ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?

ರಾಜೀನಾಮೆ ಸುಳಿವು ಕೊಟ್ಟ ಸಿಎಂ..! ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸಾ..?

ಬೆಂಗಳೂರು: ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಜುಲೈ 25 ರಂದು ವರಿಷ್ಟರು ನೀಡುವ ತೀರ್ಮಾನಕ್ಕೆ ನಾನು ಬದ್ದನಾಗಿ ನಡೆದುಕೊಳ್ಳುತ್ತೇನೆ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಒಂದು ಸಂದೇಶ ಬರುತ್ತೆ ಆ ಸಂದೇಶದ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಅಂತಾ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗುವೆ.. ಇನ್ನು, ಬಹುತೇಕ ರಾಜೀನಾಮೆ ನೀಡುವ ಕುರಿತು ಪರೋಕ್ಷವಾಗಿ ಹೇಳಿರೋ ಸಿಎಂ ಯಡಿಯೂರಪ್ಪ, ಜುಲೈ 26 ರಿಂದ ನಾನು ವರಿಷ್ಟರ ಸೂಚನೆಯಂತೆ ಕೆಲಸ ಶುರು ಮಾಡುತ್ತೇನೆ. ಪಕ್ಷದ ಸಂಘಟನೆಗೆ ಒತ್ತು ಕೊಡುತ್ತೇನೆ ಅಂತಾ ತಿಳಿಸಿದ್ರು. ಪ್ರತಿಭಟನೆ ಮಾಡಬೇಡಿ..! 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಆದ್ರೂ ಬಿಜೆಪಿ ನಂಗೆ ಎಲ್ಲವನ್ನೂ ಕೊಟ್ಟಿದೆ. 75 ವರ್ಷವಾದ್ರೂ ನನ್ನನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದಾರೆ. ಹೀಗಾಗಿ, ಯಾರೂ ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡಬೇಡಿ....

ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಹುಬ್ಬಳ್ಳಿ: ಲಾರಿ ಹಾಗೂ ಆಟೋ ಮದ್ಯೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ, ಹುಬ್ಬಳ್ಳಿಯ ಹೊರಹೊಲಯದ ಗಬ್ಬೂರು ಬೈಪಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ವರೂರಿಗೆ ಹೊರಟಿದ್ದ ಆಟೋಗೆ, ಎದುರಿನಿಂದ ಬಂದ ಲಾರಿಯಿಂದ ಡಿಕ್ಕಿಯಾಗಿದೆ. ಹೀಗಾಗಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆದ್ರೆ, ಸಾವಿಗೀಡಾದ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋಡಿಮಠದ ಶ್ರೀಗಳು ನುಡಿದ್ರು ಭಯಾನಕ ಭವಿಷ್ಯ..!

ಕೋಡಿಮಠದ ಶ್ರೀಗಳು ನುಡಿದ್ರು ಭಯಾನಕ ಭವಿಷ್ಯ..!

ಶಿರಸಿ: ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಸದ್ಯದ ರಾಜಕೀಯ ವಿಪ್ಲವಗಳ ಮದ್ಯೆ ಕೋಡಿಮಠದ ಶ್ರೀಗಳ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಸುಖಾಂತ್ಯ..! ರಾಜ್ಯದಲ್ಲಿ ಎದ್ದಿರೋ ರಾಜಕೀಯ ವಿಪ್ಲವ ಸದ್ಯದಲ್ಲೇ ಸುಖಾಂತ್ಯ ಕಾಣಲಿದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ನೇರಲಕಟ್ಟೆ (ಈಚಲಬೆಟ್ಟ) ಗ್ರಾಮದಲ್ಲಿರೋ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಕೋಡಿಮಠದ ಶ್ರೀಗಳು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡೋ ಸ್ವಾತಂತ್ರ್ಯವಿದೆ. ಅದಕ್ಕೆ ಸ್ವಾಮೀಜಿಗಳು ಹೊರತಾಗಿಲ್ಲ’ ಅಂತ ಪರೋಕ್ಷವಾಗಿ ವೀರಶೈವ ಸ್ವಾಮೀಜಿಗಳ ನಡೆ ಸಮರ್ಥಿಸಿದರು. ಧರ್ಮಸಂಕಟ..! ‘ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು...

ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ರಾಜಕಾರಣ ಅಂದ್ರೆನೇ ಹಾಗೆ, ಇಲ್ಲಿ ಯಾವಾಗ ಯಾರು, ಯಾರ್ ಕಾಲ್ ಎಳಿತಾರೋ ಗೊತ್ತೇ ಆಗಲ್ಲ. ಎದುರು ಆಡೋ ಮಾತು ಒಂದಾದ್ರೆ, ತಲೇಲಿ ತಿರುಗಿಸೋ ಲೆಕ್ಕಾಚಾರವೇ ಮತ್ತೊಂದಿರತ್ತೆ. ಇಲ್ಲಿ ಬೆಳಿಗ್ಗೆ ಹೀರೋ ಅನ್ನಿಸಿಕೊಂಡವನು, ಸಂಜೆಯಾಗ್ತಿದ್ದಂತೆ ಜೀರೋ ಆಗಿರ್ತಾನೆ. ಹಾಗೇ, ಜೀರೋ ಆಗಿದ್ದವನು ಏಕಾಏಕಿ ಹೀರೋ ಆಗಿ ಪಟ್ಟಕ್ಕೇರಿರ್ತಾನೆ. ಇಲ್ಲಿ ಎಲ್ಲವೂ ಅವರವರ ಬೌದ್ದಿಕ ತಾಕತ್ತಿನ ಮೇಲೆಯೇ ಡಿಸೈಡ್ ಆಗತ್ತೆ. ಅದಿರಲಿ. ಮತ್ತಷ್ಟು ಟೈಮ್ ಸಿಕ್ತು..! ಸದ್ಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ಕಾವು ಏರತೊಡಗಿದೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ಚುನಾವಣೆ ನಡೆಸಲ್ಲ ಅಂತಾ ರಾಜ್ಯ ಸರ್ಕಾರ ಖಡಾ ಖಂಡಿತವಾದ ತೀರ್ಮಾನ ಮಾಡಿ ಆಗಿದೆ. ಆದ್ರೂ ಚುನಾವಣೆಯ ಬಿರುಸಿಗೆ ಏನ್ ಅಂದ್ರೆ ಏನೂ ಫರಕ್ ಆಗಿಲ್ಲ. ಒಳಗೊಳಗೇ ನಡೆಯುತ್ತಿರೋ ಮಸಲತ್ತುಗಳೇನು ಕಡಿಮೆಯಾಗಿಲ್ಲ. ಮತ್ತಷ್ಟು ಟೈಮ್ ಸಿಕ್ತು ಅಂತಾ ಹುರಿಯಾಳುಗಳು ಹುಲಿಯಂತೆ ಘರ್ಜಿಸುತ್ತಿದ್ದಾರೆ. ಇಂದೂರು ಕ್ಷೇತ್ರದ್ದೇ ಪೀಕಲಾಟ..!ಮುಂಡಗೋಡ ತಾಲೂಕಿನ ಮಟ್ಟಿಗೆ ಜಿಪಂ ಚುನಾವಣೆ ಹೈ ವೋಲ್ಟೇಜ್ ಕಣ ಅಂದ್ರೆ ಅದು ಇಂದೂರು...

ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಮುಂಡಗೋಡಿನಲ್ಲಿ ರವಿವಾರ ಭೀಕರ ಹತ್ಯೆಯಾಗಿದೆ. ಯುವಕನೋರ್ವನ ಪ್ರಾಣ, ಹಂತಕರ ರಕ್ತದಾಹಕ್ಕೆ ಬಲಿಯಾಗಿದೆ. ಪೊಲೀಸರೂ ಒಂದರ್ಥದಲ್ಲಿ ದಿಗಿಲಿಗೆ ಬೀಳುವಂತಾಗಿದೆ. ಅಸಲು, ಮುಂಡಗೋಡಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟು ಹೋಯ್ತಾ..? ಈ ಪ್ರಶ್ನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನಿಗೂ ಆತಂಕ ತಂದಿಟ್ಟಿದೆ‌.  ಅದ್ಯಾಕೋ ಗೊತ್ತಿಲ್ಲ, ನಂಗೆ ಈ ಕ್ರೈಂ ವರದಿ ಮಾಡೋಕೆ ಮನಸ್ಸೇ ಬರ್ಲಿಲ್ಲ.. ಈ ಮರ್ಡರ್ ವಿಷಯವಾಗಿ ಏನೂ ಬರಿಯೋದೇ ಬೇಡ ಅಂತಾ ಅನಕೊಂಡಿದ್ದೆ, ಯಾಕ್ ಗೊತ್ತಾ..? ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಹೇಗಿತ್ತು..? ಈಗ ಹೇಗಾಗಿದೆ..? ಅಯ್ಯೋ, ನೆನಪಿಸಿಕೊಂಡ್ರೆ ಇನ್ನಿಲ್ಲದ ಆತಂಕ ಹುಟ್ಟಿಸಿದೆ. ಮೊನ್ನೆಯಿಂದಲೂ ಹತ್ತಾರು ಪೋನ್ ಕಾಲ್ ಗಳು..! ಏನ್ರಿ ಇದೇಲ್ಲ..? ಏನಾಗಿದೆ ನಮ್ಮ ಮುಂಡಗೋಡಿಗೆ..? ಹಿಂಗ್ಯಾಕೆ ಹೆಣಗಳು ಉರುಳ್ತಿವೆ..? ರೌಡಿಸಂ ಅನ್ನೋದರ ಗಂಧ ಗಾಳಿಯೂ ಗೊತ್ತಿರದ ಮುಂಡಗೋಡಿನ ಮಂದಿಯ ಬಾಯಲ್ಲಿ, ಮನಸಲ್ಲಿ ಬರೀ ಆತಂಕ.. ಆತಂಕ.. ಆತಂಕ… ಆತ್ಮಹತ್ಯೆ ಸುದ್ದಿಗೇ ಹೆದ್ರೊ ಜನ ನಾವು..! ನಿಜಾ ರೀ, ಅಲ್ಯಾವನೋ ಒಬ್ಬ ನೇಣು ಬಿಗಿದೋ, ವಿಷ ಕುಡಿದೋ ಆತ್ಮಹತ್ಯೆ ಮಾಡಿಕೊಂಡ ಅಂತಾ...

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ: ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳ ಪ್ರತಿಭಟನೆ..!

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ: ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳ ಪ್ರತಿಭಟನೆ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಇಂದು ಸಿಡಿದೆದ್ದಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ನೀಡಿದ್ದಾರೆ. ಬಡವರ ಸೂರು ಕಸಿದುಕೊಂಡ್ರಾ.? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ. ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ‌ ಮನವಿ‌ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಹಶೀಲ್ದಾರರಿಗೆ ಅಲ್ಲಿನ ನಿವಾಸಿಗಳು ಸಾಕಷ್ಟು...

ಭಟ್ಕಳದಲ್ಲಿ ಮಳೆರಾಯನ ಅರ್ಭಟಕ್ಕೆ ಹೊಳೆಯಂತಾದ ರಸ್ತೆಗಳು..! ಜನಜೀವನ ಅಸ್ತವ್ಯಸ್ತ..!!

ಭಟ್ಕಳದಲ್ಲಿ ಮಳೆರಾಯನ ಅರ್ಭಟಕ್ಕೆ ಹೊಳೆಯಂತಾದ ರಸ್ತೆಗಳು..! ಜನಜೀವನ ಅಸ್ತವ್ಯಸ್ತ..!!

