ಮಂಗಳೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ ಕೊಟ್ಟಾರು ಹತ್ಯೆ ಕೇಸ್ ನಲ್ಲಿ ಇಬ್ಬರು ಆತೋಪಿಗಳು ಅರೆಸ್ಟ್ ಆಗಿದ್ದಾರೆ. ಝಾಕೀರ್ ಮತ್ತು ಮಹ್ಮದ್ ಶಫೀಕ್ ಎಂಬುವ ಇಬ್ಬರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ ಅಂತಾ ದಕ್ಷಿಣ ಕನ್ನಡ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ.
