ಮುಂಡಗೋಡ-ತಾಲೂಕಿನ ಅಟ್ಟಣಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯವರು ಕೈಗೊಂಡ ಕಾಲುವೆ ಕಾಮಗಾರಿ ಕಳಪೆಯಾಗಿದೆ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಅಟ್ಟಣಗಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ನಾಗನೂರ( ಹನುಮಾಪುರ) ಗ್ರಾಮ ಪಂಚಾಯತ ವ್ಯಾಪ್ತಿಯ ಅಟ್ಟಣಗಿ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ ಇದ್ದು ಕಾಮಗಾರಿ ಸಂಪೂರ್ಣ ಕಳಪೆ ಮಾಡಿದ್ದಾರೆ. ಈ ಕಾಮಗಾರಿಯಿಂದ ಅಟ್ಟಣಗಿ ಭಾಗದ ಸುಮಾರು 400 ರಿಂದ 500 ಎಕರೆ ಜಮೀನಿಗೆ ನೀರು ಹಾಯಲು ಈ ಕಾಲುವೆ ಕಾಮಗಾರಿ ಮಾಡಬೇಕಾಗಿತ್ತು. ಗುತ್ತಿಗೆದಾರ ರಾಘವೇಂದ್ರ ಮೂಲಿಮನಿ ಅವರಿಗೆ ಈ ಕಾಮಾಗಾರಿ ಟೆಂಡರ್ ಆಗಿತ್ತು, ಆದ್ರೆ ಸಹ ಗುತ್ತಿಗೆದಾರರು ಸೇರಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ 50 ಲಕ್ಷ ರೂಪಾಯಿ ಕಾಮಗಾರಿಯನ್ನು ಕೇವಲ 5 ಲಕ್ಷಕ್ಕೆ ಮುಗಿಸಿದ್ದಾರೆ. 6-8 ದಿನಕಾಲ ಜೆ.ಸಿಬಿ ಯಂತ್ರದಿಂದ ಕಳಪೆ ಕಾಮಗಾರಿ ಮಾಡಿ 42 ಲಕ್ಷದ ಬಿಲ್ ಪಡೆದಿದ್ದಾರೆ ಅಂತಾ ಆರೋಪಿಸಿರೋ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಇಂಜಿನಿಯರ್ ಎಲ್ಲಾ...
Top Stories
ಚೌಡಳ್ಳಿಯ ಹಿರಿಯ ಸಹಕಾರಿ ಧುರೀಣ ವೈ.ಪಿ.ಪಾಟೀಲ್(72) ವಿಧಿವಶ..!
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಕಾಲುವೆಯಲ್ಲೂ ಅಕ್ರಮದ ವಾಸನೆ.?; ತನಿಖೆ ಕೋರಿ ತಹಶೀಲ್ದಾರರಿಗೆ ಅಟ್ಟಣಗಿ ಗ್ರಾಮಸ್ಥರ ಮನವಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಸಿಡ್ಲಗುಂಡಿಯಲ್ಲಿ 1 ಎಕರೆ ಕಬ್ಬು ಭಸ್ಮ
ಮುಂಡಗೋಡ- ಗದ್ದೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, 1 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ಸಿಡ್ಲಗುಂಡಿಯಲ್ಲಿ ನಡೆದಿದೆ.. ಸಿಡ್ಲಗುಂಡಿಯ ರೈತ ಶಾಮು ದಾಕ್ಲು ಶಿಂಧೆ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯ ಮೇಲೆ ಹಾದು ಹೋಗಿರೋ ಕೆಇಬಿ ವಿದ್ಯತ್ ಕಂಬದ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.. ಘಟನೆಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯವಾಗಿದೆ.. ಹೀಗಾಗಿ ಸುಮಾರು 2 ಲಕ್ಷ ರೂ. ಮೌಲ್ಯದ ಕಬ್ಬಿನ ಬೆಳೆ ರಕ್ಷಿಸಲಾಗಿದೆ.. ಮುಂಡಗೋಡ ಅಗ್ನಿಶಾಮಕ ಠಾಣಾಧಿಕಾರಿ ನಾರಾಯಣ ತಳೇಕರ್, ಸಿಬ್ಬಂದಿಗಳಾದ ಅಭಿ ಕುರುವಿನಕೊಪ್ಪ, ಮಂಜುನಾಥ ಪಟಗಾರ, ಗುರುಪ್ರಸಾದ್, ಪರಶುರಾಮ, ಮಾಲತೇಶ ಬೆಂಕಿ ನಂದಿಸುವ ಕಾರ್ಯ ಮಾಡಿದ್ರು..