ಭಟ್ಕಳ: ಪಟ್ಟಣದಲ್ಲಿ ವರುಣನ ಅರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಭಟ್ಕಳ ಪಟ್ಟಣ ಅಕ್ಷರಶಃ ಹೊಳೆಯಂತಾಗಿದೆ. ಪಟ್ಟಣದ ಸಂಶುದ್ಧೀನ್ ಸರ್ಕಲ್, ರಂಗಿನಕಟ್ಟಾ, ಚೌಥನಿ ಸೇರಿ ಹಲವೆಡೆ ನೀರು ತುಂಬಿಕೊಂಡಿದೆ. ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಅಗಲೀಕರಣದಿಂದ ಮುಚ್ಚಿಹೋಗಿರುವ ಚರಂಡಿ ಕಾಲುವೆಗಳಿಂದಾಗಿ ರಸ್ತೆಯ ಮೇಲೆಯೇ ಮಳೆಯ ನೀರು ತುಂಬಿಕೊಂಡಿದೆ. ಹೀಗಾಗಿ ಪಟ್ಟಣದ ರಸ್ತೆಗಳೇಲ್ಲ ಅಕ್ಷರಶಃ ಹೊಳೆಯಂತಾಗಿವೆ. ಇನ್ನು, ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ವರುಣ ಅಬ್ಬರಿಸುತ್ತಿದ್ದು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ವಿಪರೀತ ಮಳೆಯಾಗುತ್ತಿದೆ. ಹಲವೆಡೆ ನದಿಗಳು ಮೈದುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಂದೂ ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂಡಗೋಡಿನಲ್ಲಿ ಯುವಕನ ಬೀಕರ ಹತ್ಯೆ..! ಇರಿದು, ಇರಿದು ಕೊಂದರಾ ಹಂತಕರು..?

ಮುಂಡಗೋಡಿನಲ್ಲಿ ಯುವಕನ ಬೀಕರ ಹತ್ಯೆ..! ಇರಿದು, ಇರಿದು ಕೊಂದರಾ ಹಂತಕರು..?

ಮುಂಡಗೋಡ:ಪಟ್ಟಣದ ಹೊರ ವಲಯದ ನ್ಯಾಸರ್ಗಿ ರಸ್ತೆಯಲ್ಲಿ ಯುವಕನೊಬ್ಬ ಹೆಣವಾಗಿದ್ದಾನೆ. ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ನ ವಿಜಯ್ ಮಂಜಪ್ಪ ಈಳಗೇರ್ ಎಂಬುವನನ್ನು ಬೀಕರವಾಗಿ ಹತ್ಯೆ ಮಾಡಲಾಗಿದೆ‌. ಎದೆಗೆ ಹಾಗೂ ಬೆನ್ನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಅಪ್ಪಟ ದುಶ್ಮನಿಗಳ ಸೇಡಿನ ಕೊಲೆ ಅನ್ನೋದು ಮೇಲ್ನೊಟಕ್ಕೆ ಕಂಡು ಬರ್ತಿದೆ. ನಿನ್ನೆ ರಾತ್ರಿ ನಡೆದಿರಬಹುದು ಎನ್ನಲಾದ ಕೊಲೆ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಮಂಡಗೋಡಿನಲ್ಲಿ “ಕಾಂಗ್ರೆಸ್ ಸಹಾಯ ಹಸ್ತ” ಉದ್ಘಾಟಿಸಿದ ಬಿ.ಕೆ.ಹರಿಪ್ರಸಾದ್..!

ಮಂಡಗೋಡಿನಲ್ಲಿ “ಕಾಂಗ್ರೆಸ್ ಸಹಾಯ ಹಸ್ತ” ಉದ್ಘಾಟಿಸಿದ ಬಿ.ಕೆ.ಹರಿಪ್ರಸಾದ್..!

ಮುಂಡಗೋಡ: ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ “ಕಾಂಗ್ರೆಸ್ ಸಹಾಯ ಹಸ್ತ” ಕಾರ್ಯಕ್ರಮ ಇಂದು ಮುಂಡಗೋಡಿನಲ್ಲಿ ನಡೆಯಿತು.ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ನಾಯಕ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಶಾಂತ್ ದೇಶಪಾಂಡೆ, ವಿ.ಎಸ್. ಆರಾಧ್ಯ, ಕೃಷ್ಣ ಹಿರೇಹಳ್ಳಿ, ಎಚ್. ಎಂ. ನಾಯಕ್, ಅಬ್ದುಲ್ ಮಜೀದ್ ಶೇಖ್, ಶ್ರೀಮತಿ ಸುಜಾತ ಗಾಂವ್ಕರ್, ಬಸವರಾಜ್ ದೊಡ್ಮನಿ, ಕೆಪಿಸಿಸಿ ವೀಕ್ಷಕ ಸುರೇಶ್ ಸವನೂರು,ನಾಗರಾಜ್ ನರ್ವೇಕರ್, ಅಬ್ಬಾಸ್ ತೊನ್ಸೆ, ಭಾರತಿ ಮಣ್ಣಪ್ಪ ಗೌಡರ್, ಮಹ್ಮದ್ ಗೌಸ್ ಮಕಾಂದಾರ್, ಅಲಿ ಹಸನ್ ಬೆಂಡಿಗೇರಿ ಧರ್ಮರಾಜ ನಡಗೇರ, ಮಲ್ಲಿಕಾರ್ಜುನ ಗೌಳಿ ಎಂ.ಎನ್. ದುಂಡಸಿ, ರಾಜು ಬೋವಿ, ರಜಾ ಪಟಾಣ್, ಜಾಫರ್ ಹಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SSLC ಪರೀಕ್ಷೆ ಬರಿಯೊ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವಿತರಣೆ..!

SSLC ಪರೀಕ್ಷೆ ಬರಿಯೊ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವಿತರಣೆ..!

ಶಿಗ್ಗಾವಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಂಸದ ಪ್ರಹ್ಲಾದ್ ಜೋಷಿಯವರ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಶಿಗ್ಗಾವಿ ತಾಲೂಕಿನ ಪ್ರತಿ ಶಾಲೆಯ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಜ್, ಮತ್ತು ಪಲ್ಸ್ ಆಕ್ಸಿಮೀಟರ್‌ಗಳನ್ನು ನೀಡುವ ಕಾರ್ಯಕ್ಕೆ ಭಾ.ಜ.ಪ ಅದ್ಯಕ್ಷ ಶಿವಾನಂದ ಮ್ಯಾಗೇರಿ ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಆರೋಗ್ಯದ ದೃಷ್ಟಿಯಿಂದ ಇಂದಿನ ಮಕ್ಕಳೇ ನಾಳೆಯ ನಾಡಿನ ಪ್ರಜೆಗಳು ಎಂಬ ಸದುದ್ದೇಶದಿಂದ ಮಕ್ಕಳು ಪರೀಕ್ಷೆಗಳನ್ನು ಎದುರಿಸುವ ಕಾರ್ಯಕ್ಕೆ ಮುಕ್ತವಾಗಿ ತಮ್ಮ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಈ ಎಲ್ಲ ಸಾಧನಗಳನ್ನು ನೀಡಲಾಗುತ್ತಿದೆ ಎಂದರು. ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಕಳೆದ ಬಾರಿ ಜೋಷಿಯವರ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜ್ ನೀಡಲಾಗಿತ್ತು ಈ ಭಾರಿಯೂ ಸಹಿತ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ನೀಡಲಾಗುತ್ತಿದೆ ಜೊತೆಗೆ ಬೊಮ್ಮಾಯಿಯವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ಕೈಗೊಳ್ಳುವ ಮೂಲಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಶಿಕ್ಷಣ...

error: Content is protected !!