ಮುಂಡಗೋಡ: ತೀವ್ರ ಬರದ ಎಫೇಕ್ಟ್ ಕಾಡು ಪ್ರಾಣಿಗಳಿಗೂ ತಟ್ಟಿದೆ. ಜಿಂಕೆಯೊಂದು ಕುಡಿಯುವ ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ಒಳಗಾಗಿದೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಜಿಂಕೆ ನಾಯಿಗಳ ದಾಳಿಯಿಂದ ಬಚಾವಾಗಿದ್ದು ರಕ್ಷಣೆಯಾಗಿದೆ. ಅಂದಹಾಗೆ, ನಂದಿಕಟ್ಟಾ ಗ್ರಾಮದ ಅರಣ್ಯದಂಚಿನಿಂದ ಜಿಂಕೆ, ಕುಡಿಯುವ ನೀರು ಅರಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿತ್ತು. ಈ ವೇಳೆ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಿದ್ದವು. ಹೀಗಾಗಿ, ತೀವ್ರವಾಗಿ ಗಾಬರಿಗೊಂಡಿದ್ದ ಜಿಂಕೆಗೆ ನಾಯಿಗಳಿಂದ ರಕ್ಷಣೆ ಮಾಡಿದ ಯುವಕರು, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಗೆ ಸೂಕ್ತ ಚಿಕಿತ್ಸೆಯ ನಂತರ ಕಾಡಿಗೆ ಮರಳಿಸಿದ್ದಾರೆ.
Top Stories
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ನಂದಿಕಟ್ಟಾದಲ್ಲಿ ನೀರು ಅರಸಿ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳ ದಾಳಿ, ರಕ್ಷಿಸಿದ ಗ್ರಾಮಸ್ಥರು..!
ಮುಂಡಗೋಡಿನಲ್ಲಿ ನೆಲಕ್ಕುರುಳಿದ ಬೃಹತ್ ಆಲದ ಮರ, ಅಪಾರ ಹಾನಿ..!
ಮುಂಡಗೋಡ ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂದೆ ಬೃಹತ್ ಆಲದ ಮರ ಏಕಾಏಕಿ ನೆಲಕ್ಕುರುಳಿದೆ. ಪರಿಣಾಮ ಮರದ ಕೆಳಗಡೆ ನಿರ್ಮಿಸಿಕೊಂಡಿದ್ದ ಗ್ಯಾರೇಜ್ ಹಾಗೂ ವೆಲ್ಡಿಂಗ್ ವರ್ಕ್ ಶಾಪ್ ಗೆ ಹಾನಿಯಾಗಿದೆ. ನಾಲ್ಕೈದು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದುಗಡೆ ಇರೋ ಪುರಾತನ ಆಲದ ಮರ ಮೂರು ಭಾಗಗಳಾಗಿ ನೆಲಕ್ಕುರಿಳಿದ್ದು. ಪ್ರಮೋದ್ ಎಂಬುವವರಿಗೆ ಸೇರಿದ ಗ್ಯಾರೇಜು ಸಂಪೂರ್ಣ ಜಖಂ ಗೊಂಡಿದೆ. ಇದ್ರಿಂದ ಗ್ಯಾರೇಜಿನಲ್ಲಿ ರಿಪೇರಿಗೆಂದು ಬಂದಿದ್ದ ಬೈಕ್ ಗಳು ಜಖಂ ಆಗಿವೆ. ಏಯರ್ ಕಾಂಪ್ರೆಶರ್ ಗೆ ಹಾನಿಯಾಗಿದೆ. ಅಲ್ದೆ ಗ್ಯಾರೇಜ್ ಎದುರಿಗೆ ನಿಲ್ಲಿಸಿದ್ದ ಹೊಸ ಬೈಕ್ ಜಖಂಗೊಂಡಿದೆ.
