ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!

ಮುಂಡಗೋಡ : ಪಟ್ಟಣದಲ್ಲಿ ಇಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ, ವಕೀಲರ ಸಂಘ ಮನವಿಯೊಂದನ್ನ ಅರ್ಪಿಸಿದೆ. ಜನನ-ಮರಣ ನೋಂದಣಿ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ವಾಪಸ್ ಪಡೆದು,
ಈ ಹಿಂದಿನಂತೆ ಜೆ.ಎಮ್.ಎಫ್‌.ಸಿ. ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಜನನ-ಮರಣ ನೋಂದಣಿ ಸಂದರ್ಭದಲ್ಲಿ ವಿಳಂಭ ಅಥವಾ ಬೇರೆ ಯಾವುದೋ ವಿವಾದಕ್ಕೆ ಸಂಬಂಧಿಸಿದಂತೆ, ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಅಂತಹ ವ್ಯಕ್ತಿಗಳು ಈ ಹಿಂದೆ, ಜನನ-ಮರಣ ನೋಂದಣಿ ಕಾಯ್ದೆ ಕಲಂ, 13 ರ ಪ್ರಕಾರ ಸ್ಥಳೀಯ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ನೀಡಿ, ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಅಂತಹ ವ್ಯಕ್ತಿಯ ಜನನ-ಮರಣ ಪ್ರಮಾಣ ಪತ್ರ ನೀಡುತ್ತಿದ್ದವು.

ಆದ್ರೆ, ಸದ್ಯ ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಈಗಿರುವ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಅಧಿಕಾರವನ್ನು ತೆಗೆದು ಆಯಾ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ನೀಡಿದೆ. ಹೀಗಾಗಿ ಈ ಆದೇಶದ ವಿರುದ್ಧ ಅಸಮಾಧಾನಗೊಂಡಿರೋ ವಕೀಲರು, ಇದು ಸಾಮಾನ್ಯ ಜನರಿಗೆ ತೊಂದರೆ ನೀಡುವ ಮತ್ತು ಕ್ರಮ ಬದ್ದ ರೀತಿಯಲ್ಲಿ ಜನನ-ಮರಣ ಪ್ರಮಾಣ ಪತ್ರವನ್ನು ಪಡೆಯಲು ಅಸಾಧ್ಯವಾದ ಕ್ರಮ ಅಂತಾ ಅಸಮಾಧಾನ ಹೊರಹಾಕಿದೆ. ಅಲ್ದೆ ಈ ಪ್ರಕರಣಗಳಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಪ್ರಭಾವ ಬೀರಿ ತಮಗೆ ಬೇಕಾದಂತಹ ಆದೇಶವನ್ನು ಪಡೆಯುವ ಸಂಭವವೂ ಇರುತ್ತದೆ ಅಂತಾ ವಕೀಲರ ಸಂಘ ಆತಂಕ ವ್ಯಕ್ತ ಪಡಿಸಿದೆ.

ಇನ್ನು ಹೀಗೆ ಬದಲಾದ ಆದೇಶದಿಂದಾಗಿ ಕಕ್ಷಿದಾರರು ಪ್ರಮಾಣ ಪತ್ರದ ಸಲುವಾಗಿ ಶಿರಸಿಗೆ ಅಲೆಯಬೇಕಾಗುತ್ತದೆ. ಹೀಗಾಗಿ, ಈ ಆದೇಶವನ್ನೇ ದುರುಪಯೋಗ ಪಡೆಸಿಕೊಳ್ಳಲು ಬ್ರೋಕರ್ ಗಳು ಹುಟ್ಟಿಕೊಳ್ಳುವ ಆತಂಕ ಇದ್ದು, ಸರ್ಕಾರ ಈ ಆದೇಶ ಹಿಂಪಡೆಯಬೇಕು ಅಂತಾ ವಕೀಲರು ಆಗ್ರಹಿಸಿದ್ದಾರೆ.

error: Content is protected !!