ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಇಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್, ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರೋ ಸಿದ್ದಪ್ಪ ಹಡಪದರಿಗೆ ಸನ್ಮಾನಿಸಿದ್ರು.

ಹುನಗುಂದದ ಸಿದ್ದಪ್ಪ ಹಡಪದ ನಿವಾಸಕ್ಕೆ ತೆರಳಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಶುಭಾಶಯ ಕೋರಿದ್ರು. ಈ ವೇಳೆ ಮಾತನಾಡಿದ ಅವ್ರು, ಸಮಾಜದ ಉನ್ನತಿಗಾಗಿ ಶ್ರಮಿಸುವಂತೆ ಕರೆ ನೀಡಿದ್ರು. ಅಲ್ಲದೆ, ಒಂದು ಸಮಾಜದ ರಾಜ್ಯಾಧ್ಯಕ್ಷರಾಗುವುದು ಸಾಧನೆ ಆಗಿದೆ. ಶ್ರಮಕ್ಕೆ ಸಂದ ಪ್ರತಿಫಲ ಇದು ಅಂತ ಹಡಪದ್ ರವರಿಗೆ ಶುಭಾಶಯ ಕೋರಿದ್ರು. ಈ ಸಂದರ್ಭದಲ್ಲಿ ಗ್ರಾಮದ ಹಲವು ಮುಖಂಡರು ವಿ.ಎಸ್.ಪಾಟೀಲರಿಗೆ ಸಾಥ್ ‌ನೀಡಿದ್ರು.

error: Content is protected !!