ಧಾರವಾಡ ತಾಲೂಕಿನ ಗರಗ ಠಾಣಾ ವ್ಯಾಪ್ತಿಯ ತಡಕೋಡ ಗ್ರಾಮದಲ್ಲಿ ನಡೆದಿದ್ದ ವಿವಾದಿತ ಸ್ಟೇಟಸ್ ಗಲಾಟೆ ವಿಚಾರವಾಗಿ ಗರಗ ಠಾಣೆ ಪಿಎಸ್‌ಐ ತಲೆದಂಡವಾಗಿದೆ. ಪಿಎಸ್‌ಐ ಪ್ರಕಾಶ ಡಿ. ಅಮಾನತು ಮಾಡಿ ಉತ್ತರ ವಲಯ ಐಜಿ ವಿಕಾಸ ಕುಮಾರ್ ಆದೇಶ ಹೊರಡಿಸಿದ್ದಾರೆ.
ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ತಡಕೋಡದಲ್ಲಿ ರಾಮಮಂದಿರ ವಿರುದ್ಧ ಸ್ಟೇಟಸ್ ಹಾಕಿದ್ದ ಸದ್ದಾಂ ಹುಸೇನ್ ಬಂಧನದ ಬಳಿಕ ಗ್ರಾಮದಲ್ಲಿ ಗಲಾಟೆ ನಡೆದಿತ್ತು.
ಘಟನೆಯಲ್ಲಿ ಸದ್ದಾಂ ಮನೆಯ ಎದುರು ಜಮಾಯಿಸಿದ್ದ ಜನರು ಗಲಾಟೆ ಮಾಡಿದ್ದರು. ಗಲಾಟೆ ಬಳಿಕ ಗ್ರಾಮದಲ್ಲಿ ಉಂಟಾಗಿದ್ದ ಅಶಾಂತಿ ಸಂಬಂಧ, ಮುಂಜಾಗ್ರತೆ ತೆಗೆದುಕೊಳ್ಳದೇ ಕರ್ತವ್ಯ ಲೋಪ ಎಸಗಿರೋ ಆರೋಪ ಪಿಎಸ್ ಐ ತಲೆಗೆ ಕಟ್ಟಲಾಗಿದೆ. ಎಸ್ಪಿ ವರದಿ ಆಧರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ.