ಶಿಗ್ಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.. ಈ ಸಾರಿ ಮುಸ್ಲಿಂ ರಿಗೆ ಮಣೆ ಹಾಕದ ಕೈ ಪಡೆ ವೈಶಾಲಿ ಕುಲಕರ್ಣಿಗೆ ಕೈ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಇದ್ರೊಂದಿಗೆ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಬಗೆ ಹರಿದಂತಾಗಿದೆ. ಅಂದಹಾಗೆ, ವೈಶಾಲಿ ಕುಲಕರ್ಣಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಯವರ ಸುಪುತ್ರಿಯಾಗಿದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪಡೆಗೆ ಭಾರೀ ಸೆಡ್ಡು ಹೊಡೆಯುವ ಸಾಧ್ಯತೆ ಇದೆ. ಈ ಕಾರಣಕ್ಕಾಗೇ ಕೈ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಅಂತಾ ಹೇಳಲಾಗ್ತಿದೆ. ಇನ್ಮೇಲೆ ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯ ಅಖಾಡ ಭಾರೀ ರಂಗೇರಲಿದ್ದು ವಿನಯ್ ಕುಲಕರ್ಣಿ ಹಾಗೂ ಬಸವರಾಜ್ ಬೊಮ್ಮಾಯಿ ನಡುವಿನ ಕಾಳಗಕ್ಕೆ ಅಖಾಡ ಒದಗಿಸಿದಂತಾಗಿದೆ.
Top Stories
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಮುಂಡಗೋಡ ತಾಲೂಕಿನಾಧ್ಯಂತ ಸೋಮವಾರ ಸುರಿದ ಭಾರೀ ಮಳೆಗೆ ವಿಪರೀತ ಅವಾಂತರಗಳು ಸೃಷ್ಟಿಯಾಗಿವೆ. ಸೋಮವಾರದಿಂದ ತಾಲೂಕಿನ ಹಲವು ಕಡೆ ಕೆಲ ದುರಂತಗಳೂ ನಡೆದಿವೆ. ಅತ್ತಿವೇರಿ ಗೌಳಿ ದಡ್ಡಿ ಬಳಿ ಹಾಗೂ ಶಿರಸಿ ರಸ್ತೆಯ ಹಿರೇಹಳ್ಳಿ ಬಳಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗೌಳಿಗರ ಹದಿನೈದಕ್ಕೂ ಹೆಚ್ಚು ಎಮ್ಮೆಗಳು ನೀರು ಪಾಲಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಕೆಲವು ಎಮ್ಮೆಗಳ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಹಲವು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ ಅಂತಾ ಹೇಳಲಾಗಿದೆ. ಅತ್ತಿವೇರಿ ಗೌಳಿದಡ್ಡಿಯಲ್ಲಿ..! ಅಂದಹಾಗೆ, ಸೋಮವಾರ ಸುರಿದ ಭಾರೀ ಮಳೆಗೆ ತಾಲೂಕಿನ ಅತ್ತಿವೇರಿ ಗೌಳಿದಡ್ಡಿ ಬಳಿಯ ಹಳ್ಳದಲ್ಲಿ ದುರಂತ ಸಂಭವಿಸಿದೆ. ಕಾಡಿಗೆ ಮೇಯಲು ಹೋಗಿದ್ದ ಎಮ್ಮೆಗಳು ಹಳ್ಳ ದಾಟುವ ವೇಳೆ ಏಕಾಏಕಿ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಅದ್ರಲ್ಲಿ, ಕೆಲ ಎಮ್ಮೆಗಳನ್ನು ಬಚಾವ್ ಮಾಡಲಾಗಿದೆ. ಆದ್ರೆ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಇನ್ನೂ ಹಲವು ಎಮ್ಮೆಗಳು ನೀರಲ್ಲಿ ಕೊಚ್ಚಿ ಹೋಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಸೋಮವಾರ ಘಟನೆ ನಡೆದರೂ ಮಾನ್ಯ ತಹಶೀಲ್ದಾರ್...
