ದ್ವಿತೀಯ PUC ಪರೀಕ್ಷೆ ರದ್ದಾಗಿದ್ದಕ್ಕೆ ಈ ವಿದ್ಯಾರ್ಥಿನಿಯದ್ದು ಎಂಥ ದುರಂತ ನೋಡಿ..!

ದ್ವಿತೀಯ PUC ಪರೀಕ್ಷೆ ರದ್ದಾಗಿದ್ದಕ್ಕೆ ಈ ವಿದ್ಯಾರ್ಥಿನಿಯದ್ದು ಎಂಥ ದುರಂತ ನೋಡಿ..!

ಶಿರಸಿ: ಸಾಮಾನ್ಯವಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದ್ರಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಈಗಿನ ಉದ್ಯೋಗ ಕ್ಷೇತ್ರದಲ್ಲಿ ಬೇಸ್ ಅಂತಾನೆ ಪರಿಗಣಿಸಲ್ಪಟ್ಟಿದೆ. ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ರದ್ದಾದ ಖುಷಿಯಲ್ಲಿರುತ್ತಾರೆ. ಆದ್ರೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಾನೆ ಊಟ, ನಿದ್ದೆ ಬಿಟ್ಟು ಓದೋ ಉದಾಹರಣೆಗಳು ಕೂಡ ಇವೆ. ಅದ್ರಲ್ಲೂ ಈ ಕೋವಿಡ್ ಅನ್ನೋದು ಬಂದಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಧೋಗತಿಯಾಗಿದೆ. ಸರ್ಕಾರಗಳೂ ಕೂಡ ಪದೇ ಪದೇ ನಿರ್ಣಯಗಳನ್ನ ಬದಲಿಸುತ್ತಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದ ಈಗಿನ ನಿರ್ಧಾರಕ್ಕೆ ತಲೆಕೆಡಿಸಿಕೊಂಡಿದ್ದಂತೂ ಹೌದು. ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆ ಒಂದು ತಾಜಾ ಉದಾಹರಣೆಯಾಗಿದೆ. ಹೌದು.. ದ್ವಿತಿಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊರ್ವಳು ತಾನು ವರ್ಷ ಪೂರ್ತಿ ಓದಿರೋದು ವ್ಯರ್ಥವಾಯಿತು ಅನ್ನೋದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ನಡೆದಿದೆ. ತಾಲೂಕಿನ ಯಡಳ್ಳಿ...

ನಾಳೆಯಿಂದ ಪರಿಷ್ಕೃತ ಲಾಕ್ ಡೌನ್ ಜಾರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏನಿರತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಡೀಟೇಲ್ಸ್..!

ನಾಳೆಯಿಂದ ಪರಿಷ್ಕೃತ ಲಾಕ್ ಡೌನ್ ಜಾರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏನಿರತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಡೀಟೇಲ್ಸ್..!

ಕಾರವಾರ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಪರಿಷ್ಕ್ರತ ಆದೇಶದನ್ವಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಗಸೂಚಿ ಬಿಡುಗಡೆಯಾಗಿದೆ. ನಾಳೆ ಸೋಮವಾರದಿಂದ ಜೂನ್ 21 ರವರೆಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಯ ಪಾಲನೆಯೊಂದಿಗೆ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಆಪ್ಟಿಕಲ್ ಅಂಗಡಿಗಳು, ರಸ್ತೆ ಬದಿ ಮಾರಾಟಗಾರರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಕಾರರಿಗೆ ಹಾಗೂ ಮದ್ಯದಂಗಡಿ ಮತ್ತು ಮಳಿಗೆಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅನುಮತಿಸಿದೆ ಎಂದರು. ಎಲ್ಲಾ...

ಮೂಕಪ್ರಾಣಿಗಳ ಮೂಕರೋಧನೆಗೆ ಮಿಡಿದ ಮನಗಳು: ಬಿಡಾಡಿ ದನಗಳಿಗೆ, ಶ್ವಾನಗಳಿಗೆ ಆಹಾರ..!

