ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಇಂದು ಕೆಂದಲಗೇರಿ ಗ್ರಾಮಸ್ಥರು ಮುತ್ತಿಗೆ ಹಾಕಿದ್ರು. ಕೆಂದಲೆಗೇರಿ ಗ್ರಾಮದ ಅಂಗನವಾಡಿ ಕಟ್ಟಡದ ಜಾಗದಲ್ಲಿ ಓರ್ವರು ಮನೆ ಕಟ್ಟಿಕೊಂಡು ಅಂಗನವಾಡಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ, ಅವ್ರನ್ನು ಆ ಜಾಗದಿಂದ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ರು.
ಘಟನೆ ಏನು..?
ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂದಲಗೇರಿ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ ಇದೆ. ಅಲ್ಲಿ ನಿತ್ಯವೂ ನೂರಾರು ಪುಟ್ಟ ಪುಟ್ಟ ಮಕ್ಕಳು ಬರುತ್ತಾರೆ. ಅದ್ರೆ, ಅಂಗನವಾಡಿ ಪಕ್ಕದಲ್ಲೇ ವಾಸವಾಗಿರುವ ನೀಲವ್ವ ಸುಣಗಾರ ಎಂಬುವ ಮಹಿಳೆ ತನ್ನ ಮನೆಯ ಜಾಗ ಹೊರತು ಪಡಿಸಿ ಅಂಗನವಾಡಿ ಜಾಗೆಯನ್ನೂ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡಿದ್ದು ನಿತ್ಯವೂ ಕಿರಿಕಿರಿ ಮಾಡುತ್ತಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಮಕ್ಕಳಿಗೂ ಕಿರಿಕಿರಿ..!
ಇನ್ನು, ನಿತ್ಯವೂ ಅಂಗನವಾಡಿಯ ಪುಟ್ಟ ಮಕ್ಕಳಿಗೆ ಅಂಗನವಾಡಿ ಅಂಗಳದಲ್ಲಿ ಆಟವಾಡಲೂ ಬಿಡದೇ ನಿತ್ಯವೂ ಕಿರಿಕಿರಿ ಮಾಡುತ್ತಿರೋದು ಗ್ರಾಮಸ್ಥರಿಗೆ ತಲೆನೋವಾಗಿದ್ದು, ಸಾಕಷ್ಟು ಬಾರಿ ಆ ಮಹಿಳೆಗೆ ತಿಳಿಸಿ ಹೇಳಿದ್ರೂ ಯಾರಿಗೂ ಆ ಮಹಿಳೆ ಕ್ಯಾರೇ ಅನ್ನುತ್ತಿಲ್ಲ. ಅಲ್ಲದೇ ನಿನ್ನೆಯಷ್ಟೇ, ಅಂಗನವಾಡಿ ಕಾರ್ಯಕರ್ತರಿಗೆ ಆ ಮಹಿಳೆ ಧಮ್ಕಿ ಹಾಕಿದ್ದಾಳೆ ಅಂತಾ ಆರೋಪಿಸಲಾಗಿದ್ದು, ಈ ಕಾರಾಣಕ್ಕಾಗಿ ಇಂದು ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ಆ ಮಹಿಳೆಯನ್ನು ಅಂಗನವಾಡಿ ಜಾಗೆಯಿಂದ ಖುಲ್ಲಾ ಪಡಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಗೆ ದೂರು..!
ಯಾವಾಗ, ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಕೆಂದಲಗೇರಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ರೊ ಆವಾಗ ನಂದಿಕಟ್ಟಾ ಪಿಡಿಓರವರು, ಮುಂಡಗೋಡ ತಹಶೀಲ್ದಾರರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಂಜೆಯೊಳಗಾಗಿ ಕೆಂದಲೆಗೇರಿ ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ನಂತರವಷ್ಟೇ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಹೀಗಾಗಿ, ಸದ್ಯ ಸಂಜೆಯೊಳಗಾಗಿ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದ್ದು, ಗ್ರಾಮಸ್ಥರು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.