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಮುಂಡಗೋಡ ತಾಲೂಕಿನ ಸಾಲಗಾವಿಯಲ್ಲಿ ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಸಾಲಗಾವಿಯ ತುಂಬರ್ಗಿ ರಸ್ತೆಯಲ್ಲಿರೋ ಗೌಡನಕಟ್ಟಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಾಲಕನ ಶವ ಹೊರ ತೆಗೆದಿದ್ದಾರೆ. ಅಂದಹಾಗೆ, ಸಾಲಗಾಂವ್ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬುವ ಒಂಬತ್ತನೇ ತರಗತಿ ವಿದ್ಯಾರ್ಥಿಯೇ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತ ನಿನ್ನೆ ಮದ್ಯಾಹ್ನದಿಂದಲೇ ಮನೆಯಿಂದ ಹೊರಟವನು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದೇ ಇದ್ದಾಗ ರಾತ್ರಿ ಮುಂಡಗೋಡ ಠಾಣೆಗೆ ಬಂದು ಕಾಣೆಯಾಗಿರೋ ಬಗ್ಗೆ ದೂರು ನೀಡಿದ್ದರು ಹೀಗಾಗಿ, ಬೆಳ್ಳಂ ಬೆಳಿಗ್ಗೆಯೇ ಪಿಎಸ್ಐ ಪರಶುರಾಮ್ ಮಿರ್ಜಿಗಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಕಾಣೆಯಾಗಿದ್ದ ಬಾಲಕನ ಪತ್ತೆಗೆ ಮುಂದಾಗಿ, ತುಂಬರ್ಗಿ ರಸ್ತೆಯಲ್ಲಿರೊ ಗೌಡನಕಟ್ಟಿ ಕೆರೆಯ ದಂಡೆಯ ಮೇಲೆ ಬಾಲಕನ ಬಟ್ಟೆ ಬರೆಗಳು ಪತ್ತೆಯಾಗಿದ್ದವು. ಹೀಗಾಗಿ, ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶೋಧ ಕಾರ್ಯ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಪೋಷಕರ ಆಕ್ರಂಧನ ಮುಗಿಲು...
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಮುಂಡಗೋಡ: ಮಳೆಯ ಅರ್ಭಟ ನೋಡಲು ಹೋದ ಒಂಬತ್ತನೇ ತರಗತಿಯ ಬಾಲಕನೋರ್ವ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಸಾಲಗಾಂವ್ ಸಮೀಪದ ತುಂಬರ್ಗಿ ರಸ್ತೆಯಲ್ಲಿರೋ ಗೌಡನಕಟ್ಟಿ ಕೆರೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಲಗಾಂವ್ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬುವ ಒಂಬತ್ತನೇ ತರಗತಿ ವಿದ್ಯಾರ್ಥಿಯೇ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಈತ ನಿನ್ನೆ ಮದ್ಯಾಹ್ನದಿಂದಲೇ ಮನೆಯಿಂದ ಹೊರಟವನು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದೇ ಇದ್ದಾಗ ರಾತ್ರಿ ಮುಂಡಗೋಡ ಠಾಣೆಗೆ ಬಂದು ಕಾಣೆಯಾಗಿರೋ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ, ಬೆಳ್ಳಂ ಬೆಳಿಗ್ಗೆಯೇ ಪಿಎಸ್ಐ ಪರಶುರಾಮ್ ಮಿರ್ಜಿಗಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಣೆಯಾಗಿದ್ದ ಬಾಲಕನ ಪತ್ತೆಗೆ ಮುಂದಾಗಿದ್ದಾಗ, ತುಂಬರ್ಗಿ ರಸ್ತೆಯಲ್ಲಿರೊ ಗೌಡನಕಟ್ಟಿ ಕೆರೆಯ ದಂಡೆಯ ಮೇಲೆ ಬಾಲಕನ ಬಟ್ಟೆ ಬರೆಗಳು ಪತ್ತೆಯಾಗಿವೆ. ಹೀಗಾಗಿ, ಕೆರೆಯಲ್ಲಿ ಬಾಲಕ ನೀರುಪಾಲಾಗಿರೋ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನಿಗಾಗಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಆನಂದ ನಗರದ ಮದನಿ ಮಸೀದಿ ಬಳಿ ನಡೆದಿದೆ. ವಿನಾಯಕ ಚಿತ್ರಗಾರ (21)ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಸಮೀರ, ಇರ್ಫಾನ್, ದೀಪಕ್, ಬಬ್ಲು ಮತ್ತಿತರರು ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು, ಗಂಭೀರಾವಾಗಿ ಗಾಯಗೊಂಡ ವಿನಾಯಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಂಟು ದಿನಗಳ ಹಿಂದೆ ವಿನಾಯಕ ಹಾಗೂ ಸಮೀರ್ ಕುಟುಂಬದ ಮಕ್ಕಳ ನಡುವೆ ಜಗಳವಾಗಿತ್ತು. ಇದೇ ಕ್ಷುಲ್ಲಕ ಕಾರಣಕ್ಕಾಗಿ ಆಕ್ರೋಶ ಗೊಂಡ ಸಮೀರ್ ವಿನಾಯಕ ನಿಗೆ ಚಾಕು ಇರಿದಿದ್ದಾನೆ. ಚಾಕುವಿನಿಂದ ಇರಿದ ಸಮೀರ್ ನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಕಣ ಮತ್ತಷ್ಟು ಕಾವು ಪಡೆದುಕೊಂಡಿದೆ. ಕ್ಷೇತ್ರದಲ್ಲಿ NDA ಮಿತ್ರ ಪಕ್ಷ JDS ತನ್ನ ಪ್ರಾಭಲ್ಯ ತೋರಿಸಲು ಸಜ್ಜಾಗಿದೆ. ಈ ಕಾರಣಕ್ಕಾಗೇ ನಿಖಿಲ್ ಕುಮಾರಸ್ವಾಮಿ ಇಂದು ಶಿಗ್ಗಾವಿಗೆ ಆಗಮಿಸಿದ್ದಾರೆ. ಶಿಗ್ಗಾವಿಯ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಹಮ್ಮಿಕೊಂಡಿರೋ ಶಿಗ್ಗಾಂವ-ಸವಣೂರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ಮೂರು ಕ್ಷೇತ್ರದಲ್ಲಿ NDA ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮೂರು ಕ್ಷೇತ್ರದಲ್ಲಿ ನಮ್ಮ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಮೋದಿಯವರ ಕಾರ್ಯಕ್ರಮ ಮೆಚ್ಚಿ ಅವರ ನಾಯಕತ್ವದಲ್ಲಿ ಹೆಜ್ಹೆ ಹಾಕಲು ದೇವೆಗೌಡರು ತೀರ್ಮಾನ ಮಾಡಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಇವತ್ತು ಕೇಂದ್ರ ಸಚಿವರಾಗಿ ಕೆಲಸ ಮಾಡ್ತಿದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ನ ಸಾಂಪ್ರದಾಯಿಕ ಮತಗಳಿವೆ. ಅಲ್ಲಿ, JDS ಯಾವುದೇ...
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾವಿ ವಿಧಾನಸಭಾ ಉಪ ಚುನಾವಣೆ ಕಣ ರಂಗೇರಿದೆ. ಚುನಾವಣೆ ದಿನಾಂಕ ಘೋಷಣೆ ಆಗ್ತಿದ್ದಂತೆ ಟಿಕೆಟ್ ಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯೇ ತಲೆನೋವಾಗಿದೆ. ಟಿಕೆಟ್ಗಾಗಿ ಜೋರಾದ ಲಾಭಿ..! ಯಾರಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಎರಡೂ ಪಕ್ಷಗಳ ಟಿಕೆಟ್..? * ಟಿಕೆಟ್ ಹಂಚಿಕೆಯಲ್ಲಿ ತಲೆ ಕೆಡಿಸಿಕೊಂಡ ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್. * ದೆಹಲಿ ಪಡೆಸಾಲೆಯಲ್ಲಿ ಟಿಕೆಟ್ ಹಂಚಿಕೆ ಚರ್ಚೆ. * ಇನ್ನೂ ಬಗೆಹರಿಯದ ಟಿಕೆಟ್ ಹಂಚಿಕೆ ಗೊಂದಲ. * ಟಿಕೆಟ್ಗಾಗಿ ದೆಹಲಿ ಕದ ತಟ್ಟಿದ ಟಿಕೆಟ್ ಆಕಾಂಕ್ಷಿಗಳು. * ಟಿಕೆಟ್ ಬೇಕೆಂದು ದೆಹಲಿಯಲ್ಲಿ ಬೀಡು ಬಿಟ್ಟ ಟಿಕೆಟ್ ಆಕಾಂಕ್ಷಿಗಳು. * ಜಾತಿ ಲೆಕ್ಕಾಚಾರ ಹಾಕಿಕೊಂಡು ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ. * ಒಂದು ವೇಳೆ ಟಿಕೆಟ್ ಕೈತಪ್ಪಿದ್ದೆ ಆದಲ್ಲಿ ಬಂಡಾಯದ ಬಿಸಿ ತಟ್ಟಿಸಲು ಚಿಂತನೆ. * ಟಿಕೆಟ್ ಆಕಾಂಕ್ಷಿಗಳು ಬಂಡಾಯ ಏಳದಂತೆ ದೆಹಲಿಯಲ್ಲಿ ಚರ್ಚೆ ನಡೆಸಿದ ನಾಯಕರು. * ಎರಡೂ ರಾಷ್ಟ್ರೀಯ ಪಕ್ಷಗಳಿಗೂ ತಟ್ಟಲಿದೆ ಬಂಡಾಯದ ಬಿಸಿ. ಇದು...
