ಮುಂಡಗೋಡ: ತಾಲೂಕಿನ ಹುನಗುಂದ,ಇಂದೂರು ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ.
ಭಾರೀ ಗಾಳಿ..!
ಸಂಜೆ ನಾಲ್ಕೂವರೆ ಅಷ್ಟೊತ್ತಿಗೆ ಶುರುವಾದ ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ಪರಿಣಾಮ ಗಿಡ ಮರಗಳ ಟೊಂಗೆಗಳು ಎಲ್ಲೆಲ್ಲೂ ಮುರಿದು ಬಿದ್ದಿದೆ.
ಉರುಳಿದ ಮರ..!
ಶಿರಸಿ ರಸ್ತೆಯಲ್ಲಿ ಮರಬಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಎಂದಿನಂತೆ ಶುರುವಾಯ್ತು.