ಮೂಕಪ್ರಾಣಿಗಳ ಮೂಕರೋಧನೆಗೆ ಮಿಡಿದ ಮನಗಳು: ಬಿಡಾಡಿ ದನಗಳಿಗೆ, ಶ್ವಾನಗಳಿಗೆ ಆಹಾರ..!

ಮುಂಡಗೋಡ: ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಮೂಕ ಪ್ರಾಣಿಗಳೂ ಕೂಡ ಇನ್ನಿಲ್ಲದಂತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಕೋ ಎನ್ನುತ್ತಿರೋ ಪಟ್ಟಣದ ಬೀದಿಗಳಲ್ಲಿ ಕರೆದು ಆಹಾರ ನೀಡುವವರಿಲ್ಲದೇ ಬಿಡಾಡಿ ದನಗಳು ಹಸಿವಿನಿಂದ ನರಳುತ್ತಿವೆ. ಶ್ವಾನಗಳು ತುತ್ತು ಕೂಳಿಗಾಗಿ ಅಲೆದಾಡುತ್ತಿವೆ. ಹೀಗಾಗಿ ಇದನ್ನೇಲ್ಲ ನೋಡಿದ ಕೆಲ ಯುವಕರ ಟೀಂ‌ ಮುಂಡಗೋಡದಲ್ಲಿ ಮೂಕ ಪ್ರಾಣಿಗಳ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ನಿಮಗೆ ನೆನಪಿರಲಿ, ಈಗ್ಗೆ ಕೆಲವೇ ದಿನಗಳ ಹಿಂದೆ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಮೂಕಪ್ರಣಿಗಳ ಮೂಕ ರೋಧನದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಫಸ್ಟ್ ನ್ಯೂಸ್ ಸುದ್ದಿಗೆ ಸ್ಪಂಧಿಸಿರೋ ನಂದಿಕಟ್ಟಾ ಗ್ರಾಮದ ಮಹಾರಾಜ್ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಮುಂಡಗೋಡ ಪಟ್ಟಣದಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಶ್ವಾನಗಳಿಗೆ ಹಾಗೂ ಬಿಡಾಡಿ ದನಗಳಿಗೆ ಮೇವು, ಆಹಾರ ನೀಡುವ ಮೂಲಕ ಮಾನವೀಯತೆ ಕಾರ್ಯ ತೋರಿದ್ದಾರೆ.

ತನಗೆ ಕಚ್ಚಿದ ಹಾವಿನ ಜೊತೆ ಆಸ್ಪತ್ರೆಗೆ ಬಂದ ಯುವಕ..! ಬೆಚ್ಚಿಬಿದ್ದ ಜನ..!!

ತನಗೆ ಕಚ್ಚಿದ ಹಾವಿನ ಜೊತೆ ಆಸ್ಪತ್ರೆಗೆ ಬಂದ ಯುವಕ..! ಬೆಚ್ಚಿಬಿದ್ದ ಜನ..!!

ಬಳ್ಳಾರಿ: ತನಗೆ ಕಚ್ಚಿದ ಹಾವನ್ನ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ ಇಲ್ಲೊಬ್ಬ ಬೂಪ. ಅಂದಹಾಗೆ ಇದು ನಡೆದಿರೋದು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ. ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ಯುವಕನಿಗೆ ಇಂದು ಬೆಳಿಗ್ಗೆ ಹಾವು ಕಚ್ಚಿದೆ.ನನಗೆ ನೀನು ಕಚ್ಚಿದಿಯಾ, ನಿನ್ನ ಬಿಡೋದಿಲ್ಲ ಅಂತಾ ಹಾವು ಹಿಡಿದು ಆ ಹಾವಿನ ಜೊತೆಗೇ ಆಸ್ಪತ್ರೆಗೆ ಬಂದಿದ್ದಾನೆ‌. ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಹಾವು ಹಿಡಿದು ತಂದಿದ್ದ ಯುವಕನನ್ನು ನೋಡಿ ಭಯಗೊಂಡಿದ್ದಾರೆ. ಜನ ಹೌಹಾರಿದ್ದಾರೆ.

ಪೆಟ್ರೊಲ್ ದರ ಏರಿಕೆಗೆ ಖಂಡನೆ: ಅಳ್ನಾವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..!

