ಮುಂಡಗೋಡ- ಗದ್ದೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, 1 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ಸಿಡ್ಲಗುಂಡಿಯಲ್ಲಿ ನಡೆದಿದೆ..
ಸಿಡ್ಲಗುಂಡಿಯ ರೈತ ಶಾಮು ದಾಕ್ಲು ಶಿಂಧೆ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯ ಮೇಲೆ ಹಾದು ಹೋಗಿರೋ ಕೆಇಬಿ ವಿದ್ಯತ್ ಕಂಬದ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹೊತ್ತಿಕೊಂಡು ಅವಘಡ ಸಂಭವಿಸಿದೆ..
ಘಟನೆಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯವಾಗಿದೆ.. ಹೀಗಾಗಿ ಸುಮಾರು 2 ಲಕ್ಷ ರೂ. ಮೌಲ್ಯದ ಕಬ್ಬಿನ ಬೆಳೆ ರಕ್ಷಿಸಲಾಗಿದೆ..
ಮುಂಡಗೋಡ ಅಗ್ನಿಶಾಮಕ ಠಾಣಾಧಿಕಾರಿ ನಾರಾಯಣ ತಳೇಕರ್, ಸಿಬ್ಬಂದಿಗಳಾದ ಅಭಿ ಕುರುವಿನಕೊಪ್ಪ, ಮಂಜುನಾಥ ಪಟಗಾರ, ಗುರುಪ್ರಸಾದ್, ಪರಶುರಾಮ, ಮಾಲತೇಶ ಬೆಂಕಿ ನಂದಿಸುವ ಕಾರ್ಯ ಮಾಡಿದ್ರು..