ಗ್ರಾಮ ಪಂಚಾಯತಿ ಚುನಾವಣೆ ಸಚಿವ ಹೆಬ್ಬಾರಗೆ ಪ್ರತಿಷ್ಠೆ..! ಕಾಂಗ್ರೆಸ್ಸಿಗೆ ಆಕ್ಸಿಜನ್..?
ಮುಂಡಗೋಡ- ಸದ್ಯ ಗ್ರಾಮ ಪಂಚಾಯತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ.. ಹೀಗಾಗಿ ತಾಲೂಕಿನಾಧ್ಯಂತ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.. ಅಧಿಕೃತ ಪಕ್ಷದ ಚಿನ್ಹೆಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸದೇ ಇದ್ದರೂ, ಆಯಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸೋದಂತೂ ಸತ್ಯ.. ಅದ್ರಲ್ಲೂ ಮುಂಡಗೋಡ ತಾಲೂಕಿನ ಅಷ್ಟೂ ಗ್ರಾಮ ಪಂಚಾಯತಿಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲೇ ಬೇಕು, ಸಂಪೂರ್ಣ ಗ್ರಾಮ ಪಂಚಾಯತಿಗಳು ಕೇಸರಿಮಯವಾಗಲೇಬೇಕು ಅನ್ನೋ ಮಹತ್ವಾಕಾಂಕ್ಷೆಯಲ್ಲಿರೋ ಹೆಬ್ಬಾರ್ ಪಡೆಗೆ ತಾಲೂಕಿನಲ್ಲಿ ಒಂದಿಷ್ಟು ಪಕ್ಷದ ತಳಮಟ್ಟದ ಗೊಂದಲಗಳು ತೊಡರಾಗೋದು ಗ್ಯಾರಂಟಿ.. ಮೂಲ- ವಲಸಿಗರ ಕಿತ್ತಾಟ ಅಸಲು, ಮುಂಡಗೋಡ ತಾಲೂಕಿನ ಬಿಜೆಪಿಯಲ್ಲಿ ಮೂಲ ವರ್ಸೆಸ್ ವಲಸಿಗರ ಕಿತ್ತಾಟ ಒಳಗೊಳಗೆ ಕುದಿಯುತ್ತಿರೋದು ಬಹಿರಂಗ ಸತ್ಯ.. ಅದ್ರಲ್ಲೂ ಕೆಲವು ಹಳ್ಳಿಗಳಲ್ಲಿ ತಲತಲಾಂತರದಿಂದ ಹಾವು ಮುಂಗುಸಿಯಂತಿದ್ದ ಕಾಂಗ್ರೆಸ್ ಬಿಜೆಪಿ ತಳಮಟ್ಟದ ಕಾರ್ಯಕರ್ತರು ಅಂತಹದ್ದೊಂದು ಜಿದ್ದನ್ನು ಇವತ್ತಿಗೂ ಉಳಿಸಿಕೊಂಡೇ ಬಂದಿದ್ದಾರೆ.. ಅಂತದ್ದರಲ್ಲಿ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ನಿಂದ ಬಿಜೆಪಿಗೆ ಏಕಾಏಕಿ ಜಂಪ್ ಆದಮೇಲೂ ಅವರನ್ನೇ ನಂಬಿದ್ದ...