ಪೆಟ್ರೊಲ್ ದರ ಏರಿಕೆಗೆ ಖಂಡನೆ: ಅಳ್ನಾವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..!

ಧಾರವಾಡ: ಕಲಘಟಗಿ ವಿಧಾನಸಭಾ ಕ್ಷೇತ್ರದ ಅಳ್ನಾವರದಲ್ಲಿ ನಾಗರಾಜ ಛಬ್ಬಿ ಬೆಂಬಲಿಗರಿಂದ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಪೆಟ್ರೋಲ್ ದರ ಏರಿಕೆ ಕುರಿತು, ಪೆಟ್ರೊಲ್ ಹಾಕಿಸಿಕೊಳ್ಳಲು ಬಂದ ಜನರ ಅಭಿಪ್ರಾಯ ಕೇಳಲಾಯಿತು. ಸಕಷ್ಟು ಜನರು ಪೆಟ್ರೊಲ್ ದರ ಏರಿಕೆಗೆ ಖಂಡನೆ ವ್ಯಕ್ತ ಪಡಿಸಿದ್ರು. ಈ ಸಂಧರ್ಭದಲ್ಲಿ ಪ.ಪಂ.ಸದಸ್ಯ ತಮೀಮ್ ತೆರಗಾಂವ, ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮುಗಳಿ, ಮಾಜಿ ಗ್ರಾ.ಪಂ ಅಧ್ಯಕ್ಷ ರಾಮೂ ಕೋಲೇಕರ, ಅಬೂಬಕರ ನದಾಫ, ಶಾಮಸುಂಧರ ಗಾಯಕವಾಡ, ಶಶಿಕುಮಾರ ಗಾಣಿಗೇರ, ಶಂಕರ ಗಿರಿಯಾಲ, ಸದ್ದಾಂ ಬೋಗೂರ, ಅಶೋಕ ತಿರಕನ್ನವರ, ಇಸ್ಮಾಯಿಲ್ ಪಠಾಣ, ಇಸ್ಮಾಯಿಲ್ ಮಲೀಕಬಾರ, ರಾಹುಲ್ ಶಿಂಧೆ ಸೇರೊದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯಾಸರ್ಗಿಯಲ್ಲಿ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ: ನಾಲ್ವರ ವಿರುದ್ಧ ಕೇಸ್..!

ನ್ಯಾಸರ್ಗಿಯಲ್ಲಿ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ: ನಾಲ್ವರ ವಿರುದ್ಧ ಕೇಸ್..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ಮಾಡಿ 4 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ‌. ಮೈಲಾರಿ ಮಹದೇವಪ್ಪ ಸಾಗರ, ಮಂಜುನಾಥ್ ಹನ್ಮಂತಪ್ಪ ಉಪಾದ್ಯಾಯ, ಬಸವಂತಪ್ಪ ಲಕ್ಷ್ಮಣ ಮಡ್ಡಿ ಹಾಗೂ ಮಂಜುನಾಥ ನಾಗಪ್ಪ ಧರ್ಮೋಜಿ ಎಂಬುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ದಾಳಿ ವೇಳೆ 2,200 ರೂ.‌ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌

ಭಾರಿ ಮಳೆಯಿಂದ ಶೇಂಗಾ ಬೆಳೆ ಮಣ್ಣುಪಾಲು; ಮನನೊಂದ ರೈತ ಆತ್ಮಹತ್ಯೆ..!

ಭಾರಿ ಮಳೆಯಿಂದ ಶೇಂಗಾ ಬೆಳೆ ಮಣ್ಣುಪಾಲು; ಮನನೊಂದ ರೈತ ಆತ್ಮಹತ್ಯೆ..!

ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೊಬ್ಬ ಕಾಡಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವೇಂದ್ರಪ್ಪ ಈರಪ್ಪ ತೆಗ್ಗಳ್ಳಿ(60) ಎಂಬುವ ರೈತನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. 4 ಎಕರೆ ಜಮೀನು ಹೊಂದಿರೋ ರೈತ ಈ ವರ್ಷ 1ಲಕ್ಷ 20 ಸಾವಿರ ರೂಪಾಯಿ ಖರ್ಚು ಮಾಡಿ ಶೇಂಗಾ ಬೆಳೆದಿದ್ದ‌. ಆದ್ರೆ ಇತ್ತಿಚೆಗೆ ಸುರಿದ ಭಾರೀ ಮಳೆಯಿಂದ ಬೆಳೆದಿದ್ದ ಶೇಂಗಾ ಎಲ್ಲಾ ಹಾಳಾಗಿತ್ತು. ಹೀಗಾಗಿವಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಕೈಕೊಟ್ಟ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಮೃತನ ಪುತ್ರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಆ ಪುಟ್ಟ ಕಂದಮ್ಮನ ಸಾವಿಗೆ “ಅಯ್ಯೋ ಪಾಪ ಹೀಗೆ ಆಗಬಾರದಿತ್ತು” ಅಂದ್ರಷ್ಟೇ ಸಾಕಾ..? ಹಾಗಾದ್ರೆ ಇನ್ನೇಷ್ಟು ಬಲಿ ಬೇಕು..?

ಆ ಪುಟ್ಟ ಕಂದಮ್ಮನ ಸಾವಿಗೆ “ಅಯ್ಯೋ ಪಾಪ ಹೀಗೆ ಆಗಬಾರದಿತ್ತು” ಅಂದ್ರಷ್ಟೇ ಸಾಕಾ..? ಹಾಗಾದ್ರೆ ಇನ್ನೇಷ್ಟು ಬಲಿ ಬೇಕು..?

ನಿಜ, ಮಮ್ಮಲ ಮರುಗುತ್ತಿದೆ ಇಡೀ ಮುಂಡಗೋಡ..! ಹಾಗೇ ಒಮ್ಮೆ ಕಲ್ಪಿಸಿಕೊಳ್ಳಿ, ಆ ಕಂದಮ್ಮ ಸಾವು ಬದುಕಿನ ಮದ್ಯೆ ಹೋರಾಡುತ್ತ, ಹುಬ್ಬಳ್ಳಿಯ ಕಿಮ್ಸ್ ICU ಬೆಡ್ಡಿನ ಮೇಲೆ ನರಳಿತ್ತಿರೋ ಸಂದರ್ಭ, ಆ ಹೆತ್ತ ಕರುಳುಗಳು ಪಟ್ಟಿರೋ ಸಂಕಟ ಎಷ್ಟಿರಬಹುದು ಅಲ್ವಾ..? ಇದೇಲ್ಲ ಸಾಕ್ಷಿ ಕೇಳುವವರಿಗೆ ಯಾಕೆ ಅರ್ಥವಾಗ್ತಿಲ್ಲ..? ಇದು, ಮುಂಡಗೋಡ ತಾಲೂಕಿನ ಜನರ ಮಿಲಿಯನ್ ಡಾಲರ್ ಪ್ರಶ್ನೆ. ಸಾಕ್ಷಿ ಬೇಕಂತೆ..? ಎಲ್ಲಿಂದ ನಗಬೇಕೋ ಅರ್ಥವೇ ಅಗುತ್ತಿಲ್ಲ ಕಣ್ರಿ, ಆ ಮುಗ್ದ ಕಂದಮ್ಮನ ಸಾವಿಗೆ ಕಾರಣನಾದ ವೈದ್ಯನ ವಿರುದ್ಧ ಕ್ರಮ‌ ಕೈಗೊಳ್ಳಲು ಸಾಕ್ಷಿ ಬೇಕಂತೆ..! ಹಾಗಾದ್ರೆ ಇನ್ಮುಂದೆ, ಮುಂಡಗೋಡ ತಾಲೂಕಿನ ಹಳ್ಳಿಗಳ ಮುಗ್ದ ಜನರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗಬೇಕು ಅಂದ್ರೆ ಅದಕ್ಕೆ ಪೂರಕವಾದ ಸಾಕ್ಷಿ ಇಟ್ಕೊಂಡೆ ಹೋಗಬೇಕೆನೋ..? ಅಷ್ಟಕ್ಕೂ, ಸಾಕ್ಷಿಯ ಹೆಸರಲ್ಲಿ ಬಡವರನ್ನು ಹೆದರಿಸಿ ಇನ್ನೇಷ್ಟು ಮುಗ್ದ ಪ್ರಾಣಗಳ ಜೊತೆ ಚೆಲ್ಲಾಟವಾಡೋದು..? ಆ ಹೆತ್ತವರ ಕರುಳ ಕಣ್ಣೀರಿನ ಶಾಪ ಸುಮ್ನೆ ಬಿಡತ್ತಾ..? ಅಂದಹಾಗೆ, ಇಲ್ಲಿ ಸಾಕ್ಷಿ ಕೊಡಿ ಅಂತಾ ಕೇಳ್ತಿರೋರು ನಮ್ಮ ಪೊಲೀಸರು...

