ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎಂಟು ದಿನಗಳಿಂದ ತಾಯಿ ಮಡಿಲಿಗಾಗಿ ಕಾಯುತ್ತಿದ್ದ ಎರಡು ಚಿರತೆ ಮರಿಗಳನ್ನು ಕೊನೆಗೂ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಆದ್ರೆ, ಹಾಗೆ ಎರಡೂ ಪುಟ್ಟ ಕಂದಮ್ಮಗಳನ್ನು ತಾಯಿ ಮಡಿಲು ಸೇರಿಸುವಲ್ಲಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಮತ್ತು ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ..!
ಅದು ಕಬ್ಬಿನ ಗದ್ದೆ..!
ಅಂದಹಾಗೆ, ಕಳೆದ ದಿನಾಂಕ 12.01.2024ರಂದು ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಶಿವಾನಂದ ಕೆಂಗಾಪುರ್ ಅವರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕೊದ್ದವು. ಗದ್ದೆಯಲ್ಲಿ ಹುಲುಸಾಗಿ ಬೆಳೆದಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದ ಕಾರ್ಮಿಕರು, ಸ್ಥಳದಲ್ಲಿ ಸಿಕ್ಕ ಚಿರತೆ ಮರಿಗಳನ್ನು ಅನತಿ ದೂರದಲ್ಲಿಟ್ಟು ಇಲಾಖೆಗೆ ವಿಷಯವನ್ನು ತಿಳಿಸಿದ್ದರು.
ಅಲ್ಲಿ ಸಿಕ್ಕಿದ್ದು ಎರಡು ಮರಿಗಳು..!
ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮರಿಗಳನ್ನು ಸಿಕ್ಕ ಸ್ಥಳದಲ್ಲಿಯೇ ಬಿಟ್ಟು ತಾಯಿ ಚಿರತೆ ತನ್ನ ಮರಿಗಳನ್ನು ತೆಗೆದುಕೊಂಡು ಹೋಗುತ್ತದೆ ಅಂತಾ ಗ್ರಾಮಸ್ಥರಲ್ಲಿ ತಿಳಿಸಿದ್ದರು. ಅದ್ರಂತೆ ಚಿರತೆ ತನ್ನ ಮರಿಗಳನ್ನು ಅದೇ ರಾತ್ರಿ ಬೇರೆಡೆ ಸ್ಥಳಾಂತರಸಿತ್ತು ಕೂಡ. ಅಸಲು, ಗದ್ದೆಯ ಇನ್ನೊಂದು ಬದಿಯಲ್ಲಿ ಚಿರತೆ ತನ್ನ ಮರಿಗಳನ್ನು ಇಟ್ಟಿರಬಹುದು ಎಂಬ ಶಂಕೆಯಿಂದ ಮಾರನೆಯ ದಿನ, ಗದ್ದೆಯಲ್ಲಿ ಇಲಾಖಾ ಸಿಬ್ಬಂದಿಗಳ ರಕ್ಷಣೆಯಲ್ಲಿ ಕಬ್ಬಿನ ಕಟಾವು ಕಾರ್ಯ ನಿರ್ವಹಿಸುವಂತೆ ವಲಯ ಅರಣ್ಯಾಧಿಕಾರಿಗಳು ವ್ಯವಸ್ಥೆ ಮಾಡಿದ್ದರು.
ಮೋಶನ್ ಟ್ರಾಫಿಂಗ್ ಕ್ಯಾಮೆರಾ..!
ಅದೇ ರೀತಿ ಕಬ್ಬು ಕಟಾವು ಕಾರ್ಯದಲ್ಲಿದ್ದಾಗ ಅರಣ್ಯ ಅಧಿಕಾರಿಗಳ ಅನುಮಾನದಂತೆ ಗದ್ದೆಯ ಇನ್ನೊಂದು ಬದಿಯಲ್ಲಿ ಚಿರತೆ ಮರಿಗಳು ದಿನಾಂಕ 18.1.2024 ರಂದು ಪತ್ತೆಯಾಗಿದ್ದವು. ಅಂದಿನಿಂದ ಚಿರತೆ ಮರಿಗಳನ್ನು ತಾಯಿ ಚಿರತೆ ಜೊತೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಮೋಶನ್ ಟ್ರಾಫಿಂಗ್ ಕ್ಯಾಮೆರಾ ತಂತ್ರಜ್ಞಾನ ಬಳಸಿ ಚಿರತೆಯ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು.
ಅಂತೂ ತಾಯಿ ಮಡಿಲಿಗೆ..!
ಅದ್ರ ಫಲವಾಗಿ, ಇಂದು ಬೆಳಿಗ್ಗೆ ಅಂದ್ರೆ ಶನಿವಾರ, ಮೋಶನ್ ಟ್ರಾಫಿಂಗ್ ಕ್ಯಾಮೆರಾ ದಂತಹ ತಂತ್ರಜ್ಞಾನವನ್ನು ಬಳಸಿ ಮರಿ ಚಿರತೆಗಳನ್ನು ತಾಯಿ ಚಿರತೆ ತೆಗೆದುಕೊಂಡು ಹೋದ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಖಚಿತ ಪಡಿಸಿಕೊಂಡಿದ್ದಾರೆ. ಹೀಗಾಗಿ, ಮರಿಗಳನ್ನು ತಾಯಿ ಚಿರತೆ ಮಡಿಲು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ರೈತ ಶಿವಾನಂದ ಕೆಂಗಾಪುರ್ ಮತ್ತು ವಿ ಎಫ್ ಸಿ ಅಧ್ಯಕ್ಷರು ಹಾಗೂ ಹುಲಿಹೊಂಡ ಗ್ರಾಮಸ್ಥರು ಸಹಕರಿಸಿದ್ದಾರೆ.
ಇನ್ನು ಡಿಎಫ್ ಓ ಮಾರ್ಗದರ್ಶನದಲ್ಲಿ ಮುಂಡಗೋಡ ಎಸಿಎಫ್ ರವಿ ಹುಲಕೋಟಿ, RFO ವಾಗೀಶ್ ನೇತೃತ್ವದಲ್ಲಿ ಇಲಾಖೆಯ ಹಲವು ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು.