ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ರಾತ್ರೋ ರಾತ್ರಿ ಎಳೆದು ತಂದಿದ್ದಾರೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ ಅಡಿಕೆ ಕಳ್ಳತನದ ಕೇಸ್ ಸಾರಾಸಗಟಾಗಿ ಬೇಧಿಸಿದೆ. ಕೊಪ್ಪ (ಇಂದೂರು) ಗ್ರಾಮದ ಫಕ್ಕಿರೇಶ ಮಲ್ಲಪ್ಪ ದೊಡ್ಮನಿ ಎಂಬುವವನೇ ಅಡಿಕೆ ಕಳ್ಳತನದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತನನ್ನು ಖಚಿತ ಸುಳಿವಿನ ಮೇರೆಗೆ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿದಂತೆ ಮತ್ತವರ ತಂಡ ದಾಳಿ ಮಾಡಿ (ಇಂದೂರು)ಕೊಪ್ಪದಲ್ಲಿ ವಶಕ್ಕೆ ಪಡೆದಿದೆ. ಸಾಲ ತೀರಿಸಲು ಕಳ್ಳತನ..! ಅಂದಹಾಗೆ, ಇಂದೂರು ಕೊಪ್ಪ ಗ್ರಾಮದ ಆರೋಪಿ ಫಕ್ಕಿರೇಶ್ ದೊಡ್ಮನಿ ವಿಪರೀತ ಸಾಲಮಾಡಿಕೊಂಡಿದ್ದನಂತೆ. ಹೀಗಾಗಿ, ಹೇಗಾದ್ರೂ ಸರಿ ಸಾಲ ತೀರಿಸಬೇಕು ಅಂತಾ ಫಿಲ್ಡಿಗೆ ಇಳಿದಿದ್ದ ಈತ ಕೊನೆಗೆ ಕಳ್ಳತನದ ಸುಲಭ ಮಾರ್ಗ ಕಂಡುಕೊಂಡಿದ್ದನಂತೆ. ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹಾಗೋ ಹೀಗೊ ಸಾಲದ ಬಾಬತ್ತು ಹೊಂದಿಸಿಕೊಳ್ಳುತ್ತಿದ್ದ ಆರೋಪಿಗೆ ಅಡಿಕೆಯ ಕಳ್ಳತನದ ಮತ್ತೊಂದು ಮಾರ್ಗ ಸಿಕ್ಕಿದೆ. ಹೀಗಾಗಿ,...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!
ಮುಂಡಗೋಡ : ಪಟ್ಟಣದಲ್ಲಿ ಇಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ, ವಕೀಲರ ಸಂಘ ಮನವಿಯೊಂದನ್ನ ಅರ್ಪಿಸಿದೆ. ಜನನ-ಮರಣ ನೋಂದಣಿ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ವಾಪಸ್ ಪಡೆದು, ಈ ಹಿಂದಿನಂತೆ ಜೆ.ಎಮ್.ಎಫ್.ಸಿ. ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಜನನ-ಮರಣ ನೋಂದಣಿ ಸಂದರ್ಭದಲ್ಲಿ ವಿಳಂಭ ಅಥವಾ ಬೇರೆ ಯಾವುದೋ ವಿವಾದಕ್ಕೆ ಸಂಬಂಧಿಸಿದಂತೆ, ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಅಂತಹ ವ್ಯಕ್ತಿಗಳು ಈ ಹಿಂದೆ, ಜನನ-ಮರಣ ನೋಂದಣಿ ಕಾಯ್ದೆ ಕಲಂ, 13 ರ ಪ್ರಕಾರ ಸ್ಥಳೀಯ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ನೀಡಿ, ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಅಂತಹ ವ್ಯಕ್ತಿಯ ಜನನ-ಮರಣ ಪ್ರಮಾಣ ಪತ್ರ ನೀಡುತ್ತಿದ್ದವು. ಆದ್ರೆ, ಸದ್ಯ ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಈಗಿರುವ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಅಧಿಕಾರವನ್ನು ತೆಗೆದು ಆಯಾ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ನೀಡಿದೆ. ಹೀಗಾಗಿ ಈ ಆದೇಶದ ವಿರುದ್ಧ ಅಸಮಾಧಾನಗೊಂಡಿರೋ ವಕೀಲರು, ಇದು ಸಾಮಾನ್ಯ ಜನರಿಗೆ ತೊಂದರೆ ನೀಡುವ ಮತ್ತು ಕ್ರಮ ಬದ್ದ ರೀತಿಯಲ್ಲಿ...
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಕೇಸ್, ಇಬ್ಬರು ಆರೋಪಿಗಳು ಅರೆಸ್ಟ್..!
ಮಂಗಳೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ ಕೊಟ್ಟಾರು ಹತ್ಯೆ ಕೇಸ್ ನಲ್ಲಿ ಇಬ್ಬರು ಆತೋಪಿಗಳು ಅರೆಸ್ಟ್ ಆಗಿದ್ದಾರೆ. ಝಾಕೀರ್ ಮತ್ತು ಮಹ್ಮದ್ ಶಫೀಕ್ ಎಂಬುವ ಇಬ್ಬರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ ಅಂತಾ ದಕ್ಷಿಣ ಕನ್ನಡ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ. ಬೆಳ್ಳಾರೆ ನಿವಾಸಿ ಶಫೀಕ್ ಹಾಗೂ ಸವಣೂರು ನಿವಾಸಿ ಝಾಕೀರ್ ನನ್ನು ಬಂಧಿಸಿರೋ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಬಂಧಿತ ಇಬ್ಬರೂ ಆರೋಪಿಗಳಿಗೆ PPI ಸಂಘಟನೆ ನಂಟು ಇದೆಯಾ ಅಂತಾ ವಿಚಾರಣೆ ನಡೆಸಲಾಗ್ತಿದೆ.
ಪ್ರವೀಣ್ ಹತ್ಯೆಗೆ ಖಂಡನೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರ “ರಾಜೀನಾಮೆ” ಬಾಣ..!
ವಿಜಯಪುರ: ಬಿಜೆಪಿ ಮುಖಂಡ ಪ್ರವೀಣ್ ಕೊಟ್ಟಾರು ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಖುದ್ದು ಬಿಜೆಪಿ ಪಕ್ಷದಲ್ಲಿ ತಮ್ಮದೇ ಪಕ್ಷದ ಆಡಳಿತದ ವಿರುದ್ಧ ಕಾರ್ಯಕರ್ತರು ಸಿಡಿದೇಳುತ್ತಿದ್ದಾರೆ. ಜೊತೆಗೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಪದಾಧಿಕಾರಿಗಳು ತಮ್ಮ ಒಡಲಾಳದ ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಂಡು ಹಿಂಡು ರಾಜೀನಾಮೆ..! ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಹಾಗೂ ಒಂಭತ್ತು ಮಂಡಳಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳಗೆ ರಾಜಿನಾಮೆ ಸಲ್ಲಿಸಿರೋ ಪದಾಧಿಕಾರಿಗಳು ಈ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜೀನಾಮೆ ಪತ್ರದಲ್ಲೇನಿದೆ..? ಇನ್ನು ಬಿಜೆಪಿ ಪದಾಧಿಕಾರಿಗಳು ನೀಡಿರೋ ರಾಜೀನಾಮೆ ಪತ್ರದಲ್ಲಿ “ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸವಿದೆ, ಬಲಿಷ್ಟ ಸಿದ್ದಾಂತಕ್ಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತಹದ್ದು...
ನಂದಿಕಟ್ಟಾದಲ್ಲಿ ಪ್ರವೀಣ್ ಹತ್ಯೆಗೆ ಖಂಡನೆ, ಬಿಜೆಪಿ ಯುವ ಮೋರ್ಚಾದಿಂದ ಶೃದ್ಧಾಂಜಲಿ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಕೊಟ್ಟಾರು ಸಾವಿಗೆ, ಬಿಜೆಪಿ ಯುವ ಮೋರ್ಚಾ ಘಟಕ ಕಂಬನಿ ಮಿಡಿದಿದೆ. ಹತ್ಯೆಯಾಗಿರೋ ಪ್ರವೀಣ್ ಕೊಟ್ಟಾರು ಭಾವಚಿತ್ರಕ್ಕೆ ಹೂ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸಿದ ಯುವ ಕಾರ್ಯಕರ್ತರು, ಹಂತಕರಿಗೆ ಹೆಡೆಮುರಿ ಕಟ್ಟುವಂತೆ ಆಗ್ರಹಿಸಿದ್ದಾರೆ. ಈ ವೇಳೆ ನಂದಿಕಟ್ಟಾ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಂಡಗೋಡ ಬಿಜೆಪಿ ಯುವ ಮೋರ್ಚಾದಿಂದ ಪ್ರವೀಣ್ ನೆಟ್ಟಾರು ಗೆ ಶೃದ್ಧಾಂಜಲಿ..!
ಮುಂಡಗೋಡ: ಬಿಜೆಪಿ ಯುವ ಮುಖಂಡ, ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಖಂಡನೆ ವ್ಯಕ್ತ ಪಡಿಸಿದೆ. ಪಟ್ಟಣದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಹತ್ಯೆಯಾದ ಪ್ರವೀಣ್ ಕೊಟ್ಟಾರುಯವರಿಗೆ ಶೃದ್ಧಾಂಜಲಿ ಅರ್ಪಿಸಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ತೀವ್ರ ಖಂಡನೆ ವ್ಯಕ್ತ ಪಡಿಸಿರೋ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಯುವ ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು.
ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಕಾರ್ಯಕರ್ತರು, ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ.!
