ಮುಂಡಗೋಡ: ಪಟ್ಟಣದಲ್ಲಿ ಇಂದು ದಿ.ನಟ ಪುನಿತ್ ರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಲವು ಸಂಘಟನೆ ಕಾರ್ಯಕರ್ತರು ಅಭಿಮಾನಿಗಳು ಪುನಿತ್ ಹುಟ್ಟುಹಬ್ಬದ ನಿಮಿತ್ತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದ್ರಂತೆ ಸಂಜೆಯಿಂದ ಇಲ್ಲಿನ ಮಾರಿಕಾಂಬಾ ದೇವಾಲಯದ ಆವರಣದಿಂದ ಪುನಿತ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಪುನಿತ್ ರಾಜಕುಮಾರ್ ಅಭಿಮಾನಿಗಳು ಪುನಿತ್ ಪರವಾಗಿ ಘೋಷಣೆ ಕೂಗಿದ್ರು https://youtu.be/G7KlEBOg4d8
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿಗಳು
ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿಗಳನ್ನು ನೋಡಲು ಈ ಕೆಳಗಿನ ಲಿಂಕ್ ಓಪನ್ ಮಾಡಿ ************************************ ನಮ್ಮ ಯೂಟ್ಯೂಬ್ ಚಾನಲ್ Subscribe ಆಗಿ, Like ಮಾಡಿ, Share ಮಾಡಿ.. ಬೆಂಬಲಿಸಿ..
ಮುಂಡಗೋಡಿನಲ್ಲಿ “ಅಪ್ಪು” ಜನ್ಮದಿನದ ಸಂಭ್ರಮಕ್ಕೆ ನೇತ್ರದಾನದ ಕೊಡುಗೆ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಇಂದು ದಿ. ನಟ ಪುನಿತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ರೇಣುಕಾ ಮೆಮೊರೆಬಲ್ ಟ್ರಸ್ಟ್, ಹಾಗೂ ಆಟೋ ಚಾಲಕರ ಸಂಘ ಒಕ್ಕೂಟ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನೇತ್ರದಾನ ಶಿಬಿರ ನಡೆಯುತ್ತಿದೆ. ಪುನಿತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಅಯ್ಯಪ್ಪ ಬಜಂತ್ರಿ, ಪಣಿರಾಜ್ ಹದಳಗಿ, ಡಾ. ಎಚ್.ಎಫ್. ಇಂಗಳೆ, ಗುಡ್ಡಪ್ಪ ಕಾತೂರ್, ಎನ್.ಎಂ.ನಂದಿಕಟ್ಟಿ, ಕೆಂಜೋಡಿ ಗಲಬಿ, ಮಂಜುನಾಥ್ ನಡಿಗೇರ್, ಮಂಜುನಾಥ್ ಗಣೇಶಪುರ, ಗುಡ್ಡಪ್ಪ ಸುಣಗಾರ, ಸುನಿಲ್ ಲಮಾಣಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಬಳಿ ಸ್ಕೂಟಿ ಸ್ಕಿಡ್ ಆಗಿ ಬಿದ್ದ ಯುವಕನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ ಬೈಕ್ ಅಪಘಾತವಾಗಿದೆ. ಸ್ಕೂಟಿ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇಂದೂರು ಗ್ರಾಮದ ರಾಹುಲ್ ಎಂಬುವವನೇ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾನೆ. ಸ್ಕೂಟಿಯಿಂದ ಬರುವಾಗ ಏಕಾಏಕಿ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಘಟನೆ ನಡೆದಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಡಗೋಡ ತಹಶೀಲ್ದಾರ್ ಬಂಧನವಾಗ್ತಾರಾ..? ಅಷ್ಟಕ್ಕೂ ಪೊಲೀಸ್ರು ತಹಶೀಲ್ದಾರ್ ಮನೆ ಮುಂದೆ ಠಿಕಾಣಿ ಹೂಡಿದ್ಯಾಕೆ..?
