ಮುಂಡಗೋಡಿನ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಂಕಷ್ಟಕ್ಕೆ ಸಿಲುಕಿದ್ರಾ..? ನಕಲಿ ಜಾತಿ ಪ್ರಮಾಣ ಪತ್ರ ನೀಡಿ ತಹಸೀಲ್ದಾರ್ ಪದವಿ ಗಿಟ್ಟಿಸಿಕೊಂಡಿರೋ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಂಧನಕ್ಕೆ..? ಕಲಬುರ್ಗಿಯಿಂದ ಪೊಲೀಸ್ ಅಧಿಕಾರಿಗಳು ಮದ್ಯರಾತ್ರಿಯೇ ಮುಂಡಗೋಡಿಗೆ ಬಂದಿಳಿದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಆದ್ರೆ, ಪೊಲೀಸ್ ಅಧಿಕಾರಿಗಳು ಬಂದು ಬಾಗಿಲು ಬಡಿದ್ರೂ ತಹಶೀಲ್ದಾರ್ ಸಾಹೇಬ್ರು ಮಾತ್ರ ಬಾಗಿಲು ತೆರೆಯುತ್ತಿಲ್ಲವಂತೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಬೆಳಗಿನ ಮೂರು ಗಂಟೆಯಿಂದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ಸರ್ಕಾರಿ ನಿವಾಸದ ಎದುರು ಬೀಡು ಬಿಟ್ಟಿದ್ದಾರೆ.
ಏನದು ಕೇಸ್..?
ಅಂದಹಾಗೆ, ಕಳೆದ ಎರಡೂವರೇ ವರ್ಷದಿಂದ ಮುಂಡಗೋಡಿನ ತಹಶೀಲ್ದಾರ್ ಕಚೇರಿ ಖುರ್ಚಿಗೆ ಬಂದಿಳಿದಿರೋ ಶ್ರೀಧರ್ ಮುಂದಲಮನಿ, 2014 ಕೆಎಎಸ್ ಬ್ಯಾಚ್ ನ ಅಧಿಕಾರಿ. ಅದ್ರೆ, ಹಾಗೆ ಆಯ್ಕೆಯಾಗುವಾಗ ಎಸ್ಟಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದಾರೆ, ಆದ್ರೆ ಅವತ್ತು ಅವ್ರಯ ನೀಡಿರೋ ಪ್ರಮಾಣ ಪತ್ರ, ನಕಲಿ ಪ್ರಮಾಣ ಪತ್ರ ಅನ್ನೊ ಆರೋಪ ಕೇಳಿ ಬಂದಿದೆ. ಈ ಕುರಿತು ಈಗಾಗಲೇ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದಿನಾಂಕ: 12.2.2022 ರಂದು ಗಿರೀಶ್ ರೋಡಕರ್ ಎನ್ನುವವರು ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬೆಳಗಿನ ಮೂರು ಗಂಟೆಯ ಹೊತ್ತಿಗೆ ಕಲಬುರ್ಗಿಯ ಸಿಆರ್ ಸೆಲ್ ನ ಎಸ್ಪಿ ರಶ್ಮಿ ಯವರು, ತಮ್ಮನಾಲ್ವರು ಅಧಿಕಾರಿಗಳೊಂದಿಗೆ ಮುಂಡಗೋಡಿಗೆ ಬಂದಿಳಿದಿದ್ದಾರೆ.
ಹೊರಗೇ ಬರುತ್ತಿಲ್ಲ ಸಾಹೇಬ್ರು..!
ಅಸಲು, ಬೆಳಗಿನ ಮೂರು ಗಂಟೆಯ ಹೊತ್ತಿಗೆ ಎಸ್ಪಿ ಮೇಡಂ ತಹಶೀಲ್ದಾರ್ ಮನೆಯ ಬಾಗಿಲು ಬಡೆದರೂ ಒಳಗಡೆಯೇ ಇದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಾಹೇಬ್ರು ಬಾಗಿಲು ತೆರೆದಿಲ್ಲವಂತೆ, ಹೀಗಾಗಿ, ತಮ್ಮ ಸಿಬ್ಬಂದಿಗಳೊಂದಿಗೆ ಮನೆಯ ಹಿಂದೆ ಹಾಗೂ ಮುಂದೆ ಎಸ್ಪಿ ಮೇಡಂ ಠಿಕಾಣಿ ಹೂಡಿ ಕಾಯುತ್ತಿದ್ದಾರೆ. ಮುಂದೆ ಏನಾಗತ್ತೊ ಕಾದು ನೋಡಬೇಕಿದೆ.