ಕೇಸ್ ದಾಖಲಾದ ಮೇಲೆ ‘ನಮ್ಮವರಲ್ಲ’ವೆಂದ ಬಿಜೆಪಿ, ಬಿಜೆಪಿ ವಿರುದ್ಧ ಸ್ವಪಕ್ಷಿಗರಿಂದಲೇ ಅಸಮಾಧಾನ
ಕುಮಟಾ: ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ನಿಂದನಾತ್ಮಕವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ‘ಅವರು ನಮ್ಮ ಪಕ್ಷದವರಲ್ಲ’ ಎಂದಿದ್ದ ಬಿಜೆಪಿ ವಿರುದ್ಧ ಇದೀಗ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತ ಎನ್ನಲಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎನ್ನುವವರು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಮರಾಠ ಜಾತಿಗೆ ನಿಂದಿಸಿ ಫೇಸ್ಬುಕ್ ನಲ್ಲಿ ಕಾಂಗ್ರೆಸ್ಸಿಗರ ಪೋಸ್ಟ್ ವೊಂದಕ್ಕೆ ಕಮೆಂಟ್ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಅವರು ಪೊಲೀಸ್ ದೂರು ದಾಖಲಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಿಜೆಪಿ ವಕ್ತಾರರು, ಕಮೆಂಟ್ ಹಾಕಿದ್ದ ವ್ಯಕ್ತಿ ತಮ್ಮ ಪಕ್ಷದವನೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಗರಲ್ಲೇ ಇದೀಗ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ದೂರು ದಾಖಲಾದ ಕಾರ್ಯಕರ್ತನಿಗೆ ಧೈರ್ಯ ತುಂಬುವುದನ್ನ ಬಿಟ್ಟು ‘ನಮ್ಮವನಲ್ಲ’ ಎಂದು ಜಾರಿಕೊಂಡ ಬಿಜೆಪಿ ನಾಯಕರ ವರ್ತನೆಯ...
ಮುಂಡಗೋಡಿನಿಂದ ಹಜ್ ಯಾತ್ರೆಗೆ ತೆರಳಿದ್ದ ಮೂವರು ಕಾರ್ ಅಪಘಾತದಲ್ಲಿ ಸಾವು..! ಮತ್ತೆ ಮೂವರಿಗೆ ಗಾಯ..!
ಮುಂಡಗೋಡಿನಿಂದ ಮೆಕ್ಕಾ( ಹಜ್ ಯಾತ್ರೆಗೆ) ತೆರಳಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡಿನ ರೋಣ್ಸ್ ಮೆಡಿಕಲ್ ಮಾಲೀಕ ಫಯಾಜ್ ಅಹ್ಮದ್ ರೋಣ್, ಅವ್ರ ಧರ್ಮಪತ್ನಿ ಆಫೀನಾ ಬಾನು ಹಾಗೂ ಅಣ್ಣನ ಮಗ ಆಯಾನ್ ರೋಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮೆಕ್ಕಾದ ದರ್ಶನ ಮುಗಿಸಿಕೊಂಡು ಕಾರಿನಲ್ಲಿ ಮದಿನಾಕ್ಕೆ ಹೊರಟಿದ್ದ ವೇಳೆ, ಕಾರಿನ ಟೈಯರ್ ಸ್ಪೋಟಗೊಂಡ ಪರಿಣಾಮ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಬರಬೇಕಿದೆ.
ಹಾವೇರಿಯ ನಾಗೇಂದ್ರನಮಟ್ಟಿಯ ರಾಕ್ ಸ್ಟಾರ್ ಕೊಬ್ಬರಿ ಹೋರಿ ಇನ್ನಿಲ್ಲ..!
