ಉತ್ತರ ಕರ್ನಾಟಕ ಅಭಿವೃದ್ಧಿಗೆ ಪಾದಯಾತ್ರೆ- ಯಾಸೀನ್ ಜವಳಿ*

 

ವಿಜಯಪುರ- ಸರ್ಕಾರಗಳು ಉತ್ತರ ಕರ್ನಾಟಕದ ಪ್ರಗತಿಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಸಾರ್ವಜನಿಕರು, ರೈತರು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಉತ್ತರ ಕರ್ನಾಟಕದ
ಸರ್ವತೋಮುಖ ಪ್ರಗತಿಗಾಗಿ ಅನುದಾನದಲ್ಲಿ ಸಿಂಹಪಾಲು ನೀಡುವಂತೆ ಪ್ರಬಲವಾದ ಧ್ವನಿಯನ್ನು
ಸರ್ಕಾರಕ್ಕೆ ಮುಟ್ಟಿಸಲು ಕ್ರಾಂತಿಯೋಗಿ ಅಣ್ಣ ಬಸವಣ್ಣನ ಜನ್ಮಸ್ಥಳ ಪಾವನ ನೆಲ ಬಸವನ
ಬಾಗೇವಾಡಿಯಿಂದ ಜನವರಿ 20 ರಿಂದ ಬೆಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಅಂತಾ ಸಾಮಾಜಿಕ ಕಾರ್ಯಕರ್ತ ಯಾಸೀನ್ ಜವಳಿ ಘೋಷಿಸಿದ್ರು..

ವಿವಿಧ ಸಂಘಟನೆಯ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು, ರೈತ ಸಂಘಟನೆಯ ನಾಯಕರು, ಕಾರ್ಮಿಕ ಧುರೀಣರೆಲ್ಲರೂ ಪಕ್ಷಾತೀತವಾಗಿ ನಡೆಯುವ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಪಾದಯಾತ್ರೆಯ ಮೂಲಕ ಉತ್ತರ ಕರ್ನಾಟಕದ ಧ್ವನಿಯಾಗಿ ರಾಜ್ಯ ರಾಜಧಾನಿ ಬೆಂಗಳೂರು ತಲುಪಲಿದ್ದಾರೆ ಅಂತಾ ಯಾಸೀನ್ ಜವಳಿ ತಿಳಿಸಿದ್ದಾರೆ.

ಉತ್ತರ ಕೊಡಿ..

ಸಮಾಜ ಸೇವಕ ಯಾಸೀನ್ ಜವಳಿ ಸಾರಥ್ಯದ ‘ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಈ
ಪಾದಯಾತ್ರೆ ನಡೆಯಲಿದ್ದು, ಸಕಲ ಸಿದ್ಧತೆ ಭರದಿಂದ ಕೈಗೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕ ನಿರ್ಲಕ್ಷ ನಿತ್ಯ ನಿರಂತರ
ಈಗಾಗಲೇ ‘ಉತ್ತರ ಕರ್ನಾಟಕಕ್ಕೆ ಉತ್ತರ ಕೊಡಿ’ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ, ಹೋರಾಟಕ್ಕೆ ಸ್ಪಷ್ಟವಾದ ಜನಾಂದೋಲನ ರೂಪ ನೀಡಲು ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ.

ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಂಕಿ-ಅಂಶಗಳ
ಮೂಲಕ ವಿವರಿಸಲಾಗುತ್ತಿದೆ. ಸಾಂಸ್ಕಂತಿಕ ರಂಗ, ಚಿತ್ರರಂಗ, ರಾಜಕೀಯ, ಕ್ರೀಡೆ, ಉದ್ಯಮ, ಐ.ಟಿ.ವಲಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಆಗುತ್ತಿರುವುದನ್ನು ಪ್ರಾಥಮಿಕ ಹಂತದಲ್ಲಿ ದ್ವಾದಶ ಪ್ರಶ್ನೆಗಳನ್ನು ಕೇಳುವ ಮೂಲಕ ಈ ಪಾದಯಾತ್ರೆ ಮುನ್ನಡೆಯಲಿದೆ.

ಈಗಾಗಲೇ ಉತ್ತರ ಕರ್ನಾಟಕ ಭಾಗದ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿ ಹೋರಾಟಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಜಾಗೃತಿ ಸಭೆಗಳನ್ನು ಏರ್ಪಡಿಸಲಾಗಿದೆ. ಬೀದರ್, ರಾಯಚೂರ, ಕೊಪ್ಪಳ,
ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಅಲ್ಲಿರುವ ಅನೇಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕನ್ನಡಪರ ಹೋರಾಟಗಾರರು ಮುಕ್ತಕಂಠದಿಂದ ಈ ಹೋರಾಟವನ್ನು ಶ್ಲಾಘಿಸಿ ಹೋರಾಟದ ಜೊತೆಗಿರುವುದಾಗಿ ಘೋಷಿಸಿದ್ದಾರೆ..

error: Content is protected !!