ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ನಿನ್ನೆ ಬಂಧಿಸಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ಪೊಲೀಸರು, ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿರೋ ಮಾಹಿತಿ ಲಭ್ಯವಾಗಿದೆ.
ಜುಫ್ರಿ ಜವಾಹರ್ ದಾಮೂದಿ ಎನ್ನುವವನನ್ನ ನಿನ್ನೆ NIA ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಐಸೀಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಜುಫ್ರಿ, ಐಸೀಸ್ ಮಾಸಿಕ ಪತ್ರಿಕೆ “ವಾಯ್ಸ್ ಆಫ್ ಹಿಂದ್” ನ್ನು ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಯುವಕರಿಗೆ ಪ್ರಚೋದನೆ ಕೊಡುತ್ತಿದ್ದ. ಹೀಗಾಗಿ,
ಖಚಿತ ಮಾಹಿತಿ ಮೇರೆಗೆ ನಿನ್ನೆ ಶಂಕಿತ ಭಯೋತ್ಪಾದಕನನ್ನು ಎನ್.ಐ.ಎ ಅಧಿಕಾರಿಗಳು ಹಾಗೂ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದರು.
ಇನ್ನು ಮತ್ತೊಬ್ಬ ಶಂಕಿತ ಅಮೀನ್ ಜುಹೈಬ್ ಎನ್ನುವವನ್ನು ವಿಚಾರಣೆ ನಡೆಸಿರೋ NIA ಅಧಿಕಾರಿಗಳು ಸದ್ಯ ಆತನನ್ನು ಬಿಟ್ಟು ಕಳಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.