ಮುಂಡಗೋಡಿನ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಂಕಷ್ಟಕ್ಕೆ ಸಿಲುಕಿದ್ರಾ..? ನಕಲಿ ಜಾತಿ ಪ್ರಮಾಣ ಪತ್ರ ನೀಡಿ ತಹಸೀಲ್ದಾರ್ ಪದವಿ ಗಿಟ್ಟಿಸಿಕೊಂಡಿರೋ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಂಧನಕ್ಕೆ..? ಕಲಬುರ್ಗಿಯಿಂದ ಪೊಲೀಸ್ ಅಧಿಕಾರಿಗಳು ಮದ್ಯರಾತ್ರಿಯೇ ಮುಂಡಗೋಡಿಗೆ ಬಂದಿಳಿದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಪೊಲೀಸ್ ಅಧಿಕಾರಿಗಳು ಬಂದು ಬಾಗಿಲು ಬಡಿದ್ರೂ ತಹಶೀಲ್ದಾರ್ ಸಾಹೇಬ್ರು ಮಾತ್ರ ಬಾಗಿಲು ತೆರೆಯುತ್ತಿಲ್ಲವಂತೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಬೆಳಗಿನ ಮೂರು ಗಂಟೆಯಿಂದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ಸರ್ಕಾರಿ ನಿವಾಸದ ಎದುರು ಬೀಡು ಬಿಟ್ಟಿದ್ದಾರೆ. ಏನದು ಕೇಸ್..? ಅಂದಹಾಗೆ, ಕಳೆದ ಎರಡೂವರೇ ವರ್ಷದಿಂದ ಮುಂಡಗೋಡಿನ ತಹಶೀಲ್ದಾರ್ ಕಚೇರಿ ಖುರ್ಚಿಗೆ ಬಂದಿಳಿದಿರೋ ಶ್ರೀಧರ್ ಮುಂದಲಮನಿ, 2014 ಕೆಎಎಸ್ ಬ್ಯಾಚ್ ನ ಅಧಿಕಾರಿ. ಅದ್ರೆ, ಹಾಗೆ ಆಯ್ಕೆಯಾಗುವಾಗ ಎಸ್ಟಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದಾರೆ, ಆದ್ರೆ ಅವತ್ತು ಅವ್ರಯ ನೀಡಿರೋ ಪ್ರಮಾಣ ಪತ್ರ, ನಕಲಿ ಪ್ರಮಾಣ ಪತ್ರ ಅನ್ನೊ ಆರೋಪ ಕೇಳಿ ಬಂದಿದೆ. ಈ ಕುರಿತು ಈಗಾಗಲೇ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪೊಲೀಸ್...
ನಂದಿಕಟ್ಟಾ ಗ್ರಾಪಂ ಗೆ ಕೆಂದಲಗೇರಿ ಗ್ರಾಮಸ್ಥರ ಮುತ್ತಿಗೆ, ಯಾಕೆ ಗೊತ್ತಾ..?
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಇಂದು ಕೆಂದಲಗೇರಿ ಗ್ರಾಮಸ್ಥರು ಮುತ್ತಿಗೆ ಹಾಕಿದ್ರು. ಕೆಂದಲೆಗೇರಿ ಗ್ರಾಮದ ಅಂಗನವಾಡಿ ಕಟ್ಟಡದ ಜಾಗದಲ್ಲಿ ಓರ್ವರು ಮನೆ ಕಟ್ಟಿಕೊಂಡು ಅಂಗನವಾಡಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ, ಅವ್ರನ್ನು ಆ ಜಾಗದಿಂದ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ರು. ಘಟನೆ ಏನು..