ಲೆಫ್ಟಿನೆಂಟ್ ಅಭಯ್ ಪಂಡಿತ್ ಸಾಧನೆ; ಕನಸಿನ ಮುಂಡಗೋಡ ತಂಡದಿಂದ ಸನ್ಮಾನ
ಮುಂಡಗೋಡ- ಮುಂಡಗೋಡಿನ ಯುವಕ ಅಭಯ್ ಪಂಡಿತ್ ಚೆನ್ನೈನ ಭಾರತೀಯ ಸೇನೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ನವೆಂಬರ್ 21 ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಸಾಧನೆಗೈದಿದ್ದಾರೆ. ಮುಂದೆ ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಹೊರಟಿದ್ದಾರೆ. ಈ ಮೂಲಕ ಮುಂಡಗೋಡಿನ ಮೊದಲ ಲೆಫ್ಟಿನೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ, ನಮ್ಮ ಕನಸಿನ ಮುಂಡಗೋಡ ವೇದಿಕೆ ವತಿಯಿಂದ ಲೆಫ್ಟಿನೆಂಟ್ ಅಭಯ್ ಪಂಡಿತ್ ಅವರಿಗೆ ಮುಂಡಗೋಡಿನ ಪರವಾಗಿ ಅಭಿನಂದಿಸಿ ,ಗೌರವಿಸಲಾಯಿತು.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಹಿನ್ನೆಲೆ; ಮುಂಡಗೋಡ ಬಿಜೆಪಿಗರ ಸಂಭ್ರಮ
ಮುಂಡಗೋಡ- ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಮಂಡನೆಯಾದ ಹಿನ್ನೆಲೆಯಲ್ಲಿ. ಬಿಜೆಪಿ ಮುಂಡಗೋಡ ಮಂಡಲ ಕಾರ್ಯಕರ್ತರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಬಿಜೆಪಿ ಮುಂಡಗೋಡ ಮಂಡಲದ ಅಧ್ಯಕ್ಷ ನಾಗಭೂಷಣ ಹಾವಣಗಿ, ಜಿ.ಪಂ ಸದಸ್ಯಎಲ್.ಟಿ.ಪಾಟೀಲ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಮಂಜುನಾಥ ಹರ್ಮಲಕರ, ಪಟ್ಟಣ ಪಂಚಾಯಿತಿಯ ಸದಸ್ಯ ಶೇಖರ್ ಲಮಾಣಿ, ಶ್ರೀಕಾಂತ ಸಾನು, ಶಿವರಾಜ ಸುಬ್ಬಾಯವರ ಯುವಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ, ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಠ್ಠಲ ಬಾಳಂಬೀಡ ಹಾಗೂ ಮಂಜುನಾಥ್ ಪಾಟೀಲ ಉಪಸ್ಥಿತಿದ್ದರು. ಇನ್ನು ಗೋ ಸಂರಕ್ಷಣೆಯ ಮುಂಚೂಣಿ ಹೋರಾಟಗಾರ ಭರತ್ ರಾಜ ಹದಲಗಿ ಸಂತೋಷ ರಾಂಪೂರೆ ಶಿವಯೋಗಿ ಕೂಡಲಮಠ, ಅಯ್ಯಪ್ಪ ಭಜಂತ್ರಿ, ಮುಖಂಡರಾದ ತುಕಾರಾಮ ಇಂಗಳೆ ರವಿ ಹಾವೇರಿ, ರಾಮು ಲಮಾಣಿ, ಚಂದ್ರಶೇಖರ ಗಾಣಿಗೇರ ಸೇರಿ ಹಲವರು ಉಪಸ್ಥಿತರಿದ್ದರು.
ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಜಾರಿ: ಗೋ ಪೂಜೆ ಸಲ್ಲಿಸಿ ಸಂಭ್ರಮ
ವಿಜಯಪುರ- ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕ ಜಾರಿ ಹಿನ್ನೆಲೆ, ವಿಜಯಪುರದಲ್ಲಿ ಬಿಜೆಪಿ, ಹಿಂದೂ ಪರ ಸಂಘಟನೆಗಳು ಹರ್ಷ ವ್ಯಕ್ತ ಪಡಿಸಿವೆ.. ವಿಜಯಪುರದ ಶಿವಾಜಿ ವೃತ್ತದಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ರು.. ಮೋದಿ, ಯಡಿಯೂರಪ್ಪ, ಪ್ರಭು ಚವ್ಹಾಣ್ ಪರ ಘೋಷಣೆ ಕೂಗಿ ಸಂತಸ ವ್ಯಕ್ತ ಪಡಿಸಿದ್ರು..
