುಟುಂಬಸ್ಥರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ. ಕಳಕಿಕಾರೆಯ ವಿದ್ಯಾರ್ಥಿ ಸಾಧನೆ..! ಅದ್ರಂತೆ, ಮುಂಡಗೋಡ ತಾಲೂಕಿನ ಕಳಕಿಕಾರೆ ಶಾಲೆಯ ಭೂಷಣ ಪಾಟೀಲ್ ಸೈನಿಕ ಶಾಲೆಗೆ...

error: Content is protected !!