ಹಾವೇರಿ: ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿಯ ನಾಗೇಂದ್ರನಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡ ತಳವಾರ ಅವರ ನೆಚ್ಚಿನ ರಾಕ್ ಸ್ಟಾರ್ ಕೊಬ್ಬರಿ ಹೋರಿ ಏ.6ರಂದು ಶನಿವಾರ ರಾತ್ರಿ 9ರ ಸುಮಾರಿಗೆ ಸಾವನ್ನಪ್ಪಿದೆ. ಅನಾರೋಗ್ಯದ ಸಮಸ್ಯೆಯಿಂದ ಹೋರಿ ಅಸುನೀಗಿದೆ. ಕಳೆದ ಹಲವಾರು ದಿನಗಳಿಂದ ನೆಲಕಟ್ಟಿದ್ದ ಹೋರಿಯನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದ ಹೋರಿಯ ಮಾಲೀಕ ಚಿಕ್ಕಪ್ಪ ಅವರ ಸಹೋದರರು, ಮನೆಯ ಮಂದಿ ನಿತ್ಯ ಹೋರಿಯ ಕಾಳಜಿಮಾಡುತ್ತಾ ಬಂದಿದ್ದರು. ನೂರಾರು ಹೋರಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆಲುವು ಮೂಲಕ ತನ್ನ ಸೌಮ್ಯ ಸ್ವಭಾವದಿಂದ ಸಹಸ್ರಾರು ಅಭಿಮಾನಿಗಳನ್ನು ಹೊಂದಿತ್ತು. ಅಭಿಮಾನಿಗಳ ಪಾಲಿನ ಮೆಚ್ಚಿನ ಕೊಬ್ಬರಿಹೋರಿಯಾಗಿದ್ದ ರಾಕ್ ಸ್ಟಾರ್ ಹೋರಿಯ ಓಟದ ಖ್ಯಾತಿ ಹೊರರಾಜ್ಯಗಳಿಗೂ ಹಬ್ಬಿತ್ತು. ರಾಜ್ಯದ ವಿವಿಧಕಡೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ಭಾಗವಹಿಸಿದ್ದು ವಿಶೇಷ. ರಾಕ್ ಸ್ಟಾರ್ ಹೋರಿ ಸಿನೇಮಾ ದಲ್ಲಿಯು ಸಹ ಪಾತ್ರವನ್ನು ನಿರ್ವಹಿಸಿತ್ತು. ಗ್ರಾಮೀಣ ಹಾಗೂ ಶಹರ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು, ಎಲ್ಲಾ ವಯೋಮಾನದವರು ಈ ಹೋರಿಯಲ್ಲಿ ದೈವತ್ವವನ್ನು ಕಂಡು...
ಸಾಮಾಜಿಕ ಜಾಲತಾಣದಲ್ಲಿ ಮರಾಠ ಜಾತಿಗೆ ನಿಂದನೆ: ಬಿಜೆಪಿಗನ ವಿರುದ್ಧ ಕಾಂಗ್ರೆಸ್ ನಿಂದ ದೂರು..!
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮರಾಠ ಜಾತಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಅಭ್ಯರ್ಥಿಯನ್ನ ಬೆಂಬಲಿಸಿ ವಿಡಿಯೋವೊಂದನ್ನು ಫೇಸ್ಬುಕ್ ನಲ್ಲಿ ಕಾಂಗ್ರೆಸ್ ಸಾಮಾಜಿಕ ತಾಣಗಳ ವಿಭಾಗದ ಸೂರಜ್ ನಾಯ್ಕ ಅವರು ಹಂಚಿಕೊಂಡಿದ್ದರು. ಅದಕ್ಕೆ ಬಿಜೆಪಿ ಕಾರ್ಯಕರ್ತನೆನ್ನಲಾದ ಕುಮಟಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎಂಬಾತ ತನ್ನ ಫೇಸ್ಬುಕ್ ಖಾತೆಯಿಂದ ನಿಂದನಾತ್ಮಕವಾಗಿ ಕಮೆಂಟ್ ಮಾಡಿದ್ದ. ಈ ಬಗ್ಗೆ ಗಮನಿಸಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಕಾಗಲ್, ನಿಂದಿಸಿದವನ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಸಾಮಾಜಿಕ ಜಾಕತಾಣಗಳಲ್ಲಿ ಚುನಾವಣೆಯ ಸಂದರ್ಭ ಪಕ್ಷ, ಅಭ್ಯರ್ಥಿಗಳ ಪರ- ವಿರೋಧ ಸಹಜ. ಆದರೆ ನಮ್ಮ ಅಭ್ಯರ್ಥಿಯ ಜಾತಿಯನ್ನ ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಅಕ್ಷಮ್ಯ. ಜಾತಿ ಜಾತಿಗಳ ನಡುವೆ ವೈಷಮ್ಯ ಬೀರುತ್ತಲೇ ಬಂದಿರುವ ಬಿಜೆಪಿಗರು ಮತ್ತೆ ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಈ ದೂರು ವೈಯಕ್ತಿಕವಾಗಿ ಹಾಗೂ...
ಮುಂಡಗೋಡಿನಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ..!
ಮುಂಡಗೋಡ: ಪಟ್ಟಣದ ಬಿಜೆಪಿ ಮಂಡಳ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಶ್ರೀ ದೀನ್ ದಯಾಳ್ ಉಪಾಧ್ಯಾಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಲಾಯ್ತು. ಇದ್ರ ಜೊತೆ ಲೋಕಸಭಾ ಚುನಾವಣೆ ಪೂರ್ವತಯಾರಿ ಕುರಿತು ಮಂಡಳದ ಕಾರ್ಯಕಾರಿಣಿ ಸಭೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಚಂದ್ರು ಎಸಳೆ, ಮಂಡಳ ಅಧ್ಯಕ್ಷ ಮಂಜುನಾಥ್ ಪಾಟೀಲ, ರಾಜ್ಯ ಎಸ್ ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಳವಾರ, ಜಿಲ್ಲಾ ವಿಶೇಷ ಅಹ್ವಾನಿತರಾದ ತುಕಾರಾಮ್ ಇಂಗಳೆ, ರೈತ ಮೋರ್ಚಾ ಅಧ್ಯಕ್ಷರಾದ ನಾಗರಾಜ್ ಬೆಣ್ಣಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವೀಣಾ ಓಸಿಮಠ, ಮುಖಂಡರಾದ ಉಮೇಶ್ ಬಿಜಾಪುರ, ಶ್ರೀಕಾಂತ್ ಸಾನು, ಮಂಡಳ ಕಾರ್ಯದರ್ಶಿ ಭರತ್ ರಾಜ್ ಹದಳಗಿ, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದ್ಯಸ್ಯ ನಾಗನಗೌಡ ಪುರದನಗೌಡ್ರ, ಯುವಮೊರ್ಚಾ ಅಧ್ಯಕ್ಷ ಬಸುರಾಜ್ ಟನಕೇದಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೇವಣಕರ, ಕೇದಾರಿ ಮುಗಳಿ, ಹಾಗೂ ಪಕ್ಷದ ಜಿಲ್ಲಾ ಮತ್ತು ಮಂಡಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಯ್ಯೋ ವಿಧಿಯೇ, ಮತ್ತೊಂದು ಭೀಕರ ಬೈಕ್ ಅಪಘಾತ..! ನಂದಿಕಟ್ಟಾದ ಮತ್ತೋರ್ವ ಯುವಕ ಸಾವು..!
