ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಕಾಲೇಜು ಬಳಿ KSRTC ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ. ಗುರುವಾರ ನಡುರಾತ್ರಿಯಲ್ಲಿ ಘಟನೆ ನಡೆದಿದ್ದು ಮಂಗಳೂರಿಗೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಭೀಮಪ್ಪ ಮುತ್ತಪ್ಪ ಗಡಾದಿ(34) ತೀವ್ರ ಗಾಯಗೊಂಡಿದ್ದಾನೆ. ಅಂಬ್ಯುಲೆನ್ಸ್ ಸಿಬ್ಬಂದಿಗೆ ತರಾಟೆ..! ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲು ವೈದ್ಯರು ಸೂಚಿಸಿದ್ದರು. ಹೀಗಾಗಿ, ತಾಲೂಸ್ಪತ್ರೆಯ “ನಗು ಮಗು” ಅಂಬ್ಯುಲೆನ್ಸ್ ಗೆ ಸಂಪರ್ಕಿಸಿದಾಗ ಅಂಬ್ಯುಲೆನ್ಸ್ ಸಿಬ್ಬಂದಿಗಳು ಗಾಯಾಳುವನ್ನು ಸಾಗಿಸಲು ನಕರಾ ಮಾಡಿದ್ದಾರೆ. ಹೀಗಾಗಿ, ಸಾರ್ವಜನಿಕರು ಅಂಬ್ಯುಲೆನ್ಸ್ ಸಿಬ್ಬಂದಿಗಳೊಗೆ ಹಿಗ್ಗಾಮುಗ್ಗಾ ತರಾಟೆಗೆ ಪಡೆದಿದ್ದಾರೆ. ನಂತರ ಸಾರ್ವಜನಿಕರೇ ಅಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಕೂರಿಸಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?
ರಾಮಮಂದಿರ ವಿರುದ್ಧ ವಿವಾದಿತ ಸ್ಟೇಟಸ್ ಗಲಾಟೆ, ಗರಗ ಠಾಣೆ ಪಿಎಸ್ಐ ತಲೆದಂಡ..!
ಧಾರವಾಡ ತಾಲೂಕಿನ ಗರಗ ಠಾಣಾ ವ್ಯಾಪ್ತಿಯ ತಡಕೋಡ ಗ್ರಾಮದಲ್ಲಿ ನಡೆದಿದ್ದ ವಿವಾದಿತ ಸ್ಟೇಟಸ್ ಗಲಾಟೆ ವಿಚಾರವಾಗಿ ಗರಗ ಠಾಣೆ ಪಿಎಸ್ಐ ತಲೆದಂಡವಾಗಿದೆ. ಪಿಎಸ್ಐ ಪ್ರಕಾಶ ಡಿ. ಅಮಾನತು ಮಾಡಿ ಉತ್ತರ ವಲಯ ಐಜಿ ವಿಕಾಸ ಕುಮಾರ್ ಆದೇಶ ಹೊರಡಿಸಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ತಡಕೋಡದಲ್ಲಿ ರಾಮಮಂದಿರ ವಿರುದ್ಧ ಸ್ಟೇಟಸ್ ಹಾಕಿದ್ದ ಸದ್ದಾಂ ಹುಸೇನ್ ಬಂಧನದ ಬಳಿಕ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಘಟನೆಯಲ್ಲಿ ಸದ್ದಾಂ ಮನೆಯ ಎದುರು ಜಮಾಯಿಸಿದ್ದ ಜನರು ಗಲಾಟೆ ಮಾಡಿದ್ದರು. ಗಲಾಟೆ ಬಳಿಕ ಗ್ರಾಮದಲ್ಲಿ ಉಂಟಾಗಿದ್ದ ಅಶಾಂತಿ ಸಂಬಂಧ, ಮುಂಜಾಗ್ರತೆ ತೆಗೆದುಕೊಳ್ಳದೇ ಕರ್ತವ್ಯ ಲೋಪ ಎಸಗಿರೋ ಆರೋಪ ಪಿಎಸ್ ಐ ತಲೆಗೆ ಕಟ್ಟಲಾಗಿದೆ. ಎಸ್ಪಿ ವರದಿ ಆಧರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ.
ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂದೂರಿನ ಯುವಕ ಚಿಕಿತ್ಸೆ ಫಲಿಸದೇ ಸಾವು..! ಪ್ರೀತಿಯೇ ಸಾವಿಗೆ ಕಾರಣವಾಯ್ತಾ..?
ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಕಳೆದ ರವಿವಾರ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಅಂತಾ ಕುಟುಂಬದ ಮೂಲಗಳು ತಿಳಿಸಿವೆ. ಪವನ್ ಕಬನೂರ್(ಸುತಗಟ್ಟಿ)(23) ಎಂಬುವವನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಈತ ಕಳೆದ ರವಿವಾರ ಮನೆಯಲ್ಲೇ ಕಳೆನಾಶಕ ಸೇವಿಸಿದ್ದ. ಹೀಗಾಗಿ, ತಕ್ಷಣವೇ ಈತನನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಪ್ರೀತಿಗೆ ಬಲಿಯಾಯ್ತಾ ಜೀವ..? ಅಂದಹಾಗೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದ್ರೂ, ಯುವತಿಯೋರ್ವಳ ಪ್ರೀತಿಯಲ್ಲಿ ಬಿದ್ದಿದ್ದ ಮೃತನಿಗೆ ಯುವತಿಯ ತಾಯಿ ಬುದ್ದಿವಾದ ಹೇಳಿದ್ದಳು ಎನ್ನಲಾಗಿದೆ. ಈ ಕಾರಣಕ್ಕಾಗೇ ಯುವಕ ಆತ್ಮಹತ್ಯೆ ಮಾಡಿಕೊಂಡನಾ..? ಗೊತ್ತಿಲ್ಲ, ಇನ್ನಷ್ಟೇ ತಿಳಿದು ಬರಬೇಕಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಖತರ್ನಾಕ ಕಳ್ಳಿಯರ ಬಂಧನ..!
ಮುಂಡಗೋಡಿನ ಯಂಗ್ ಆಂಡ್ ಎನರ್ಜಿಟಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡಸಿದ್ದಾರೆ. ಪರಿಣಾಮ ಇಬ್ಬರು ಖತರ್ನಾಕ ಅಂತರ್ ಜಿಲ್ಲಾ ಕಳ್ಳಿಯರನ್ನು ಹೆಡೆಮುರಿ ಕಟ್ಟಿದ್ದಾರೆ. ಕಳ್ಳಿಯರ ಜಾಡು ಹಿಡಿದು ದೂರದ ಶಿವಮೊಗ್ಗ ಜಿಲ್ಲೆಯಿಂದ ಕಳ್ಳಿಯರನ್ನು ತಂದು ಕೂರಿಸಿದ್ದಾರೆ. ಅಂದಹಾಗೆ ಬಂಧಿತ ಇಬ್ಬರೂ ಕಳ್ಳಿಯರ ಕರಾಮತ್ತುಗಳು ಒಂದೆರಡಲ್ಲ. ಮುಂಡಗೋಡ ಹಾಗೂ ಶಿರಸಿಯಲ್ಲಿ ಅನಾಮತ್ತಾಗಿ ಲಕ್ಷ ಲಕ್ಷ ಬೆಲೆಯ ಬಂಗಾರ, ಹಣ ದೋಚಿಕೊಂಡು ಹೋಗುವ ಹೀನ ದಂಧೆಯವರು. ಅದು ಎರಡು ವರ್ಷದ ಹಿಂದೆ..! ನಿಮಗೆ ನೆನಪಿರಬಹುದು, ಕಳೆದ ಎರಡು ವರ್ಷದ ಹಿಂದೆ, ಅಂದ್ರೆ, 16.05. 2022 ರಂದು, ಮುಂಡಗೋಡ ಪಟ್ಟಣದ SBI ಬ್ಯಾಂಕ್ ಬಳಿ ಅನಾಮತ್ತಾಗಿ 49 ಸಾವಿರ ರೂಪಾಯಿಗಳನ್ನು ಓರ್ವ ಯುವತಿ ಕಳೆದುಕೊಂಡು ಗೋಳಾಡುತ್ತಿದ್ದಳು. ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಬಶೆಟ್ಟೆಪ್ಪ ಅರಳಿಕಟ್ಟಿ ಎಂಬುವ ಯುವತಿ ಅವತ್ತು ಬ್ಯಾಂಕಿನಿಂದ 49 ಸಾವಿರ ಹಣ ಡ್ರಾ ಮಾಡಿಕೊಂಡು ಇನ್ನೇನು ತನ್ನ ಊರಿಗೆ ಹೋಗಬೇಕು ಅನ್ನುವಷ್ಟರಲ್ಲೇ ಈ ಖತರ್ನಾಕ ಕಳ್ಳಿಯರು ಹಣವನ್ನು ಎಗರಿಸಿ ಬಿಟ್ಟಿದ್ದರು. ಹೀಗಾಗಿ, ಅವತ್ತೇ ಮುಂಡಗೋಡ...
