ನಿತ್ರಾಣಗೊಂಡು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಕಾರ್ಮಿಕ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ, ಮಾನವೀಯತೆ ಮೆರೆದ ನೂತನ ಪಿಎಸ್ಐ..!


ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನೋರ್ವ ತಲೆಸುತ್ತು ಬಂದು ಬಿದ್ದು ಗಾಯಗೊಂಡಿರೋ ಘಟನೆ ನಡೆದಿದೆ. ಹಾಗೆ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದಾಗ ಮುಂಡಗೋಡಿನ ನೂತನ ಪಿಎಸ್ ಐ ಪರಶುರಾಮ್, ಖುದ್ದಾಗಿ ನಿಂತು ಗಾಯಾಳುವಿಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯ ಕಾರ್ಯ ಮಾಡಿದ್ದಾರೆ‌.

ಅಂದಹಾಗೆ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಾರ್ನಳ್ಳಿ ಗ್ರಾಮದ ನಾಗರಾಜ್ ವಡ್ಡರ(47) ಎಂಬುವ ಕಾರ್ಮಿಕ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ಹೀಗಾಗಿ ಕಾರ್ಮಿಕ ನಾಗರಾಜ್ ಗೆ ತಲೆಗೆ ಗಾಯವಾಗಿದ್ದು, ಅಕ್ಷರಶಃ ನಿತ್ರಾಣ ಸ್ಥಿತಿಯಲ್ಲಿ ರಸ್ತೆಯಲ್ಲೇ ನರಳಾಡುತ್ತಿದ್ದರು.

ಆ ಹೊತ್ತಲ್ಲಿ ಅದೇ ಮಾರ್ಗದಿಂದ ಬೇರೊಂದು ಪ್ರಕರಣದ ಸಲುವಾಗಿ ಹೊರಟಿದ್ದ ನೂತನ ಪಿಎಸ್ ಐ ಪರಶುರಾಮ್, ನಿತ್ರಾಣಗೊಂಡು ಬಿದ್ದಿದ್ದ ಕಾರ್ಮಿಕನಿಗೆ ಉಪಚರಿಸಿ, ತಕ್ಷಣವೇ 108 ಅಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ‌. ಅಲ್ದೆ ಕಾರ್ಮಿಕ ನಿಗೆ ಒಂದಿಷ್ಟು ಹಣ ನೀಡಿ ದೈರ್ಯ ತುಂಬಿ ಕಳಿಸಿದ್ದಾರೆ. ಈ ಕಾರಣಕ್ಕಾಗಿ ನೂತನ ಪಿಎಸ್ಐ ಪರಶುರಾಮ್ ರವರ ಮಾನವೀಯ ಕಾರ್ಯಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ. ಬಸವರಾಜ್ ಮಬನೂರ್ ನಂತರದಲ್ಲಿ ಮುಂಡಗೋಡಿಗೆ ಮತ್ತೋರ್ವ ಮಾನವೀಯ ಮೌಲ್ಯದ ಪಿಎಸ್ಐ ದೊರೆತಿರೋ ಸಂತಸ ವ್ಯಕ್ತವಾಗಿದೆ.

ಇನ್ನು 108 ಅಂಬುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ನಿತ್ರಾಣಗೊಂಡಿದ್ದ ಕಾರ್ಮಿಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!