ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ರಾತ್ರೋ ರಾತ್ರಿ ಎಳೆದು ತಂದಿದ್ದಾರೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ ಅಡಿಕೆ ಕಳ್ಳತನದ ಕೇಸ್ ಸಾರಾಸಗಟಾಗಿ ಬೇಧಿಸಿದೆ.
ಸಾಲ ತೀರಿಸಲು ಕಳ್ಳತನ..!
ಅಂದಹಾಗೆ, ಇಂದೂರು ಕೊಪ್ಪ ಗ್ರಾಮದ ಆರೋಪಿ ಫಕ್ಕಿರೇಶ್ ದೊಡ್ಮನಿ ವಿಪರೀತ ಸಾಲಮಾಡಿಕೊಂಡಿದ್ದನಂತೆ. ಹೀಗಾಗಿ, ಹೇಗಾದ್ರೂ ಸರಿ ಸಾಲ ತೀರಿಸಬೇಕು ಅಂತಾ ಫಿಲ್ಡಿಗೆ ಇಳಿದಿದ್ದ ಈತ ಕೊನೆಗೆ ಕಳ್ಳತನದ ಸುಲಭ ಮಾರ್ಗ ಕಂಡುಕೊಂಡಿದ್ದನಂತೆ. ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹಾಗೋ ಹೀಗೊ ಸಾಲದ ಬಾಬತ್ತು ಹೊಂದಿಸಿಕೊಳ್ಳುತ್ತಿದ್ದ ಆರೋಪಿಗೆ ಅಡಿಕೆಯ ಕಳ್ಳತನದ ಮತ್ತೊಂದು ಮಾರ್ಗ ಸಿಕ್ಕಿದೆ. ಹೀಗಾಗಿ, ರಾತ್ರೊ ರಾತ್ರಿ ಫಿಲ್ಡಿಗೆ ಇಳಿಯುತ್ತಿದ್ದ ಈತ ಇಡಿ ಇಡಿಯಾಗಿ ಅಡಿಕೆಯನ್ನು ತೋಟದಿಂದಲೇ ಎತ್ತುವಳಿ ಮಾಡ್ತಿದ್ದ.
ಅಂದಹಾಗೆ..!
ಮುಂಡಗೋಡಿನ ಅನಿಲ್ ಕಾಮತ್ ಹಾಗೂ ನವೀನ್ ಹುದ್ಲಮನಿ ಎಂಬುವವರ ಅಡಿಕೆ ತೋಟದಲ್ಲಿ ಕಳೆದ ಕೆಲ ದಿನದ ಹಿಂದೆ ಸುಮಾರು ಎಂಟು ಕ್ವಿಂಟಾಲ್ ಅಡಿಕೆ ಕಳ್ಳತನವಾಗಿತ್ತು. ಯಾರೋ ಚಾಲಾಕಿ ಕಳ್ಳರು
ನಮ್ಮ ಅಡಿಕೆ ತೋಟದಲ್ಲಿ ಕಳ್ಳತನ ಮಾಡಿದ್ದಾರೆ ಅಂತಾ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ರು. ಹೀಗಾಗಿ, ಆ ಕ್ಷಣದಿಂದಲೇ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಕಳ್ಳತನ ಆರೋಪಿಯನ್ನು ತಡರಾತ್ರಿ ದಸ್ತಗಿರಿ ಮಾಡಿದ್ದಾರೆ.