ಉಗ್ರನೊಂದಿಗೆ “ನಂಟಿನ” ಆರೋಪ, ಭಟ್ಕಳದ ಮಹಿಳೆ ATS ಅಧಿಕಾರಿಗಳ ವಶದಲ್ಲಿ, ವಿಚಾರಣೆ..!
ಭಟ್ಕಳ-ಮುಂಬೈನಲ್ಲಿ ಬಂಧಿತನಾಗಿರೋ ಉಗ್ರನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಭಟ್ಕಳದ ಮಹಿಳೆಯನ್ನ ಮುಂಬೈ ಎಟಿಎಸ್ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ತಂಡ ಆಕೆಯನ್ನು ವಶಕ್ಕೆ ಪಡೆದು ಗುರುವಾರ ಭಟ್ಕಳದಲ್ಲಿಯೇ ವಿಚಾರಣೆ ನಡೆಸುತ್ತಿದೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮಹಿಳೆಯನ್ನು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಜಾದ್ ನಗರದ ನಿವಾಸಿ ಆಯಿಷಾ ಎಂದು ಗುರುತಿಸಲಾಗಿದೆ. ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜೊತೆ ನಂಟು ಹೊಂದಿರುವ ಮಹಾರಾಷ್ಟ್ರ ನಾಸಿಕ್ ಮೂಲದ ಯುವಕನನ್ನು ಮುಂಬೈ ಎಟಿಎಸ್ ತಂಡ ಬಂಧಿಸಿತ್ತು. ಆತನ ಜೊತೆ ಸಂಪರ್ಕದಲ್ಲಿದ್ದ ಮುಂಬೈನ ಓರ್ವ ಮಹಿಳೆಯ ಸಂಪರ್ಕದಲ್ಲಿ ಈ ಭಟ್ಕಳದ ಮಹಿಳೆ ಇದ್ದಳು ಎನ್ನಲಾಗಿದೆ. ಈಕೆಯ ಪತಿ ಮರಣಹೊಂದಿದ್ದು, ತಂದೆ ತಾಯಿ ಮಕ್ಕಳ ಜೊತೆ ವಾಸವಾಗಿದ್ದಾಳೆ. ಸ್ಥಳೀಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಹೆಣ್ಣು ಮಕ್ಕಳಿಗೆ ಧರ್ಮಶಿಕ್ಷಣ ಬೋಧಿಸುತ್ತಿದ್ದಳು. ಬಂಧಿತ ಉಗ್ರನಿಗೆ ಹಣ...
ಕಾತೂರು ಬಳಿ ಶಿರಸಿ ಹುಬ್ಬಳ್ಳಿ ರಸ್ತೆ ಮೇಲೆ ಬಿದ್ದ ಬೃಹತ್ ಮರ, ಸಂಚಾರ ಸ್ಥಗಿತ..!
ಮುಂಡಗೋಡ ತಾಲೂಕಿನ ಮೂಡಸಾಲಿ ಕಾತೂರು ಬಳಿ ಬೃಹತ್ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಶಿರಸಿ ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಕಾತೂರು ಸಮೀಪದಲ್ಲಿ ಘಟನೆ ನಡೆದಿದ್ದು, ರಸ್ತೆಯ ಮೇಲೆಯೇ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಎಂಟು ದಿನಗಳ ನಂತ್ರ, ಕೊನೆಗೂ ತಾಯಿ ಮಡಿಲು ಸೇರಿದ ಚಿರತೆ ಮರಿಗಳು, ನಿಟ್ಟುಸಿರು ಬಿಟ್ಟ ಮುಂಡಗೋಡ ಅರಣ್ಯ ಅಧಿಕಾರಿಗಳು..!
ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎಂಟು ದಿನಗಳಿಂದ ತಾಯಿ ಮಡಿಲಿಗಾಗಿ ಕಾಯುತ್ತಿದ್ದ ಎರಡು ಚಿರತೆ ಮರಿಗಳನ್ನು ಕೊನೆಗೂ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಆದ್ರೆ, ಹಾಗೆ ಎರಡೂ ಪುಟ್ಟ ಕಂದಮ್ಮಗಳನ್ನು ತಾಯಿ ಮಡಿಲು ಸೇರಿಸುವಲ್ಲಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಮತ್ತು ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ..! ಅದು ಕಬ್ಬಿನ ಗದ್ದೆ..! ಅಂದಹಾಗೆ, ಕಳೆದ ದಿನಾಂಕ 12.01.2024ರಂದು ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಶಿವಾನಂದ ಕೆಂಗಾಪುರ್ ಅವರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕೊದ್ದವು. ಗದ್ದೆಯಲ್ಲಿ ಹುಲುಸಾಗಿ ಬೆಳೆದಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದ ಕಾರ್ಮಿಕರು, ಸ್ಥಳದಲ್ಲಿ ಸಿಕ್ಕ ಚಿರತೆ ಮರಿಗಳನ್ನು ಅನತಿ ದೂರದಲ್ಲಿಟ್ಟು ಇಲಾಖೆಗೆ ವಿಷಯವನ್ನು ತಿಳಿಸಿದ್ದರು. ಅಲ್ಲಿ ಸಿಕ್ಕಿದ್ದು ಎರಡು ಮರಿಗಳು..! ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮರಿಗಳನ್ನು ಸಿಕ್ಕ ಸ್ಥಳದಲ್ಲಿಯೇ ಬಿಟ್ಟು ತಾಯಿ ಚಿರತೆ ತನ್ನ ಮರಿಗಳನ್ನು ತೆಗೆದುಕೊಂಡು ಹೋಗುತ್ತದೆ ಅಂತಾ ಗ್ರಾಮಸ್ಥರಲ್ಲಿ ತಿಳಿಸಿದ್ದರು. ಅದ್ರಂತೆ...
ನಿತ್ರಾಣಗೊಂಡು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಕಾರ್ಮಿಕ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ, ಮಾನವೀಯತೆ ಮೆರೆದ ನೂತನ ಪಿಎಸ್ಐ..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನೋರ್ವ ತಲೆಸುತ್ತು ಬಂದು ಬಿದ್ದು ಗಾಯಗೊಂಡಿರೋ ಘಟನೆ ನಡೆದಿದೆ. ಹಾಗೆ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದಾಗ ಮುಂಡಗೋಡಿನ ನೂತನ ಪಿಎಸ್ ಐ ಪರಶುರಾಮ್, ಖುದ್ದಾಗಿ ನಿಂತು ಗಾಯಾಳುವಿಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಅಂದಹಾಗೆ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಾರ್ನಳ್ಳಿ ಗ್ರಾಮದ ನಾಗರಾಜ್ ವಡ್ಡರ(47) ಎಂಬುವ ಕಾರ್ಮಿಕ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ಹೀಗಾಗಿ ಕಾರ್ಮಿಕ ನಾಗರಾಜ್ ಗೆ ತಲೆಗೆ ಗಾಯವಾಗಿದ್ದು, ಅಕ್ಷರಶಃ ನಿತ್ರಾಣ ಸ್ಥಿತಿಯಲ್ಲಿ ರಸ್ತೆಯಲ್ಲೇ ನರಳಾಡುತ್ತಿದ್ದರು. ಆ ಹೊತ್ತಲ್ಲಿ ಅದೇ ಮಾರ್ಗದಿಂದ ಬೇರೊಂದು ಪ್ರಕರಣದ ಸಲುವಾಗಿ ಹೊರಟಿದ್ದ ನೂತನ ಪಿಎಸ್ ಐ ಪರಶುರಾಮ್, ನಿತ್ರಾಣಗೊಂಡು ಬಿದ್ದಿದ್ದ ಕಾರ್ಮಿಕನಿಗೆ ಉಪಚರಿಸಿ, ತಕ್ಷಣವೇ 108 ಅಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ದೆ ಕಾರ್ಮಿಕ ನಿಗೆ ಒಂದಿಷ್ಟು ಹಣ ನೀಡಿ ದೈರ್ಯ ತುಂಬಿ ಕಳಿಸಿದ್ದಾರೆ. ಈ ಕಾರಣಕ್ಕಾಗಿ...