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂದಲಗೇರಿ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ ಇದೆ. ಅಲ್ಲಿ ನಿತ್ಯವೂ ನೂರಾರು ಪುಟ್ಟ ಪುಟ್ಟ ಮಕ್ಕಳು ಬರುತ್ತಾರೆ. ಅದ್ರೆ, ಅಂಗನವಾಡಿ ಪಕ್ಕದಲ್ಲೇ ವಾಸವಾಗಿರುವ ನೀಲವ್ವ ಸುಣಗಾರ ಎಂಬುವ ಮಹಿಳೆ ತನ್ನ ಮನೆಯ ಜಾಗ ಹೊರತು ಪಡಿಸಿ ಅಂಗನವಾಡಿ ಜಾಗೆಯನ್ನೂ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡಿದ್ದು ನಿತ್ಯವೂ ಕಿರಿಕಿರಿ ಮಾಡುತ್ತಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಮಕ್ಕಳಿಗೂ ಕಿರಿಕಿರಿ..! ಇನ್ನು, ನಿತ್ಯವೂ ಅಂಗನವಾಡಿಯ ಪುಟ್ಟ ಮಕ್ಕಳಿಗೆ ಅಂಗನವಾಡಿ ಅಂಗಳದಲ್ಲಿ ಆಟವಾಡಲೂ ಬಿಡದೇ ನಿತ್ಯವೂ ಕಿರಿಕಿರಿ ಮಾಡುತ್ತಿರೋದು ಗ್ರಾಮಸ್ಥರಿಗೆ ತಲೆನೋವಾಗಿದ್ದು, ಸಾಕಷ್ಟು ಬಾರಿ ಆ ಮಹಿಳೆಗೆ ತಿಳಿಸಿ ಹೇಳಿದ್ರೂ ಯಾರಿಗೂ ಆ ಮಹಿಳೆ ಕ್ಯಾರೇ ಅನ್ನುತ್ತಿಲ್ಲ. ಅಲ್ಲದೇ ನಿನ್ನೆಯಷ್ಟೇ,...
ವಿ.ಎಸ್.ಪಾಟೀಲರಿಂದ ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷ ಸಿದ್ದು ಹಡಪದಗೆ ಸನ್ಮಾನ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಇಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್, ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರೋ ಸಿದ್ದಪ್ಪ ಹಡಪದರಿಗೆ ಸನ್ಮಾನಿಸಿದ್ರು. ಹುನಗುಂದದ ಸಿದ್ದಪ್ಪ ಹಡಪದ ನಿವಾಸಕ್ಕೆ ತೆರಳಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಶುಭಾಶಯ ಕೋರಿದ್ರು. ಈ ವೇಳೆ ಮಾತನಾಡಿದ ಅವ್ರು, ಸಮಾಜದ ಉನ್ನತಿಗಾಗಿ ಶ್ರಮಿಸುವಂತೆ ಕರೆ ನೀಡಿದ್ರು. ಅಲ್ಲದೆ, ಒಂದು ಸಮಾಜದ ರಾಜ್ಯಾಧ್ಯಕ್ಷರಾಗುವುದು ಸಾಧನೆ ಆಗಿದೆ. ಶ್ರಮಕ್ಕೆ ಸಂದ ಪ್ರತಿಫಲ ಇದು ಅಂತ ಹಡಪದ್ ರವರಿಗೆ ಶುಭಾಶಯ ಕೋರಿದ್ರು. ಈ ಸಂದರ್ಭದಲ್ಲಿ ಗ್ರಾಮದ ಹಲವು ಮುಖಂಡರು ವಿ.ಎಸ್.ಪಾಟೀಲರಿಗೆ ಸಾಥ್ ನೀಡಿದ್ರು.
