ಮುಂಡಗೋಡ-ತಾಲೂಕಿನ ಅಟ್ಟಣಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯವರು ಕೈಗೊಂಡ ಕಾಲುವೆ ಕಾಮಗಾರಿ ಕಳಪೆಯಾಗಿದೆ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಅಟ್ಟಣಗಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ನಾಗನೂರ( ಹನುಮಾಪುರ) ಗ್ರಾಮ ಪಂಚಾಯತ ವ್ಯಾಪ್ತಿಯ ಅಟ್ಟಣಗಿ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ ಇದ್ದು ಕಾಮಗಾರಿ ಸಂಪೂರ್ಣ ಕಳಪೆ ಮಾಡಿದ್ದಾರೆ. ಈ ಕಾಮಗಾರಿಯಿಂದ ಅಟ್ಟಣಗಿ ಭಾಗದ ಸುಮಾರು 400 ರಿಂದ 500 ಎಕರೆ ಜಮೀನಿಗೆ ನೀರು ಹಾಯಲು ಈ ಕಾಲುವೆ ಕಾಮಗಾರಿ ಮಾಡಬೇಕಾಗಿತ್ತು. ಗುತ್ತಿಗೆದಾರ ರಾಘವೇಂದ್ರ ಮೂಲಿಮನಿ ಅವರಿಗೆ ಈ ಕಾಮಾಗಾರಿ ಟೆಂಡರ್ ಆಗಿತ್ತು,

ಆದ್ರೆ ಸಹ ಗುತ್ತಿಗೆದಾರರು ಸೇರಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ 50 ಲಕ್ಷ ರೂಪಾಯಿ ಕಾಮಗಾರಿಯನ್ನು ಕೇವಲ 5 ಲಕ್ಷಕ್ಕೆ ಮುಗಿಸಿದ್ದಾರೆ. 6-8 ದಿನಕಾಲ ಜೆ.ಸಿಬಿ ಯಂತ್ರದಿಂದ ಕಳಪೆ ಕಾಮಗಾರಿ ಮಾಡಿ 42 ಲಕ್ಷದ ಬಿಲ್ ಪಡೆದಿದ್ದಾರೆ ಅಂತಾ ಆರೋಪಿಸಿರೋ ಗ್ರಾಮಸ್ಥರು,
ಅಧಿಕಾರಿಗಳು ಹಾಗೂ ಇಂಜಿನಿಯರ್ ಎಲ್ಲಾ ಸೇರಿ ಎಂ.ಬಿ ಬರೆದು ಬಿಲ್ಲನ್ನು ತೆಗೆಯುವ ಹಂತದಲ್ಲಿದ್ದರು..

ಮಂಗಳವಾರ ಹಳಿಯಾಳ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರವರಿಗೆ ಕಾಮಗಾರಿ ಬಿಲ್ ಮಂಜೂರು ಮಾಡದಂತೆ ಮನವಿ ನೀಡಿದ್ದೇವೆ. ಹಿಗಾಗಿ, ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಗ್ರಾಮದ ಎಲ್ಲಾ ರೈತರು ಸೇರಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಅಂತಾ ಮನವಿಯಲ್ಲಿ ಎಚ್ಚರಿಸಿದ್ದಾರೆ.

error: Content is protected !!