ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಇಡೀ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಖುದ್ದು ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆ ಕಾರ್ಯಕರ್ತರೇ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಾಧ್ಯಂತ ಹಲವು ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ, ಜವಾಬ್ದಾರಿಗಳಿಗೆ ಹಿಂಡು ಹಿಂಡಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ನಡುವೆ ನಾಳೆಯೇ ಮಾನ್ಯ “ಬೊಮ್ಮಾಯಿ ಸರ್ಕಾರ” ಒಂದು ವರ್ಷ ಪೂರೈಸಿದ ಸಂಭ್ರಮೋತ್ಸವ ಆಚರಣೆಯಲ್ಲಿ ಬ್ಯುಸಿಯಾಗಿದೆ.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಣಾನೇಂದ್ರ ವಿರುದ್ಧ ಇನ್ನಿಲ್ಲದಂತೆ ಆಕ್ರೋಶ ಹೊರ ಹಾಕ್ತಿದಾರೆ. ಬಹುಶಃ ಇತಿಹಾಸದಲ್ಲಿ ಆಡಳಿತಾರೂಢ ಪಕ್ಷವೊಂದರ ಕಾರ್ಯಕರ್ತರು ತಮ್ಮ ಪಕ್ಷದ ಆಡಳಿತದ ವಿರುದ್ಧವೇ ಇಷ್ಟೊಂದು ಆಕ್ರೋಶ ಹೊರಹಾಕಿದ್ದು ಇದೇ ಮೊದಲು ಇರಬೇಕು.
ಹಾಗಿದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೇಗೆಲ್ಲ ಆಕ್ರೋಶ ವ್ಯಕ್ತವಾಗ್ತಿದೆ ಗೊತ್ತಾ..? ಹೇಗೆಲ್ಲ ಸರ್ಕಾರದ ಬಿಜೆಪಿ ಕಾರ್ಯಕರ್ತರು ಕಿಡಿ ಕಾರ್ತಿದಾರೆ ಗೊತ್ತಾ..? ಇಲ್ಲಿದೆ ಕೆಲವು ತುಣುಕುಗಳು..