ಸವಣೂರು: ಇಲ್ಲಿನ ಕಾರಡಗಿ ಕ್ರಾಸ್ ಬಳಿ ನಿನ್ನೆ ರವಿವಾರ, ನಡು ರಸ್ತೆಯಲ್ಲೇ ನಡೆದಿದ್ದ ರೌಡಿಶೀಟರ್ ಬರ್ಬರ ಹತ್ಯೆಯ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಚ್ಚು ಹಾಗೂ ಕೊಡಲಿಯಿಂದ ಮನಸೊಯಿಚ್ಚೆ ಹೊಡೆದು ಕೊಂದು ಹಾಕಿದ್ದಾರೆ ಕೊಲೆ ಪಾತಕಿಗಳು.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ, ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ ಮೂಮಿನ್ ಎಂಬುವ 40 ವರ್ಷ ವಯಸ್ಸಿನ ರೌಡಿಶೀಟರ್ ಬರ್ಬರ ಹತ್ಯೆಯಾಗಿದ್ದ.
ಇಮ್ರಾನ್ ಚೌದರಿ (28) ಹಾಗೂ ಆತನ ಸಹಚರರು ಬರ್ಬರವಾಗಿ ಹತ್ಯೆ ಮಾಡಿದ್ರು.
ಹಪ್ತಾ ವಸೂಲಿ ವಿಚಾರವಾಗಿ ಜಗಳವಾಡಿದ್ದ ಅನ್ವರ್ ಶೇಖ್ ಹಾಗೂ ಇಮ್ರಾನ್ ಚೌದರಿ, ಮದ್ಯೆ ಮಾತು ಮಾತಿಗೆ ಬೆಳೆದು, ಈ ವೇಳೆ ಜಗಳ ವಿಕೋಪಕ್ಕೆ ಹೋಗಿತ್ತು. ಆ ನಂತ್ರ ಕೊಡಲಿಯಿಂದ ಇಮ್ರಾನ್ ಹಾಗೂ ಸಹಚರರು ಅನ್ವರ್ ಶೇಖ್ ನನ್ನು ಅಟ್ಟಾಡಿಸಿ ಹೊಡೆದಿದ್ರು.
ಈ ವೇಳೆ ಅಲ್ಲೇ ಇದ್ದವರೊಬ್ರು ತಮ್ಮ ಮೊಬೈಲ್ ನಲ್ಲಿ ದೃಷ್ಯ ಸೆರೆ ಹಿಡಿದಿದ್ದಾರೆ. ಆ ರೌಡಿಶೀಟರ್ ನ್ನಾ ಅಟ್ಟಾಡಿಸಿ ಹೊಡಿಯೋ ದೃಷ್ಯ ನಿಜಕ್ಕೂ ಭಯಾನಕವಾಗಿದ್ದು, ಸವಣೂರಿನ ಜನ ಬೆಚ್ಚಿ ಬೀಳುವಂತೆ ಮಾಡಿದೆ.
ಸಧ್ಯ ಪ್ರಕರಣದ ಓರ್ವ ಆರೋಪಿ ಪೊಲೀಸರಲ್ಲಿ ಶರಣಾಗಿದ್ದು ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.