ಉತ್ತರ ಕರ್ನಾಟಕ ಅಭಿವೃದ್ಧಿಗೆ ಪಾದಯಾತ್ರೆ- ಯಾಸೀನ್ ಜವಳಿ*
ವಿಜಯಪುರ- ಸರ್ಕಾರಗಳು ಉತ್ತರ ಕರ್ನಾಟಕದ ಪ್ರಗತಿಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಸಾರ್ವಜನಿಕರು, ರೈತರು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಸರ್ವತೋಮುಖ ಪ್ರಗತಿಗಾಗಿ ಅನುದಾನದಲ್ಲಿ ಸಿಂಹಪಾಲು ನೀಡುವಂತೆ ಪ್ರಬಲವಾದ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಕ್ರಾಂತಿಯೋಗಿ ಅಣ್ಣ ಬಸವಣ್ಣನ ಜನ್ಮಸ್ಥಳ ಪಾವನ ನೆಲ ಬಸವನ ಬಾಗೇವಾಡಿಯಿಂದ ಜನವರಿ 20 ರಿಂದ ಬೆಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಅಂತಾ ಸಾಮಾಜಿಕ ಕಾರ್ಯಕರ್ತ ಯಾಸೀನ್ ಜವಳಿ ಘೋಷಿಸಿದ್ರು.. ವಿವಿಧ ಸಂಘಟನೆಯ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು, ರೈತ ಸಂಘಟನೆಯ ನಾಯಕರು, ಕಾರ್ಮಿಕ ಧುರೀಣರೆಲ್ಲರೂ ಪಕ್ಷಾತೀತವಾಗಿ ನಡೆಯುವ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಪಾದಯಾತ್ರೆಯ ಮೂಲಕ ಉತ್ತರ ಕರ್ನಾಟಕದ ಧ್ವನಿಯಾಗಿ ರಾಜ್ಯ ರಾಜಧಾನಿ ಬೆಂಗಳೂರು ತಲುಪಲಿದ್ದಾರೆ ಅಂತಾ ಯಾಸೀನ್ ಜವಳಿ ತಿಳಿಸಿದ್ದಾರೆ. ಉತ್ತರ ಕೊಡಿ.. ಸಮಾಜ ಸೇವಕ ಯಾಸೀನ್ ಜವಳಿ ಸಾರಥ್ಯದ ‘ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದ್ದು, ಸಕಲ ಸಿದ್ಧತೆ...
ಗೋ ಹತ್ಯೆ ನಿಷೇಧ ವಿಧೇಯಕ: ಇದು ಕೃಷಿ ಸಂಸ್ಕೃತಿಯ ಪ್ರತೀಕ- ಕಟೀಲ್*
ಮಂಗಳೂರು- ತೀವ್ರ ವಿರೋಧದ ನಡುವೆಯೂ ವಿಧಾನ ಸಭೆಯಲ್ಲಿ ಗೋ ಹತ್ಯೆ ನಿಷೇಧ ವಿದೇಯಕವನ್ನು ಮಂಡಿಸಲಾಯಿಗಿದೆ. ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದು ಅಂಗೀಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅಂಗೀಕಾರ ಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ಹಾಗೂ ಬಹು ಬೇಡಿಕೆಯ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರುವ ಪ್ರಯತ್ನ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದಿತ್ತು . ಆದರೆ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಆ ಕಾನೂನನ್ನು ಹಿಂಪಡೆದಿತ್ತು. ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಮಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಮಾಡಿದ್ದೆವು. ಇದು ಕೃಷಿ ಸಂಸ್ಕೃತಿಯ ಪ್ರತೀಕವೂ ಹಾಗೂ ರೈತರ ಪರವಾಗಿ ಇರುವಂತಹ ಕಾನೂನಾಗಿದೆ ಎಂದು ಅವರು ಹೇಳಿದರು. ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿದೆ . ಇದಕ್ಕೋಸ್ಕರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾಗೂ ಪಶುಸಂಗೋಪನಾ...
