ಮುಂಡಗೋಡ: ಡಿಸೇಲ್ ದರ ಸಗಟು ಖರೀದಿದಾರರಿಗೆ ಪ್ರತೀ ಲೀಟರ್ ಗೆ 25 ರೂ. ಏರಿಕೆಯಾಗಿದೆ, ಇದ್ರಿಂದ ನಿಗಮಗಳಿಗೆ ಸಾಕಷ್ಟು ಹೊರೆಯಾಗಿದೆ ಆದ್ರೂ ಸಾರಿಗೆ ಬಸ್ ಟಿಕೇಟ್ ದರ ಹೆಚ್ಚಳ ಮಾಡಲ್ಲ, ಅಂತಾ ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದ್ರು‌.

ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವ್ರು, ಕೊರೋನಾ ಸಂದರ್ಭದಲ್ಲಿ‌ನ ಹಾನಿಯಿಂದ ಅದೇಷ್ಟೋ ನಿಗಮಗಳು ತೀವ್ರ ಸಂಕಷ್ಟದಲ್ಲಿವೆ. ಈ ಮದ್ಯೆ ಮತ್ತೆ ಸದ್ಯ ಡಿಸೆಲ್ ದರ ಹೆಚ್ಚಳವಾಗಿದ್ದು ಅದನ್ನ ನೀಗಿಸಲು ನಿಗಮಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ, ನಾಳೆ ಬುಧವಾರ ನಾಲ್ಕೂ ನಿಗಮಗಳ ಅಧ್ಯಕ್ಷರುಗಳು ಸಿಎಂ ಅವ್ರನ್ನ ಭೇಟಿ ಮಾಡಲಿದ್ದೇವೆ. ನಮಗೆ ಖಾಸಗೀ ಪೆಟ್ರೊಲ್ ಬಂಕ್ ಗಳಿಂದಲೇ ಡಿಸೇಲ್ ಖರೀಧಿಸಲು ಅನುಮತಿಗಾಗಿ ಕೇಳುತ್ತಿದ್ದೇವೆ‌. ಆಯಾ ಡಿಪೋಗಳ ಹತ್ತಿರದಲ್ಲಿರೋ ಪೆಟ್ರೋಲ್ ಬಂಕ್ ಗಳಲ್ಲೇ ಡಿಸೇಲ್ ಖರೀದಿಸಲು ಚಿಂತನೆ ನಡೆಸಲಾಗಿದೆ. ಸಿಎಂ ಒಪ್ಪಿಗೆ ನೀಡುವ ಭರವಸೆ ಇದೆ‌.. ಈ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ನಾಳೆ‌ ಮದ್ಯಾಹ್ನ ಒಂದೂವರೆಗೆ ಸಿಎಂ ಭೇಟಿಗೆ ಸಮಯ ನಿಗದಿ ಪಡಿಸಲಾಗಿದೆ ಅ‌ಂತಾ ವಿ.ಎಸ್.ಪಾಟೀಲ್ ಮಾಹಿತಿ ನೀಡಿದ್ರು.

error: Content is protected !!