ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

 ಶಿಗ್ಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಶಿಗ್ಗಾವಿ ತಾಲೂಕಿನ ಜೈನ ಸಮಾಜದ ಬಾಂಧವರು, ಮಠಾಧೀಶರು ಹಾಗೂ ವಿವಿಧ ಸಮಾಜದ ಮುಖಂಡರು ಶಿಗ್ಗಾವಿಯಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಮಹಾವೀರ ವೃತ್ತದಿಂದ ಹೊರಟ ಮೌನ ಪ್ರತಿಭಟನಾ ಮೆರವಣಿಗೆ, ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಾಗಿ ಬಂದಿತು, ನಂತರ ವಿರಕ್ತಮಠದ ಶ್ರೀ ಸಂಗನಬಸವ ಶ್ರೀಗಳು ಜೂನ ಮುನಿಶ್ರೀಯವರ ಭೀಕರ ಹತ್ಯೆಯನ್ನು ಖಂಡಿಸಿ ಮಾತನಾಡಿದ್ರು‌. ಸಮಾಜದಲ್ಲಿ ಶ್ರೀಗಳಿಗೆ, ಮಠಾಧೀಶರಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಅಲ್ಲದೇ, ಮುನೀಶ್ರೀ ಹತ್ತೆ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳ...

ಮಳಗಿಯಲ್ಲಿ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಮಳಗಿಯಲ್ಲಿ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಮುಂಡಗೋಡ ತಾಲೂಕಿನ ಧರ್ಮಾ ಕಾಲೋನಿಯಲ್ಲಿ 44 ವರ್ಷದ ವ್ಯಕ್ತಿಯೋರ್ವ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಳಗಿ ಧರ್ಮಾ ಕಾಲೋನಿಯ ಉದಯ್ ಶೇಖಪ್ಪ ಹಸಲಾರ್ (44) ಎಂಬುವವನೇ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ಅಪಘಾತವಾಗಿದೆ‌. ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನಂದಿಕಟ್ಟಾ ಹೋಗುತ್ತಿದ್ದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಪರಿಣಾಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂದಿಕಟ್ಟಾ ಗ್ರಾಮದ ಹನುಮಂತ ಭೋವಿ ಮತ್ತು ಬಸವರಾಜ ಎಂಬುವವರೇ ಗಾಯಗೊಂಡವರಾಗಿದ್ದು. 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಮತ್ತು ಮಲ್ಲಪ್ಪ ಇವರು ಪ್ರಥಮ ಚಿಕಿತ್ಸೆ ನೀಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

 ಮುಂಡಗೋಡ; ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಅದ್ವಾನಗಳಿಂದಾಗಿ ಜನ ರೋಶಿ ಹೋಗಿದ್ದಾರೆ. ಅದ್ರಲ್ಲೂ ಹುಬ್ಬಳ್ಳಿ ರಸ್ತೆಯಲ್ಲಿ ಬಿದ್ದಿರೋ ಯಮರೂಪಿ ರಸ್ತೆ ಗುಂಡಿಗಳಿಂದ ಅದೇಷ್ಟೋ ಬಡಪಾಯಿಗಳ ಪ್ರಾಣಗಳೇ ಹಾರಿಹೋಗುತ್ತಿವೆ. ಹೀಗಿದ್ದಾಗಲೂ ಆ್ಯಟಲಿಸ್ಟ್ ಇಂತಹ ಯಮರೂಪಿ ಗುಂಡಿಗಳಿಗೆ ಮಣ್ಣು ಹಾಕಿ ಸಾರಿಸುವ ಕನಿಷ್ಟ ಖಬರ್ರೂ ಇಲ್ಲಿನ PWD ಇಲಾಖೆಯ ಅಧಿಕಾರಿಗಳಿಗೆ ಬಂದಂತಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ಓಡಾಡೋ ಜನ ನಿತ್ಯವೂ ಹಿಡಿಶಾಪ ಹಾಕ್ತಿದಾರೆ ಅಧಿಕಾರಿಗಳಿಗೆ. ಕುರುಡಾದ್ರಾ ಅಧಿಕಾರಿಗಳು..? ಅಸಲು, ಮುಂಡಗೋಡ ಪಟ್ಟಣದಿಂದ ಹುಬ್ಬಳ್ಳಿ ಕಡೆಗೆ ನೀವು ಹೊರಟ್ರೆ, ಜಸ್ಟ್ ಮಿನಿ ವಿಧಾನಸೌಧ ಇದೆಯಲ್ಲ, ಅದರ ಹತ್ತಿರವೇ ಅಂದ್ರೆ ವೀರಶೈವ ಮುಕ್ತಿಧಾಮದ ಎದುರಲ್ಲಿ ಅದೊಂದು ಯಮರೂಪಿ ಗುಂಡಿ ಜೀವಗಳನ್ನ ಬಲಿ ಪಡೆಯಲು ಕಾಯ್ದು ಕುಳಿತಿದೆ. ಇಲ್ಲಿ ವಾಹನ ಸವಾರರು, ಬೈಕ್ ಸವಾರರು ಜಾಗರೂಕತೆಯಿಂದಲೇ ಸಂಚರಿಬೇಕಿದೆ. ಇಲ್ಲಿ ಸಂಚರಿಸುವಾಗ ಕಿಂಚಿತ್ತು ಗಮನ ಮರೆತ್ರೆ ಮುಗೀತು. ಬಿದ್ದು ಆಸ್ಪತ್ರೆ ಸೇರೋದು ಗ್ಯಾರಂಟಿಯೇ. ಹೀಗಿದ್ದಾಗ, ಇದರ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು, ವಾಹನ ಸವಾರರು ಇಲಾಖೆ ಅಧಿಕಾರಿಗಳ ಗಮನಕ್ಕೆ...

