ಉತ್ತರ ಕನ್ನಡ ಬಿಜೆಪಿಗೆ ಮತ್ತೆ ಆನೆಬಲ ಬರುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಬಿಜೆಪಿಯ ಪೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಕುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ಇವತ್ತು ಅನಂತಣ್ಣ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಜೊತೆಗೆ ಮತ್ತೋರ್ವ ಪೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಯಾಗಿ ರವಿವಾರ ದೆಹಲಿಯ ವಿಮಾನ ಹತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಹೈಕಮಾಂಡ್ ನಿಂದ ಬುಲಾವ್ ಬಂದ ಸಲುವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನವದೆಹಲಿಗೆ ತೆರಳಿದ್ದಾರೆ. ಜೊತೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಗೂಡಿ ದೆಹಲಿಗೆ ತೆರಳಿದ್ದಾರೆ. ಟಿಕೆಟ್ ಸಲುವಾಗಿ ಬುಲಾವ್..? ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೂವರೂ ಬಿಜೆಪಿ ನಾಯಕರು ಜೊತೆಗೂಡಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ ಅಂತಾ ಬಹುತೇಕ ರಾಜಕೀಯದಿಂದ...
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಐವರು ನಾಪತ್ತೆ, ಓರ್ವನ ಶವ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿಗಳು..!
ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ನಡೆದಿದೆ. ರವಿವಾರ ರಜೆಯ ಸಲುವಾಗಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಓರ್ವನ ಶವ ಪತ್ತೆಯಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ರಾಮನಬೈಲಿನ ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗೂ ರಾಮನಬೈಲಿನ ವಿದ್ಯಾರ್ಥಿ ಉಮರ್ ಸಿದ್ದಿಕ್ ನಾಪತ್ತೆಯಾಗಿದ್ದಾರೆ. ಇದ್ರಲ್ಲಿ ಸಲೀಮ್ ಕಲೀಲ್ ರೆಹಮಾನ್ (44) ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಚಣಕಿ ವಿದ್ಯಾರ್ಥಿನಿ ಜನಪದ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ..! ಗ್ರಾಮಸ್ಥರ ಹರ್ಷ
ಮುಂಡಗೋಡ ತಾಲೂಕಿನ ಬಾಚಣಕಿಯ ಗ್ರಾಮೀಣ ಪ್ರತಿಭೆಯೊಂದು ಸಾಧನೆ ಮಾಡಿದೆ. ಜನಪದ ಗೀತಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಅಂದಹಾಗೆ ಬಾಚಣಕಿ ಗ್ರಾಮದ ಅನುಪಮ ನಾಗಪ್ಪ ಕೊಂಡಿಕೊಪ್ಪ ಎಂಬುವವಳೆ ಸಾಧನೆಗೈದ ವಿದ್ಯಾರ್ಥಿನಿ. ಸದ್ಯ ಮುಂಡಗೋಡ ಲೊಯೊಲಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿನಿ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ಸದ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಇಂದು ಬೆಂಗಳೂರಿನ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹೀಗಾಗಿ ಬಾಚಣಕಿ ಗ್ರಾಮದ ಹಲವು ಮುಖಂಡರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಸೇರಿದಂತೆ ಹಲವರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ.
ಮಳಗಿ ಧರ್ಮಾ ಜಲಾಶಯದಲ್ಲಿ ಶಿರಸಿಯ ವ್ಯಕ್ತಿ ನೀರುಪಾಲು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ..!
ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರು ಪಾಲಾಗಿದ್ದಾನೆ. ನಾಲ್ಕೈದು ಸ್ನೇಹಿತರೊಂದಿಗೆ ಜಲಾಶಯಕ್ಕೆ ಬಂದಿದ್ದ ಶಿರಸಿಯ ವ್ಯಕ್ತಿ ನೀರಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಸಮೀಪದ ಅಂಡಗಿಯ ಅಜೀದ್ ಗುಡೂಸಾಬ್(34) ಎಂಬುವ ವ್ಯಕ್ತಿಯೇ ಜಲಾಶಯದಲ್ಲಿ ನಾಪತ್ತೆಯಾಗಿದ್ದಾನೆ. ಈತ ಇಂದು ಶಿರಸಿಯಿಂದ ತನ್ನ ಸ್ನೇಹಿತರ ಜೊತೆ ಮಳಗಿಯ ಧರ್ಮಾ ಜಲಾಶಯದ ಸೊಬಗು ಸವಿಯಲು ಬಂದಿದ್ದ. ಈ ವೇಳೆ ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ನೀರಲ್ಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ, ತಕ್ಷಣವೇ ಮುಂಡಗೋಡ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದಿದ್ದಾರೆ. ನಾಪತ್ತೆಯಾದವನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಇಂದೂರಿನ ವ್ಯಕ್ತಿಯಿಂದ ನಿವೇಶನ ಸಕ್ರಮ ಹೆಸರಲ್ಲಿ ಅಕ್ರಮ..! ತಹಶೀಲ್ದಾರ್ ಹೆಸರು ಬಳಸಿ ದಂಧೆ ಆರೋಪ..!!
ಮುಂಡಗೋಡ ತಾಲೂಕಿನ ಇಂದೂರಿನ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರಲ್ಲಿ ಹಣ ವಸೂಲಿ ದಂಧೆ ಶುರುವಿಟ್ಟಿದ್ದಾನೆ ಆತನಿಂದ ಸಾರ್ವಜನಿಕರು ಎಚ್ಚರದಿಂದ ಇರಿ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಎಚ್ಚರಿಸಿದ್ದಾರೆ. ಇಂದೂರು ಗ್ರಾಮದ ಹಜರತ್ ಅಲಿ ಬಾಷಾಸಾಬ ಜಾತಗಾರ, ಎಂಬುವವನೇ ಸದ್ಯ ವಂಚಿಸಿರೋ ಆರೋಪ ಹೊತ್ತಿದ್ದು. ಇಂದೂರ ಗ್ರಾಮದ ಮನೆಗಳ ನಿವೇಶನ ಸಕ್ರಮ ಮಾಡುವ ಕುರಿತಾಗಿ 4 ಜನ ಸಾರ್ವಜನಿಕರಿಂದ ತಲಾಟಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ಹೆಸರು ದುರುಪಯೋಗ ಮಾಡಿ, ಸುಳ್ಳು ಹೇಳಿ, ಹಣ ವಸೂಲಿ ಮಾಡಿದ್ದಾನೆ ಅಂತಾ ಖುದ್ದು ತಹಶೀಲ್ದಾರ್ ಶಂಕರ್ ಗೌಡಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ. ಅಲ್ಲದೇ, ಸಾರ್ವಜನಿಕರಿಗೆ ಮೋಸ ಮಾಡಿ ಹಣ ತೆಗೆದುಕೊಂಡಿರೋ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಇಂದು ಪ್ರಕರಣ ದಾಖಲು ಮಾಡಲಾಗುತ್ತಿದೆ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ದು, ತಾಲೂಕಿನ ಸಾರ್ವಜನಿಕರು ನೀವು ನಿಮ್ಮ ಯಾವುದೇ ಕೆಲಸಕ್ಕೆ, ಅರ್ಜಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಅರ್ಜಿ ಕೊಡಬೇಕು. ನೇರವಾಗಿ ತಹಶೀಲ್ದಾರ್ ಭೇಟಿ ಆಗಿ, ನಿಮ್ಮ ಅರ್ಜಿಗಳ ಕುರಿತು...
ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಶಿರಸಿ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲೇ ಗಾಯಗೊಂಡು ಬಿದ್ದಿದ್ದ ಎನ್ನಲಾಗಿದೆ. ಹೀಗಾಗಿ ಇದೇ ವೇಳೆ ದಾರಿಹೋಕರು ಗಮನಿಸಿ ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್, ಹಾಗೂ ಚಾಲಕ ಪ್ರಕಾಶ್ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮುಂಡಗೋಡ ತಾಲೂಕಿನ ಚಿಗಳ್ಳಿ, ಹೊಸಕೊಪ್ಪ ಗ್ರಾಮದವನು ಅಂತಾ ಹೇಳಲಾಗುತ್ತಿದ್ದು, ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡಿನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಖತರ್ನಾಕ ಗ್ಯಾಂಗ್ ಆರೆಸ್ಟ್..!
