ಸವಣೂರು: ನಡು ರಸ್ತೆಯಲ್ಲೇ ಹಾಡಹಗಲೇ ರೌಡಿಶೀಟರ್ ನ ಬರ್ಬರ ಹತ್ಯೆಯಾಗಿದೆ. ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ಘಟನೆ ನಡೆದಿದೆ. ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ, ಅಲಿಯಾಸ್ ಟೈಗರ್ ರಪೀಕ್, ಮಾಮಿನ್ (40) ಬರ್ಬರವಾಗಿ ಹತ್ಯೆಯಾಗಿರೋ ರೌಡಿಶೀಟರ್.
ಗೋವಾದಲ್ಲಿ ವಾಸವಾಗಿದ್ದ ರೌಡಿಶೀಟರ್ ನನ್ನು ಇಮ್ರಾನ್ ಎನ್ನುವ 28 ವರ್ಷದ ವ್ಯಕ್ತಿ, ಭೀಕರವಾಗಿ ನಡುರಸ್ತೆಯಲ್ಲೇ ಅಟ್ಟಾಡಿಸಿ ಹತ್ಯೆ ಮಾಡಿದ್ದಾನೆ ಅಂತಾ ತಿಳಿದು ಬಂದಿದೆ.
ಮೃತ ರೌಡಿಶೀಟರ್ ಹಪ್ತಾ ವಸೂಲಿ ಮಾಡಲು ಸವಣೂರಿಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಹಪ್ತಾ ವಸೂಲಿಯ ಸಲುವಾಗಿ ಆರೋಪಿ ಇಮ್ರಾನ್ ಹಾಗೂ ರೌಡಿಶೀಟರ್ ಅನ್ವರ್ ಶೇಖ್ ನಡುವೆ ಜಗಳ ನಡೆದಿದೆ. ಹಾಗೇ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೊಡಲಿಯಿಂದ ಕೊಚ್ಚಿ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ ಅಂತಾ ಪ್ರಾಥಮಿಕ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ.
ಇನ್ನು, ಘಟನೆ ನಡೆದು ಕೇವಲ ಒಂದು ಗಂಟೆಯಲ್ಲೇ ಆರೋಪಿ ಅರೆಸ್ಟ್ ಆಗಿದ್ದಾನೆ. ಪೋಲಿಸರ ಮುಂದೆ ಕೊಲೆಯ ಅಸಲೀ ಸಂಗತಿ ಬಾಯಿ ಬಿಟ್ಟಿದ್ದಾನೆ ಅಂತಾ ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಹಣ ಕೇಳುವ ಸಂಬಂಧ ಈ ಮೊದಲೇ ಇವರಿಬ್ಬರ ಮದ್ಯೆ ವಾಗ್ವಾದ ನಡೆದಿತ್ತು. ಇಂದೂ ಕೂಡಾ ಹಣ ಕೇಳಲು ಬಂದು ರಸ್ತೆಯ ಮದ್ಯೆಯೇ ಅವಾಜ್ ಹಾಕಿದ್ದನಂತೆ ಮೃತ ರೌಡಿಶೀಟರ್. ಹೀಗಾಗಿ ಕೊಡಲಿ ತಂದು ಅಟ್ಟಾಡಿಸಿ ಹತ್ಯೆ ಮಾಡಿಬಿಟ್ಟೆ ಅಂತಾ ಪೊಲೀಸರ ಎದುರು ಆರೋಪಿ ಬಾಯಿಬಿಟ್ಟಿದ್ದಾನಂತೆ.
ಒಟ್ನಲ್ಲಿ ಇಂತಹದ್ದೊಂದು ಭೀಕರ ಹತ್ಯೆ ಕಂಡು ಸವಣೂರಿನ ಜನ ಬೆಚ್ಚಿ ಬಿದ್ದಿದ್ದಾರೆ. ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.