ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!


ಮುಂಡಗೋಡ: ತಾಲೂಕಿನ ಉಗ್ನಿಕೇರಿಯಲ್ಲಿ
ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಶ್ರೀರಾಮ ಸೇನೆ ಗ್ರಾಮ ಘಟಕದ ವತಿಯಿಂದ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಇರುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು.

ಹಲವು ದಿನಗಳಿಂದ ಸ್ವಚ್ಚತೆ ಮಾಡದೇ ಇದ್ದಿದ್ದ ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಿದ ಕಾರ್ಯಕರ್ತರು, ಟ್ಯಾಂಕ್ ಸುತ್ತಮುತ್ತಲಿನ ಗಿಡಗಂಟಿಗಳನ್ನು ಹಾಗೂ ಕೊಳಚೆಯನ್ನು ಸ್ವಚ್ಚಗೊಳಿಸಿದ್ರು. ಈ ಮೂಲಕ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದ್ರು.

error: Content is protected !!