ನಿರಂತರ ಮಳೆ ಹಿನ್ನೆಲೆ ದೇವಿಮನೆ ಬಳಿ ಗುಡ್ಡ ಕುಸಿತ, ಶಿರಸಿ- ಕುಮಟಾ ರಸ್ತೆ ಬಂದ್..!

ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಶಿರಸಿ- ಕುಮಟಾ ರಸ್ತೆಯ ದೇವಿಮನೆ ಮತ್ತು ರಾಗಿ ಹೊಸಳ್ಳಿ ಮದ್ಯೆ ರಸ್ತೆ ಮೇಲೆ ಗುಡ್ಡು ಕುಸಿದಿದೆ. ಪರಿಣಾಮ ಶಿರಸಿ- ಕುಮಟಾ ರಸ್ತೆ ಬಂದ್ ಆಗಿದೆ.

ರಾತ್ರಿ ಎರಡು ಗಂಟೆ ಸುಮಾರಿಗೆ ನಿರಂತರ ಮಳೆಯಿಂದ ರಸ್ತೆ ಮೇಲೆಯೇ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಸಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

error: Content is protected !!