ಉಡುಪಿ: ಕರಾವಳಿ ಭಾಗದಲ್ಲಿ NIA ಕೇಂದ್ರ ಸ್ಥಾಪಿಸಲು ಹಿಂದೂ ಸಂಘಟನೆಗಳ ಒತ್ತಾಯ ಸರಿಯಾಗಿದೆ, ನಾನೂ ಲೋಕಸಭಾ ಸದಸ್ಯರ ಜೊತೆ ಮಾತನಾಡುತ್ತೇನೆ, ಮಂಗಳೂರು ಭಾಗದಲ್ಲಿ ಶಾಶ್ವತ NIA ಕೇಂದ್ರ ಸ್ಥಾಪನೆಗ ಸೂಕ್ತ ಕ್ರಮ ಕೈಗೊಳ್ಳಲು ಕೋರುತ್ತೇನೆ ಅಂತಾ ಉಡುಪಿಯಲ್ಲಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಕರಾವಳಿ ಭಾಗದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಈ ಹಿಂದಿನಿಂದಲೂ ಅಂತಹ ಅನೇಕ ಘಟನೆಗಳು ನಡೆದಿವೆ. ಸಿರಿಯಾ ಜೊತೆ ಕರಾವಳಿ ಸಂಪರ್ಕ ಅತ್ಯಂತ ಅಚ್ಚರಿ ತಂದಿದೆ
ಇದು ಅತ್ಯಂತ ಖಂಡನೀಯ ವಾದ ಸಂಗತಿ
ಭಯೋತ್ಪಾಧಕ ಕೃತ್ಯಕ್ಕೆ ಸಹಕಾರ ಕೊಟ್ಟವರ ಸಂಪೂರ್ಣ ವಿಚಾರಣೆ ಯಾಗಬೇಕು ಅಂತಾ ಸುನೀಲ್ ಕುಮಾರ್ ಒತ್ತಾಯಿಸಿದ್ರು.

ಇನ್ನು ಈ ಕುರಿತು ರಾಜ್ಯ ಸರ್ಕಾರದಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸುತ್ತೇನೆ, ಕರ್ನಾಟಕದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸೋದಕ್ಕೆ ಬಿಡೋದಿಲ್ಲ ಅಂತಾ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ರು.

error: Content is protected !!