ಡಿಸೇಲ್ ದರ ಹೆಚ್ಚಳವಾದ್ರೂ ಬಸ್ ದರ ಹೆಚ್ಚಳವಿಲ್ಲ- ಖಾಸಗಿ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಚಿಂತನೆ- ವಿ.ಎಸ್.ಪಾಟೀಲ್
ಮುಂಡಗೋಡ: ಡಿಸೇಲ್ ದರ ಸಗಟು ಖರೀದಿದಾರರಿಗೆ ಪ್ರತೀ ಲೀಟರ್ ಗೆ 25 ರೂ. ಏರಿಕೆಯಾಗಿದೆ, ಇದ್ರಿಂದ ನಿಗಮಗಳಿಗೆ ಸಾಕಷ್ಟು ಹೊರೆಯಾಗಿದೆ ಆದ್ರೂ ಸಾರಿಗೆ ಬಸ್ ಟಿಕೇಟ್ ದರ ಹೆಚ್ಚಳ ಮಾಡಲ್ಲ, ಅಂತಾ ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದ್ರು. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವ್ರು, ಕೊರೋನಾ ಸಂದರ್ಭದಲ್ಲಿನ ಹಾನಿಯಿಂದ ಅದೇಷ್ಟೋ ನಿಗಮಗಳು ತೀವ್ರ ಸಂಕಷ್ಟದಲ್ಲಿವೆ. ಈ ಮದ್ಯೆ ಮತ್ತೆ ಸದ್ಯ ಡಿಸೆಲ್ ದರ ಹೆಚ್ಚಳವಾಗಿದ್ದು ಅದನ್ನ ನೀಗಿಸಲು ನಿಗಮಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ, ನಾಳೆ ಬುಧವಾರ ನಾಲ್ಕೂ ನಿಗಮಗಳ ಅಧ್ಯಕ್ಷರುಗಳು ಸಿಎಂ ಅವ್ರನ್ನ ಭೇಟಿ ಮಾಡಲಿದ್ದೇವೆ. ನಮಗೆ ಖಾಸಗೀ ಪೆಟ್ರೊಲ್ ಬಂಕ್ ಗಳಿಂದಲೇ ಡಿಸೇಲ್ ಖರೀಧಿಸಲು ಅನುಮತಿಗಾಗಿ ಕೇಳುತ್ತಿದ್ದೇವೆ. ಆಯಾ ಡಿಪೋಗಳ ಹತ್ತಿರದಲ್ಲಿರೋ ಪೆಟ್ರೋಲ್ ಬಂಕ್ ಗಳಲ್ಲೇ ಡಿಸೇಲ್ ಖರೀದಿಸಲು ಚಿಂತನೆ ನಡೆಸಲಾಗಿದೆ. ಸಿಎಂ ಒಪ್ಪಿಗೆ ನೀಡುವ ಭರವಸೆ ಇದೆ.. ಈ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ನಾಳೆ ಮದ್ಯಾಹ್ನ ಒಂದೂವರೆಗೆ...
ಮುಂಡಗೋಡ ತಾಲೂಕಿನ ಹಲವೆಡೆ ಭಾರೀ ಮಳೆ..!
ಮುಂಡಗೋಡ: ತಾಲೂಕಿನ ಹುನಗುಂದ,ಇಂದೂರು ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಭಾರೀ ಗಾಳಿ..! ಸಂಜೆ ನಾಲ್ಕೂವರೆ ಅಷ್ಟೊತ್ತಿಗೆ ಶುರುವಾದ ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ಪರಿಣಾಮ ಗಿಡ ಮರಗಳ ಟೊಂಗೆಗಳು ಎಲ್ಲೆಲ್ಲೂ ಮುರಿದು ಬಿದ್ದಿದೆ. ಉರುಳಿದ ಮರ..! ಶಿರಸಿ ರಸ್ತೆಯಲ್ಲಿ ಮರಬಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಎಂದಿನಂತೆ ಶುರುವಾಯ್ತು.
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..!
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..! ಮುಂಡಗೋಡ: ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಪುರೋಹಿತ ಘಟಕ ವತಿಯಿಂದ ಶ್ರೀಮದ್ ವೀರಶೈವ ಧರ್ಮದ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪುರೋಹಿತ ಘಟಕದ ಅಧ್ಯಕ್ಷ, ವೇ. ಪವನ್ ಕುಮಾರ್ ಶಾಸ್ತ್ರಿಗಳು ಕೋರಿಮಠ, ಸಾಕಿನ ಮಳವಳ್ಳಿ, ಉಪಾಧ್ಯಕ್ಷರಾದ ವೇ. ಬಸಯ್ಯ ಶಾಸ್ತ್ರಿಗಳು ತೋಟಯ್ಯನವರು ಸಾ, ಹುನುಗುಂದ, ಮೃತ್ಯುಂಜಯ ಶಾಸ್ತ್ರಿಗಳು ಹಿರೇಮಠ್, ಸನವಳ್ಳಿ, ವೇ. ರೇಣುಕಯ್ಯ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರು.