ಲೆಫ್ಟಿನೆಂಟ್ ಹುದ್ದೆ: ಮುಂಡಗೋಡ ಯುವಕನ ಹೆಮ್ಮೆ*

ಮುಂಡಗೋಡ: ಇದು ನಿಜಕ್ಕೂ ಮುಂಡಗೋಡಿಗರಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ ನಮ್ಮ ಭಾರತೀಯ ಸೇನಾಧಿಕಾರಿ ಹುದ್ದೆ ಅಲಂಕರಿಸಿದ್ದಾನೆ.

ಸತತ ಛಲ..

ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಲೇಬೇಕು ಎಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ, ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಪಟ್ಟಣದ ಹಳೂರಿನ ಯುವಕ ಅಭಯ ಪಂಡಿತ್ ಯಶಸ್ವಿಯಾಗಿದ್ದಾರೆ.

ಕರ್ನಾಟಕದಿಂದ ಒಟ್ಟು ಆರು ಜನರು ಈ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಿಂದ ಇವರೊಬ್ಬರೇ ಆಯ್ಕೆಯಾಗಿರುವುದು ವಿಶೇಷ. ಚೆನ್ನೈನ ಭಾರತೀಯ ಸೇನಾಧಿಕಾರಿಗಳ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ, ನ.21ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಪಟ್ಟಣಕ್ಕೆ ಬಂದಿದ್ದಾರೆ. ರಾಜಸ್ಥಾನದ ವೆಸ್ಟರ್ನ್‌ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸಲು ಡಿ.10ರಂದು ತೆರಳಲಿದ್ದಾರೆ.

ನೇರವಾಗಿ ಸೇನಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವವರಲ್ಲಿ ಅಭಯ ಪಂಡಿತ್ ತಾಲ್ಲೂಕಿನಲ್ಲಿಯೇ ಮೊದಲಿಗರು. ಈ ಹಿಂದೆ ಪಟ್ಟಣದ ಸುಜಾತಾ ಬೈಲೂರು ಎಂಬುವರು ವಾಯುಸೇನೆಯಲ್ಲಿ ವೈದ್ಯರಾಗಿ ಸೇರಿದ್ದಾರೆ.

 

error: Content is protected !!