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಹಾವೇರಿ : ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೊದಲ ದಿನ ಮೂರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಹಿಂದೂಸ್ತಾನ ಜನತಾ ಪಕ್ಷದಿಂದ ತಳವಾರ ಶಿವಕುಮಾರ ಎರಡು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರವಿ ಕೃಷ್ಣಾರೆಡ್ಡಿ ಹಾಗೂ ಸೋಸಿಯಾಲಿಸ್ಟ ಪಾರ್ಟಿ (ಇಂಡಿಯಾ)ಯಿಂದ ಖಾಜಾಮೋಹಿದ್ದಿನ ಗುಡಗೇರಿ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾವಿ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ ಹಾಗೂ ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ ಅವರು ಉಪಸ್ಥಿತರಿದ್ದರು. ಅ.25 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ಅ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ.
ಗ್ರಾಮ ಪಂಚಾಯತಿ ಉಪ ಚುನಾವಣೆಗೆ ದಿನಾಂಕ ನಿಗದಿ, ಹುನಗುಂದ ಗ್ರಾಮ ಪಂಚಾಯತಿ 1 ಸ್ಥಾನಕ್ಕೆ ಎಲೆಕ್ಷನ್ ಫಿಕ್ಸ್..!
ಬೆಂಗಳೂರು: ಗ್ರಾಮ ಪಂಚಾಯತಿ ಉಪಚುನಾವಣೆಗೆ ಮುಹೂರ್ತ ಪಿಕ್ಸ್ ಆಗಿದೆ. ನವೆಂಬರ್ 23 ರಂದು ಉಪಚುನಾವಣೆ ನಡೆಸಲು ದಿನಾಂಕ್ ಫಿಕ್ಸ್ ಆಗಿದೆ. ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ದಿನಾಂಕ ಘೋಷಣೆಯಾಗಿದೆ. ಅಂದಹಾಗೆ, ಹುನಗುಂದ ಗ್ರಾಮ ಪಂಚಾಯತಿ ವಾರ್ಡ್ ನಂಬರ್ 1 ರ ಸದಸ್ಯೆ ಯಲ್ಲವ್ವ ಇಟ್ಲಾಪುರ ನಿಧನದಿಂದ ತೆರವಾಗಿರೋ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ವಿವರ ಇಲ್ಲಿದೆ..! ದಿನಾಂಕ 06-11-2024 (ಬುಧವಾರ) ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನವಾಗಿದೆ. 12-11-2024 (ಮಂಗಳವಾರ) ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 13-11-2024 (ಬುಧವಾರ) ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದೆ. 15-11-2024 (ಶುಕ್ರವಾರ) ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 23-11-2024 ಶನಿವಾರ, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನವಾಗಿದೆ. ಅವತ್ತು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ 25-11-2024 (ಸೋಮವಾರ) ರಂದು ಮತದಾನವನ್ನು ನಡೆಸಬಹುದಾಗಿದೆ. ಆ ದಿನ ಬೆಳಿಗ್ಗೆ 7-00...