ಪೆಟ್ರೊಲ್ ಬೆಲೆ ಏರಿಕೆಗೆ ಖಂಡನೆ: ಮುಂಡಗೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ..!

ಪೆಟ್ರೊಲ್ ಬೆಲೆ ಏರಿಕೆಗೆ ಖಂಡನೆ: ಮುಂಡಗೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ..!

ಮುಂಡಗೋಡ: ಕೇಂದ್ರ ಸರ್ಕಾರ ಪದೇ ಪದೇ ತೈಲ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಶೀಘ್ರವೇ ಪೆಟ್ರೊಲ್ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ರು. ಈ ಸಂದರ್ಭದಲ್ಲಿ ಮುಂಡಗೋಡ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಎಂ. ನಾಯಕ್ ಮುಂಡಗೋಡ ಉಸ್ತುವಾರಿಗಳಾದ ಸುರೇಶ್ ಸವಣೂರು, ಎಂ ಎನ್ ದುಂಡಿಸಿ, ಅಲಿ ಹಸನ್ ಬೆಂಡಿಗೇರಿ, ಧರ್ಮರಾಜ್ ನಡಿಗೇರ, ರಾಜು ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಗೌಸ್ ಮಕಾನದಾರ, ಜಾಫರ ಹಂಡಿ, ನಾಗರಾಜ ಹಂಚಿನಮನಿ, ರಾಜು ಬೋವಿ, ಮಲ್ಲು ಗೌಳಿ, ಜೈನೂ ಬೆಂಡಿಗೇರಿ, ಅಲ್ಲಾವುದ್ದೀನ್, ಬಸವರಾಜ ಆಸ್ತಕಟ್ಟಿ, ಆಶಿಫ್ ಮಕಾಂದಾರ ಸೇರಿದಂತೆ ತಾಲ್ಲೂಕಿನ ಮುಖಂಡರುಗಳು, ಘಟಕದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು

ಪೆಟ್ರೊಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ..!

ಪೆಟ್ರೊಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ..!

ದೇವರಹಿಪ್ಪರಗಿ: ಪಟ್ಟಣದ ಪೆಟ್ರೊಲ್ ಬಂಕ್ ಹತ್ತಿರ ಇಂದು ಕಾಂಗ್ರೆಸ್ ಕಾರ್ಯಕರ್ತರು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಪ್ರತಿಭಟನೆ ಮಾಡಿ ಮಾತನಾಡಿದ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗುಡಿಮನಿ, ದೇಶದಲ್ಲಿ ಸುಮಾರು ಏಳು ವರ್ಷಗಳಿಂದ ಪೆಟ್ರೊಲ್ ಬೆಲೆ ಏರುತ್ತಲೇ ಇದೆ. ದಿನನಿತ್ಯ ಬಳಸುವ ಗ್ಯಾಸ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರ್ ಬಿಜಾಪುರ್, ಬಶೀರ್ ಬೇಪಾರಿ, ರಜಾಕ್ ಹರವಾಳ, ರಾಘವೇಂದ್ರ ಪಡಗಾನೂರ, ಯಾಕೂಬ್ ಶಹಪುರ್, ದಾದಾಪೀರ್ ಬೇಪಾರಿ, ಮಾಂತೇಶ್ ಚಲವಾದಿ, ರಾಕೇಶ್ ಮೇಲಿನಮನಿ, ಹಾಜಿಲಾಲ, ಮಸಳಿ ಹೀಗೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!