ಲೆಫ್ಟಿನೆಂಟ್ ಹುದ್ದೆ: ಮುಂಡಗೋಡ ಯುವಕನ ಹೆಮ್ಮೆ*
ಮುಂಡಗೋಡ: ಇದು ನಿಜಕ್ಕೂ ಮುಂಡಗೋಡಿಗರಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ ನಮ್ಮ ಭಾರತೀಯ ಸೇನಾಧಿಕಾರಿ ಹುದ್ದೆ ಅಲಂಕರಿಸಿದ್ದಾನೆ. ಸತತ ಛಲ.. ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಲೇಬೇಕು ಎಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ, ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಪಟ್ಟಣದ ಹಳೂರಿನ ಯುವಕ ಅಭಯ ಪಂಡಿತ್ ಯಶಸ್ವಿಯಾಗಿದ್ದಾರೆ. ಕರ್ನಾಟಕದಿಂದ ಒಟ್ಟು ಆರು ಜನರು ಈ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಿಂದ ಇವರೊಬ್ಬರೇ ಆಯ್ಕೆಯಾಗಿರುವುದು ವಿಶೇಷ. ಚೆನ್ನೈನ ಭಾರತೀಯ ಸೇನಾಧಿಕಾರಿಗಳ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ, ನ.21ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಪಟ್ಟಣಕ್ಕೆ ಬಂದಿದ್ದಾರೆ. ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ನಲ್ಲಿ ಸೇವೆ ಸಲ್ಲಿಸಲು ಡಿ.10ರಂದು ತೆರಳಲಿದ್ದಾರೆ. ನೇರವಾಗಿ ಸೇನಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವವರಲ್ಲಿ ಅಭಯ ಪಂಡಿತ್ ತಾಲ್ಲೂಕಿನಲ್ಲಿಯೇ ಮೊದಲಿಗರು. ಈ ಹಿಂದೆ ಪಟ್ಟಣದ ಸುಜಾತಾ ಬೈಲೂರು ಎಂಬುವರು ವಾಯುಸೇನೆಯಲ್ಲಿ ವೈದ್ಯರಾಗಿ ಸೇರಿದ್ದಾರೆ.
ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್
ವಿಜಯಪುರ- ಭೀಮಾತೀರದ ಸಾಹುಕಾರ್ ಮಹದೇವ್ ಬೈರಗೊಂಡ ಮೇಲೆ ನಡೆದ ಫೈರಿಂಗ್ ಕೇಸ್ ನ ಪ್ರಮುಖ ಆರೋಪಿ ಅಂದರ್ ಆಗಿದ್ದಾನೆ.. ಕಳೆದ ಒಂದು ತಿಂಗಳಿಂದ ಫೈರಿಂಗ್ ಕೇಸ್ ಬೆನ್ನತ್ತಿದ್ದ ವಿಜಯಪುರ ಪೊಲೀಸ್ರಿಗೆ ಅಸಲೀ ಆರೋಪಿಯ ಜಾಡು ಬೇಧಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಹಾಗಾದ್ರೆ ಮಹದೇವ್ ಸಾಹುಕಾರನ ಮೇಲೆ ಸಾವಿನ ಗುರಿಯಿಟ್ಟ ಆ ಹಂತಕರ ನಾಯಕ ಯಾರು..? ಅವತ್ತು ನವೆಂಬರ್ 2 ಮಟ ಮಟ ಮದ್ಯಾಹ್ನ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಡೆಡ್ಲಿ ಅಟ್ಯಾಕ್ ಒಂದು ನಡೆದಿತ್ತು.. ಥೇಟು ಸಿನಿಮಾ ಸ್ಟೈಲ್ ನಲ್ಲೇ ನಡೆದಿದ್ದ ಆ ಅಟ್ಯಾಕ್ ನಲ್ಲಿ ಇಬ್ರು ಪ್ರಣ ಬಿಟ್ಟಿದ್ರು.. ಮಹದೇವ ಸಾಹುಕಾರನ ಮೇಲೆ ಹಾರಿದ್ದ ಗುಂಡುಗಳು ಮಹದೇವ ಸಾಹುಕಾರನ ಬದಲಿಗೆ ಇಬ್ಬರ ಜೀವ ತೆಗೆದಿದ್ವು.. ಆದ್ರೆ ಮಹದೇವ ಸಾಹುಕಾರ್ ಮಾತ್ರ ಗುಂಡು ತಾಗಿದ್ರು ಬಚಾವ್ ಆಗಿದ್ದ.. ಸದ್ಯ ಚಿಕಿತ್ಸೆ ಪಡಿತಿರೋ ಸಾಹುಕಾರ ಕೆಲವೇ ದಿನದಲ್ಲಿ ಡಿಶ್ಚಾರ್ಜ್ ಕೂಡ ಆಗ್ತಿದಾನೆ.. ಆದ್ರೆ ಅವತ್ತು ಅಂತಹದ್ದೊಂದು ಡೆಡ್ಲಿಯಸ್ಟ್ ಅಟ್ಯಾಕ್ ಹಿಂದೆ ಇದ್ದಿದ್ದ ಒಳಸುಳಿಯನ್ನ...