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಇಡೀ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಖುದ್ದು ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆ ಕಾರ್ಯಕರ್ತರೇ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಾಧ್ಯಂತ ಹಲವು ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ, ಜವಾಬ್ದಾರಿಗಳಿಗೆ ಹಿಂಡು ಹಿಂಡಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ನಡುವೆ ನಾಳೆಯೇ ಮಾನ್ಯ “ಬೊಮ್ಮಾಯಿ ಸರ್ಕಾರ” ಒಂದು ವರ್ಷ ಪೂರೈಸಿದ ಸಂಭ್ರಮೋತ್ಸವ ಆಚರಣೆಯಲ್ಲಿ ಬ್ಯುಸಿಯಾಗಿದೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಣಾನೇಂದ್ರ ವಿರುದ್ಧ ಇನ್ನಿಲ್ಲದಂತೆ ಆಕ್ರೋಶ ಹೊರ ಹಾಕ್ತಿದಾರೆ. ಬಹುಶಃ ಇತಿಹಾಸದಲ್ಲಿ ಆಡಳಿತಾರೂಢ ಪಕ್ಷವೊಂದರ ಕಾರ್ಯಕರ್ತರು ತಮ್ಮ ಪಕ್ಷದ ಆಡಳಿತದ ವಿರುದ್ಧವೇ ಇಷ್ಟೊಂದು ಆಕ್ರೋಶ ಹೊರಹಾಕಿದ್ದು ಇದೇ ಮೊದಲು ಇರಬೇಕು. ಹಾಗಿದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೇಗೆಲ್ಲ ಆಕ್ರೋಶ ವ್ಯಕ್ತವಾಗ್ತಿದೆ ಗೊತ್ತಾ..? ಹೇಗೆಲ್ಲ ಸರ್ಕಾರದ ಬಿಜೆಪಿ ಕಾರ್ಯಕರ್ತರು ಕಿಡಿ ಕಾರ್ತಿದಾರೆ ಗೊತ್ತಾ..? ಇಲ್ಲಿದೆ ಕೆಲವು ತುಣುಕುಗಳು..
ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!
ಮುಂಡಗೋಡ: ತಾಲೂಕಿನ ಉಗ್ನಿಕೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಶ್ರೀರಾಮ ಸೇನೆ ಗ್ರಾಮ ಘಟಕದ ವತಿಯಿಂದ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಇರುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು. ಹಲವು ದಿನಗಳಿಂದ ಸ್ವಚ್ಚತೆ ಮಾಡದೇ ಇದ್ದಿದ್ದ ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಿದ ಕಾರ್ಯಕರ್ತರು, ಟ್ಯಾಂಕ್ ಸುತ್ತಮುತ್ತಲಿನ ಗಿಡಗಂಟಿಗಳನ್ನು ಹಾಗೂ ಕೊಳಚೆಯನ್ನು ಸ್ವಚ್ಚಗೊಳಿಸಿದ್ರು. ಈ ಮೂಲಕ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದ್ರು.
ಮುಂಡಗೋಡಿನಲ್ಲಿ ಹಿರಿಯ ಸಾಧಕರಿಗೆ ಸಚಿವರಿಂದ ಸನ್ಮಾನ..!
ಮುಂಡಗೋಡ: ಪಟ್ಟಣದ ಎಲ್.ವಿ.ಕೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ” ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನ ” ಕಾರ್ಯಕ್ರಮದಲ್ಲಿ ಹುನಗುಂದದ ಹಿರಿಯ ಶುಶ್ರೂಕಿ ಶಾಲಿನಿ ನಾಯ್ಕ್ ಸೇರಿದಂತೆ ಹಲವು ಸಾಧಕರಿಗೆ ಸನ್ಮಾನಿಸಲಾಯಿತು. ಸಚಿವ ಶಿವರಾಮ್ ಹೆಬ್ಬಾರ್, ಹಲವು ಹಿರಿಯ ಶುಶ್ರೂಕಿಯರು ಹಾಗೂ ಹಿರಿಯ ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಇದ್ರ ಜೊತೆ ತಾಲೂಕಿನ ಹಿರಿಯ ಆಶಾ ಕಾರ್ಯಕರ್ತೆಯರನ್ನು ಸಚಿವರು ಸನ್ಮಾನಿಸಿದ್ರು. ಈ ವೇಳೆ ಹಲವು ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಸಂಘದ ಪ್ರಚಾರಕ ಸತೀಶ್ ಕಟ್ಟಿಯವರಿಗೆ ಶೃದ್ಧಾಂಜಲಿ ಕಾರ್ಯಕ್ರಮ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ನಲ್ಲಿ ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳಿಂದ ದಿ. ಸತೀಶ್ ಕಟ್ಟಿವರಿಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸೋಮವಾರ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸತೀಶ್ ಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕಾ ಭಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಶೃದ್ದಾಂಜಲಿ ಅರ್ಪಿಸಲಾಯಿತು. ಈ ವೇಳೆ ಭಜರಂಗದಳದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಭಕ್ತಿಪೂರ್ವಕವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು