ಲೆಫ್ಟಿನೆಂಟ್ ಅಭಯ್ ಪಂಡಿತ್ ಸಾಧನೆ; ಕನಸಿನ ಮುಂಡಗೋಡ ತಂಡದಿಂದ ಸನ್ಮಾನ

ಮುಂಡಗೋಡ- ಮುಂಡಗೋಡಿನ ಯುವಕ ಅಭಯ್ ಪಂಡಿತ್ ಚೆನ್ನೈನ ಭಾರತೀಯ ಸೇನೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ನವೆಂಬರ್ 21 ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಸಾಧನೆಗೈದಿದ್ದಾರೆ.

ಮುಂದೆ ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಹೊರಟಿದ್ದಾರೆ. ಈ ಮೂಲಕ ಮುಂಡಗೋಡಿನ ಮೊದಲ ಲೆಫ್ಟಿನೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೀಗಾಗಿ, ನಮ್ಮ ಕನಸಿನ ಮುಂಡಗೋಡ ವೇದಿಕೆ ವತಿಯಿಂದ ಲೆಫ್ಟಿನೆಂಟ್ ಅಭಯ್ ಪಂಡಿತ್ ಅವರಿಗೆ ಮುಂಡಗೋಡಿನ ಪರವಾಗಿ ಅಭಿನಂದಿಸಿ ,ಗೌರವಿಸಲಾಯಿತು.

error: Content is protected !!