ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ದೇವರನ್ನೇ ಬಿಡದವರು..!
ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು.
ಆದ್ರೆ ನಸೀಬು ಕೆಟ್ಟು ಮುಂಡಗೋಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪರಿಣಾಮ, ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಇಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಹಾಗೆ, ಇವ್ರಿಬ್ರೂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನವ್ರು. ಅಬ್ದುಲ್ ಸತ್ತಾರ ಶೇಖ್ ಅಲಿಯಾಸ್ ಮಲಿಕ್, ಶ್ರೀಧರ ಅಲಿಯಾಸ್ ಸಿರಿ ಬಂಡಿವಡ್ಡರ ಬಂಧಿತ ಕಳ್ಳತನದ ಆರೋಪಿಗಳು.

ಪಾಂಡುರಂಗನಿಗೇ ಕನ್ನ ಹಾಕಿದ್ರು..!
ಈ ಖತರ್ನಾಕಿ ಕಿಲಾಡಿ ಜೋಡಿ, ತಾಲೂಕಿನ ಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನ, ಬೆಡಸಗಾಂವ, ಕಲಕೊಪ್ಪ ಗ್ರಾಮಗಳಲ್ಲಿ ಆಗಿದ್ದ ಮನೆಕಳ್ಳತನ ಹಾಗೂ ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯ ಗೋಟಗೋಡಿಕೊಪ್ಪ ಕ್ರಾಸ್ ಹತ್ತಿರ ನಡೆದಿದ್ದ ರಾಬರಿ ಪ್ರಕರಣಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ, ಆರೋಪಿತರ ಪತ್ತೆಗಾಗಿ ಮುಂಡಗೋಡ ಠಾಣೆಯ ಪಿಐ ಪ್ರಭುಗೌಡ ನೇತೃತ್ವದಲ್ಲಿ ಬೀಸಿದ್ದ ಜಾಲಕ್ಕೆ ಅನಾಮತ್ತಾಗಿ ಇಬ್ಬರು ಕಿಲಾಡಿಗಳು ಬಿದ್ದಿದ್ದಾರೆ.

ಇನ್ನೊಬ್ಬನಿದ್ದಾನೆ‌..!
ಅಸಲು, ಹಾಗೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರು ಇಬ್ಬರೇ ಅಲ್ಲ, ಬದಲಾಗಿ ಇನ್ನೂ ಓರ್ವ ಇದ್ದಾನೆ. ಹಾಗಂತ, ಖುದ್ದು ಬಂಧಿತರೇ ಬಾಯಿಬಿಟ್ಟಿದ್ದಾರೆ..ಮ ಹೀಗಾಗಿ ಆತನಿಗಾಗಿಯೂ ಮುಂಡಗೋಡ ಪೊಲೀಸರು ಬಲೆ ಹಾಕಿ ಕೂತಿದ್ದು ಇನ್ನೇನು ಮಿಕ ಬಲೆಗೆ ಬೀಳೋದು ದೂರವಿಲ್ಲ.

ಇನ್ನು ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ ದೇವರಾಜು, ಅಡಿಶನಲ್ ಎಸ್ಪಿ ಎಸ್.ಬದರಿನಾಥ ಹಾಗೂ ಡಿಎಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ ಅವರ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ, ಎನ್.ಡಿ. ಜಕ್ಕಣ್ಣವರ ಹಾಗೂ ಸಿಬ್ಬಂದಿಗಳಾದ ಧರ್ಮರಾಜ, ಗಣಪತಿ, ವಿನಾಯಕ, ತಿರುಪತಿ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಹಾಗೂ ಶರತಕುಮಾರ ಕಳ್ಳರನ್ನು ಹೆಡೆಮುರಿ ಕಟ್ಟೋ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!