ಹಾನಗಲ್ ಗ್ಯಾಂಗ್ ರೇಪ್ ಕೇಸ್, CPI ಶ್ರೀಧರ್ ಸಸ್ಪೆಂಡ್, ಕಾನಸ್ಟೇಬಲ್ ಕೂಡ ಅಮಾನತ್ತು..!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಠಾಣೆಯ ಸಿಪಿಐ, ಹಾಗೂ ಕಾನಸ್ಟೇಬಲ್ ತಲೆದಂಡವಾಗಿದೆ. ಹಾನಗಲ್ ಠಾಣೆಯ ಸಿಪಿಐ ಶ್ರೀಧರ್ ಸಸ್ಪೆಂಡ್ ಆಗಿದ್ದಾರೆ. ಜೊತೆಗೆ ಕಾನಸ್ಟೇಬಲ್ SB ಡ್ಯೂಟಿಯ ಇಲಿಯಾಜ್ ಶೇತ್ ಸನದಿ ಕೂಡ ಅಮಾನತ್ತಾಗಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲ ಹಾಗೂ FIR ದಾಖಲಿಸುವಲ್ಲಿ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಭ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಿ ಹಾವೇರಿ ಎಸ್ಪಿ ಆದೇಶಿಸಿದ್ದಾರೆ.
ಸಾಲಗಾಂವ್ ಬಾಣಂತಿದೇವಿ ಕೆರೆಯಲ್ಲಿ ಹರಕೆಯ ರೂಪದಲ್ಲಿ ತೇಲುತ್ತವೆ ಕಂದಮ್ಮಗಳು..! ಹೆತ್ತಮ್ಮಗಳ ಕಂಗಳಲ್ಲಿ ಆನಂದಬಾಷ್ಪ, ಹೇ ತಾಯೇ ಕಾಪಾಡಮ್ಮ..!!
ಇದು ಅಕ್ಷರಶಃ ಭಕ್ತಿಯ ಪರಾಕಾಷ್ಟೆ. ದೇವರ ಸನ್ನಿದಾನದ ಮಹತ್ವ ಸಾರುವ ಅದ್ಭುತ ಸೇವೆ. ಇಲ್ಲಿ ಹಸುಗೂಸುಗಳು ಕೆರೆಯ ನೀರಲ್ಲಿ ತೇಲುತ್ತವೆ. ಒಂಬತ್ತು ತಿಂಗಳು ಹೊತ್ತು ಹೆತ್ತ ಕಂದಮ್ಮಗಳನ್ನು ಹೆತ್ತ ತಾಯಿಯೇ ಕೆರೆಯ ನೀರಲ್ಲಿ ಹಾಕಿ ನಿರುಮ್ಮಳವಾಗಿ “ಅವ್ವಾ ನನ್ನ ಕಂದನನ್ನು ನಿನ್ನ ಮಡಿಲಲ್ಲಿ ಹಾಕಿದ್ದೇನೆ ರಕ್ಷಿಸುವ ಭಾರವು ನಿನ್ನದೇ ತಾಯಿ” ಅಂತಾ ಅಂಗಲಾಚುತ್ತಾಳೆ. ಆ ಹೆತ್ತ ತಾಯಿ ಕಣ್ಣಲ್ಲಿ ಆನಂದ ಬಾಷ್ಪಗಳು ಸುರಿಯುತ್ತವೆ. ಬಾಣಂತಿದೇವಿಯ ಮಡಿಲಲ್ಲಿ ತನ್ನ ಕಂದಮ್ಮನನ್ನು ಹಾಕಿ ಕೃತಾರ್ಥಳಾದ ಧನ್ಯತಾ ಭಾವ ಆ ತಾಯಿಯ ಕಂಗಳಲ್ಲಿ ಪ್ರಜ್ವಲಿಸುತ್ತದೆ. ಭಕ್ತರ ಪಾಲಿನ ದೈವ..! ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಪ್ರಸಿದ್ದಿಯಾಗಿರುವ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ್ ಗ್ರಾಮದ ಶಿರಸಿ- ಹುಬ್ಬಳ್ಳಿ ಹೆದ್ದಾರಿಯಲ್ಲಿರುವ ಬಾಣಂತಿದೇವಿ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷ ಮಕರ ಸಂಕ್ರಮಣ ದಿನದಂದು ನಡೆಯುವ ಬಾಣಂತಿದೇವಿ ಜಾತ್ರೆಗೆ ಪಟ್ಟಣ ಸೇರಿದಂತೆ ಸಾಲಗಾಂವ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಗಳು ಆಗಮಿಸಿದ್ದು, ದೇವಿಯ...