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ (Coastal Karnataka) ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗುವ (Heay Rain) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್‌ ಜಾರಿ ಮಾಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ. ಉಡುಪಿಯಲ್ಲಿ ಸುರಿದ ಭಾರೀ ಮಳೆಯಿಂದ ಕಾಪು ತಾಲೂಕು ಇನ್ನಂಜೆ -ಕಲ್ಯಾ ನಡುವೆ ಸಂಪರ್ಕ ಕಡಿತಗೊಂಡಿದೆ. ಮಾರ್ಕೊಡಿ ಹೊಳೆಯ ನೀರಿನಿಂದ ಎರಡು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ನೂರಾರು ಎಕರೆ ಭತ್ತದ ಬೇಸಾಯ ನೀರು ಪಾಲಾಗಿದೆ.

ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

 ಮುಂಡಗೋಡ: ಚಿಕ್ಕೋಡಿಯಲ್ಲಿ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡ ತಾಲೂಕಿನ ಜೈನ ಸಮಾಜದ ಬಾಂಧವರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಶಿರಸಿ ರಸ್ತೆಯಲ್ಲಿರೋ ಜಿನಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌. ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ರು. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳ ಜೈನ ಸಮಾಜದ ಮುಖಂಡರು, ಮಹಿಳೆಯರು ಭಾಗಿಯಾಗಿದ್ರು.

ಕಲಘಟಗಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ವಿಧಿವಶ..!

ಕಲಘಟಗಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ವಿಧಿವಶ..!

ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಎಂ.ನಿಂಬಣ್ಣವರ್(76) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಂಬಣ್ಣವರ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ‌. ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಅವ್ರು, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಚಿಕ್ಕೋಡಿಯಲ್ಲಿ ದಿಗಂಬರ ಜೈನ ಮುನಿಯ ಭೀಕರ ಹತ್ಯೆ,  ಅಹಿಂಸಾ ಪರಂಪರೆಯ ಮುನಿಶ್ರೀ ಗೆ ಇದೇಂಥಾ ಸಾವು..?

ಚಿಕ್ಕೋಡಿಯಲ್ಲಿ ದಿಗಂಬರ ಜೈನ ಮುನಿಯ ಭೀಕರ ಹತ್ಯೆ, ಅಹಿಂಸಾ ಪರಂಪರೆಯ ಮುನಿಶ್ರೀ ಗೆ ಇದೇಂಥಾ ಸಾವು..?

  ಚಿಕ್ಕೋಡಿ: ಜುಲೈ 6 ರಿಂದ ನಾಪತ್ತೆಯಾಗಿದ್ದ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾಗಿದೆ ಅನ್ನೋ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಹತ್ಯೆ ಕೇಸಿನಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿರೋ ಬೆಳಗಾವಿ ಪೊಲೀಸರು, ಜೈನ ಮುನಿಯ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಅದು ನಂದಿ ಪರ್ವತ ಆಶ್ರಮ..! ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ಸದ್ಯ ನೀರವಮೌನ ಆವರಿಸಿದೆ. ಜೈನ ಮುನಿಯ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಆಶ್ರಮದತ್ತ ಧಾವಿಸಿ ಬರುತ್ತಿದ್ದಾರೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೊಟ್ಟ ಹಣ ಕೇಳಿದ್ದಕ್ಕಾ..? ಅಸಲು, ಆಶ್ರಮದಿಂದ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನ ಮುನಿಯ ಹತ್ಯೆ ಮಾಡಿದ್ದೇವೆ ಅಂತಾ ಆರೋಪಿಗಳು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಅಂತಾ ಬೆಳಗಾವಿ ಎಸ್ಪಿ ಡಾ.ಸಂದೀಪ ಪಾಟೀಲ್ ಹೇಳಿದ್ದಾರೆ. ಸದ್ಯ ಆರೋಪಿಗಳು ಮೃತದೇಹ ಎಲ್ಲಿ ಎಸೆದಿದ್ದಾರೆ ಅನ್ನೋ...

ಮುಂಡಗೋಡಿನ ಪತ್ರಕರ್ತ ಶಾಂತೇಶಕುಮಾರ್, ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿ ನಿಧಿ ಪುರಸ್ಕಾರಕ್ಕೆ ಆಯ್ಕೆ..!