ಮುಂಡಗೋಡ- ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಭಯಾನಕ ಅಪಘಾತವಾಗಿದೆ. ಕಲಘಟಗಿ ತಾಲೂಕಿನ ಬೆಲವಂತರ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಮೃತಪಟ್ಟಿದ್ದಾನೆ. ಮತ್ತಿಬ್ಬರಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ತುಕಾರಾಮ್ ಅರ್ಜುನ್ ಕಮ್ಮಾರ್ (26) ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಇನ್ನು ಮತ್ತೀರ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಬಹುಶಃ ಇವತ್ತು ಕರಾಳ ದಿನ. ಯಾಕಂದ್ರೆ ಒಂದೇ ದಿನ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹುನಗುಂದ ಸಮೀಪ ಬೈಕ್ ಅಪಘಾತದಲ್ಲಿ ನಂದಿಕಟ್ಟಾ ಗ್ರಾಮ ಪಂಚಾಯತಿ ವಾಟರ್ ಮೆನ್ ಕೃಷ್ಣ ಕಟಾವಕರ್ ಮೃತಪಟ್ಟಿದ್ದರೆ, ಕಲಘಟಗಿ ಸಮೀಪದ ಬೆಲವಂತರ ಗ್ರಾಮದ ಬಳಿ ಯುವಕ ತುಕಾರಾಂ ಅರ್ಜುನ ಕಮ್ಮಾರ್ ಮೃತಪಟ್ಟಿದ್ದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!
ಮುಂಡಗೋಡ: ತಾಲೂಕಿನ ಹುನಗುಂದ ಹಾಗೂ ಟಿಬೇಟಿಯನ್ ಕ್ಯಾಂಪ್ ನಂ. 8 ರ ರಸ್ತೆ ಮದ್ಯೆ ಭೀಕರ ಅಪಘಾತವಾಗಿದೆ. ಓಮಿನಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮತ್ತೋರ್ವನಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ಕೃಷ್ಣ ಸೋಮಣ್ಣ ಕಟಾವಕರ್ (54) ಎಂಬುವವನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನು ಪ್ರಭು(36) ಎಂಬುವ ಬೈಕ್ ಹಿಂಬದಿಯ ಸವಾರ ಗಾಯಗೊಂಡಿದ್ದಾನೆ. ಬೈಕ್ ಸವಾರರು ಹುನಗುಂದ ಗ್ರಾಮಕ್ಕೆ ತೆರಳುತ್ತಿದ್ದರು. ಹಾಗೇನೆ ಹುನಗುಂದ ಕಡೆಯಿಂದ ವರುತ್ತಿದ್ದ ಓಮಿನಿ ನಡುವೆ ಡಿಕ್ಕಿಯಾಗಿದೆ. ಹೀಗಾಗಿ, ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಕಟಾವಕರನನ್ನು ತಕ್ಷಣವೇ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಬೈಲ್ ಸವಾರ ಸಾವನ್ನಪ್ಪಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು, ಮತ್ತೋರ್ವ ಗಾಯಾಳುವಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ವಿರೋಧ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ- ಮುನಾಫ್ ಮಿರ್ಜಾನಕರ್
ಮುಂಡಗೋಡ: ಬಿಜೆಪಿಯೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿ JDS ವಿರುದ್ಧ ಉತ್ತರ ಕನ್ನಡದ ಬಹುತೇಕ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಗೊಂಡಿದ್ದಾರೆ. ಜಾತ್ಯಾತೀತ ಜನತಾದಳದಲ್ಲಿದ್ದ ಹಲವು ಮುಖಂಡರು ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮುಂಡಗೋಡಿನಲ್ಲಿ ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಮುನಾಫ್ ಮಿರ್ಜಾನಕರ್, ಕುಮಾರಸ್ವಾಮಿಯವರ ಜೊತೆ ನಾವೇಲ್ಲ ನಿಕಟ ಸಂಪರ್ಕ ಹೊಂದಿದ್ದೇವು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆ ಪಕ್ಷಕ್ಕಾಗಿ ದುಡಿದಿದ್ದೇವು. ಆದ್ರೆ, ನಮಗೆ ಹೇಳದೇ ಕೇಳದೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ. ಹೀಗಾಗಿ, ನಾವೇಲ್ಲ ಅಲ್ಪಸಂಖ್ಯಾತ ಜಿಲ್ಲಾ ಹಾಗೂ ತಾಲೂಕು ಮುಖಂಡರು ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ ಅಂತಾ ತಿಳಿಸಿದ್ರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇವೆ ಅಂತಾ ತಿಳಿಸಿದ್ರು.