ಮುಂಡಗೋಡ ಹಾಗೂ ಮಂಚಿಕೇರಿ ಅರಣ್ಯ ಅಧಿಕಾರಿಗಳ ಬ್ರಿಲ್ಲಿಯಂಟ್ ಕಾರ್ಯಾಚರಣೆ ಸಕ್ಸೆಸ್ ಆಗಿದೆ. ಪರಿಣಾಮ ಖತರ್ನಾಕ ಅರಣ್ಯ ರಾಬರಿ ಗ್ಯಾಂಗ್ ಅಂದರ್ ಆಗಿದೆ. ಅಕ್ಟೋಬರ್ 7 ರ ಆಸುಪಾಸಿನಲ್ಲಿ ಮುಂಡಗೋಡ ತಾಲೂಕಿನ ಹಲವು ಕಡೆ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ಅರಣ್ಯ ಸ್ಮಗ್ಲಿಂಗ್ ಕ್ರಿಮಿಗಳನ್ನು ಬಹುತೇಕ ಅಂದರ್ ಮಾಡಲಾಗಿದೆ. ದೂರದ ಮದ್ಯ ಪ್ರದೇಶದಿಂದ ಬಂದು ಪಟ್ಟಣಗಳು, ಹಳ್ಳಿಗಳ ಹೊರಗೆ ಟೆಂಟ್ ಹಾಕಿ ಸಂಚು ರೂಪಿಸೋ ಭಯಾನಕ ಸ್ಮಗ್ಲಿಂಗ್ ಪಡೆಯನ್ನ ಮೊದಲ ಬಾರಿಗೆ ಹೆಡೆಮುರಿ ಕಟ್ಟಲಾಗಿದೆ. ಅಷ್ಟಕ್ಕೂ ಈ ಭಯಾನಕ ಗ್ಯಾಂಗ್ ಯಾವುದು ಗೊತ್ತಾ..? ಮದ್ಯಪ್ರದೇಶದ “ಕಟನಿ ಗ್ಯಾಂಗ್” ಸವಾಲಾಗಿದ್ದ ಗ್ಯಾಂಗ್..! ಅಸಲು, ಮುಂಡಗೋಡ ತಾಲೂಕಿನ ಅತ್ತಿವೇರಿ ಪಕ್ಷಿಧಾಮವೂ ಸೇರಿದಂತೆ ಹಲವು ಕಡೆ ಬೆಲೆಬಾಳುವ ಶ್ರೀಗಂಧ ಮರ ಕಳ್ಳತನವಾಗಿತ್ತು. ಅಕ್ಟೋಬರ್ 7 ನೇ ತಾರೀಖಿನ ಆಸುಪಾಸಿನಲ್ಲಿಯೇ ನಡೆದಿದ್ದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಯ ಚಾಣಾಕ್ಷ ಟೀಂ ಕಾರ್ಯ ನಿರ್ವಹಿಸಿತ್ತು. ನಿಜ ಅಂದ್ರೆ ಸಣ್ಣದೊಂದು ಸುಳಿವೂ ನೀಡದೇ ಬೆಣ್ಣೆಯೊಳಗಿನ ಕೂದಲು ತೆಗೆದಂತೆ ಕಳ್ಳತನದ...
ಶಿರಸಿ ಸಮೀಪ ಭೀಕರ ಅಪಘಾತ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸ್ಥಳದಲ್ಲೇ ಸಾವು..!
ಶಿರಸಿ ಸಮೀಪ ಭೀಕರ ಅಪಘಾತವಾಗಿದೆ. ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾಗಿ, ಮದುವೆಗಾಗಿ ಬಂದಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಒಟ್ಟೂ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಶಿರಸಿ ತಾಲೂಕಿನ ಬಂಡಲ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರು ಎಂದು ತಿಳಿದು ಬಂದಿದೆ. ಇವ್ರು ಶಿರಸಿಯಲ್ಲಿ ನಡೆಯುವ ಮದುವೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿರುವರಾಗಿದ್ದಾರೆ. ಅಪಘಾತದಲ್ಲಿ ರಾಮಕೃಷ್ಣ ಬಾಬುರಾವ್(71), ವಿದ್ಯಾಲಕ್ಷ್ಮೀ ರಾಮಕೃಷ್ಣ(65), ಪುಷ್ಪಾ ಮೋಹನ ರಾವ್ (62), ಸುಹಾಸ್ ಗಣೇಶ ರಾವ್(30) ಹಾಗೂ ಕಾರು ಚಾಲಕ ಚೆನ್ನೈನ ಅರವಿಂದ(30) ಎಂಬುವವರೆ ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು. ಮತ್ತೊಬ್ಬರು ಚೆನ್ನೈ ಮೂಲದ...
ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ..! ಹೆಬ್ಬಾಳ್ಕರ್ ಸಹೋದರನ ಆಪ್ತರಿಂದಲೇ ನಡೀತಾ ಕೃತ್ಯ..?
ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತವಾಗಿದೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ (55) ಮೇಲೆ ಚಾಕು ಇರಿತವಾಗಿದೆ. ಬೆಳಗಾವಿ ಜಯ ನಗರದ ನಿವಾಸದ ಬಳಿಯಲ್ಲಿ ಘಟನೆ ನಡೆದಿದೆ. ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ಗಾಯವಾಗಿದೆ. ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಪೃಥ್ವಿ ಸಿಂಗ್ ರನ್ನು ದಾಖಲಿಸಲಾಗಿದೆ. ಇನ್ನು ಕೆಎಲ್ಇ ಆಸ್ಪತ್ರೆಗೆ ಎಂಎಲ್ಸಿ ಚೆಲುವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಭೇಟಿ ನೀಡಿದ್ದಾರೆ. ಪೃಥ್ವಿ ಸಿಂಗ್ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅತ್ಯಾಪ್ತರಾಗಿದ್ದಾರೆ. ಇನ್ನು ಎಂಎಲ್ಸಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಆಪ್ತರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಸದ್ದಾಂ, ಸುಜಯ್ ಜಾಧವ್, ಚನ್ನರಾಜ ಬಾಡಿಗಾರ್ಡ್ ರಿಂದ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ವಿಡಿಯೋ ಮಾಡಿ ಕಾಂಗ್ರೆಸ್ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಮಾಡಿಸಿದ್ದಾರೆ ಅಂತಾ ಗಂಭೀರ ಆರೋಪ ಮಾಡಲಾಗಿದೆ. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ...
ಹಳಿಯಾಳ ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಇಬ್ಬರು ಯುವಕರ ದಾರುಣ ಸಾವು..!
ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಯುವಕ ಮಂಜುನಾಥ ಇಂಗಳಗಿ (23) ಎನ್ನುವಾತ ಕಾಳಗಿನಕೊಪ್ಪ ಗ್ರಾಮದಿಂದ ಮುರ್ಕವಾಡಕ್ಕೆ ತೆರಳುವ ರಸ್ತೆ ಮಧ್ಯೆ ಬೆಳಗಿನ ಜಾವ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಪ್ರಾಣ ಬಿಟ್ಟಿದ್ದು, ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ. ಎರಡನೇ ಘಟನೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯ ಅನತಿ ದೂರದಲ್ಲಿರುವ ಕಾರ್ಮೆಲ್ ಶಾಲೆಗೆ ತೆರಳುವ ತಿರುವಿನಲ್ಲಿಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯ ಟ್ರಾಕ್ಟರ್ ರಿಪೇರಿ ಗ್ಯಾರೆಜ್ ನಲ್ಲಿ ಅವಘಡ ಸಂಭವಿಸಿದೆ. ಮೆಕ್ಯಾನಿಕ್ ಶಿವಮೊಗ್ಗ ಮೂಲದ ಹಬಿಬ್ ಖಾನ್ ಪಠಾನ್(52) ಟ್ರಾಕ್ಟರ್ ರಿಪೇರಿ ಮಾಡುವ ಸಂದರ್ಭದಲ್ಲಿ ಒಮ್ಮೆಲೆ ಸ್ಟಾರ್ಟ್ ಆದ ಟ್ರಾಕ್ಟರ್ ಹಬಿಬ್ ಮೇಲೆ ಹರಿದು ಕಂಪೌಂಡ್ ಗೋಡೆ ಒಡೆದು ಮುಂದೆ ನುಗ್ಗಿ ದ್ವಿಚಕ್ರ ವಾಹನಕ್ಕೆ ಡಿಕ್ಕೆ ಹೊಡೆದು ಬಳಿಕ ಇನ್ನೊಂದು ಟ್ರಾಕ್ಟರ್ ಟ್ರೇಲರ್ ಗೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಹಬಿಬ್ ಸ್ಥಳದಲ್ಲೇ...