ಮುಂಡಗೋಡಿನ ಪತ್ರಕರ್ತ ಶಾಂತೇಶಕುಮಾರ್, ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿ ನಿಧಿ ಪುರಸ್ಕಾರಕ್ಕೆ ಆಯ್ಕೆ..!

ಮುಂಡಗೋಡಿನ ಪತ್ರಕರ್ತ ಮಿತ್ರ ಶಾಂತೇಶಕುಮಾರ್ ಬೆನಕನಕೊಪ್ಪ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ ನೀಡುವ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ‌ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯ ತಾಲೂಕಾ ವರದಿಗಾರರಾಗಿರೋ ಶಾಂತೇಶಕುಮಾರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪತ್ರಿಕಾ ಮಿತ್ರರಿಗೆ ಹರ್ಷ ತಂದಿದೆ. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯ ಐವರು ಪತ್ರಕರ್ತರು ಇಂತಹದ್ದೊಂದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ‌ ಸಭೆಯಲ್ಲಿ ಜಿಲ್ಲಾ ಸಂಘದ ಸದಸ್ಯರಾದ ಐವರು ಪತ್ರಕರ್ತರನ್ನು ಅಂತಿಮಗೊಳಿಸಲಾಗಿದೆ. ಉದಯವಾಣಿ ಪತ್ರಿಕೆಯ ವರದಿಗಾರ ಜೊಯಿಡಾದ ಸಂದೇಶ ದೇಸಾಯಿ, ಪ್ರಜಾವಾಣಿ ಪತ್ರಿಕೆಯ ವರದಿಗಾರ ಕುಮಟಾದ ಎಂ.ಜಿ. ನಾಯ್ಕ, ಹೊಸದಿಗಂತ ಪತ್ರಿಕೆಯ ವರದಿಗಾರ್ತಿ ಯಲ್ಲಾಪುರದ ಪ್ರಭಾವತಿ ಜಯರಾಜ ಗೋವಿ ಹಾಗೂ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಭಟ್ಕಳದ ರಾಘವೇಂದ್ರ ಹೆಬ್ಬಾರ ಇವರುಗಳ ವರದಿ ಮತ್ತು ವಿಶೇಷ ಲೇಖನವನ್ನು ಪರಿಗಣಿಸಿ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ ಆಯ್ಕೆಗೊಳಿಸಲಾಗಿದೆ. ಸಂಘದ ಸುವರ್ಣ...

ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ಈ ಸಾವನ್ನು ನಿಜಕ್ಕೂ ಯಾರ್ ಅಂದ್ರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೆಲವೇ ದಿನಗಳ ಹಿಂದೆ ಲವಲವಿಕೆಯಿಂದ ಕಾರ್ಯ ನಿರ್ವಹಿಸ್ತಿದ್ದ ಅರಣ್ಯ ಅಧಿಕಾರಿಯೊಬ್ಬ ಹೀಗೆ ವಯಸ್ಸಲ್ಲದ ವಯಸ್ಸಲ್ಲಿ ಜೀವ ಕಳೆದುಕೊಂಡು ಬಿದ್ದಿದ್ದಾನೆ. ಹಾಗಿದ್ರೆ, ಇದನ್ನು ಆತನ ಹಣೆಬರಹ ಅನ್ನ ಬೇಕೋ..? ಅಥವಾ ನಿರ್ಲಜ್ಜ, ಅಮಾನುಷ ವ್ಯವಸ್ಥೆಯ, ಮದವೇರಿದ ಅಧಿಕಾರಿಗಳ ನಿರ್ಲಕ್ಷ ಅನ್ನಬೇಕೋ ಒಂದೂ ಅರ್ಥವಾಗ್ತಿಲ್ಲ. ಒಟ್ನಲ್ಲಿ ದಾಂಡೇಲಿಯ ಅವನೊಬ್ಬ ಅರಣ್ಯ ಅಧಿಕಾರಿ ಸದ್ಯ ಇಂತದ್ದೇ ವ್ಯವಸ್ಥೆಗೆ ತನ್ನ ಜೀವ ಬಲಿ ಕೊಟ್ನಾ..? ಅರ್ಥವೇ ಆಗ್ತಿಲ್ಲ. ಆತನ ಹೆಸ್ರು ಯೋಗೇಶ್..! ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವ, ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ನಿರ್ಬಿಡೆಯ, ಪ್ರಮಾಣಿಕ ಸೇವೆ ಸಲ್ಲಿಸಿದ್ದವ. ಸದ್ಯ ವಿರ್ನೋಲಿ ವಲಯದ ,ಕುಳಗಿ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಯಲ್ಲಿದ್ದವ. ಈಗಷ್ಟೇ ಬಹುಶಃ ಮೂವತ್ತರ ಆಸುಪಾಸಿನ ಹುಡುಗ. ಮದುವೆಯಾಗಿದೆ. ಜೊತೆಗೆ ಮೂರು ವರ್ಷದ ಪುಟ್ಟ ಕಂದಮ್ಮನೂ ಇದೆ. ಹೀಗಿರೋ ಈತ ಕಳೆದ ಜೂನ್ 27 ರಂದು, ಸಾಗವಾನಿ ಮಡಿ...

error: Content is protected !!