ಭಟ್ಕಳ: ಪಟ್ಟಣದಲ್ಲಿ ಮತ್ತೆ ಎನ್ಐಎ ದಾಳಿ ನಡೆದಿದೆ. ಭಯೋತ್ಪಾದನೆ ನಂಟಿನ ಆರೋಪದಡಿ ಇಲ್ಲಿನ ಉಮರ್ ಸ್ಟ್ರೀಟ್, ತೆಂಗಿನಗುಂಡಿ, ಸಾಗರ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿರೋ NIA ತಂಡ ಮೂವರನ್ನು ವಶಕ್ಕೆ ಪಡೆದಿದೆ.
ಇನ್ನು, ಇಂತಹದ್ದೊಂದು ದಾಳಿ ವೇಳೆ ಜಿಲ್ಲಾ ಪೊಲೀಸರು ಸಾಥ್ ನೀಡಿದ್ದು, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ ದೇವರಾಜು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ದಾಳಿ ಹಿನ್ನಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.